ಆಂಬ್ಯುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಡಿ ಗ್ರಾಮದಲ್ಲಿ ಸುಮಾರು 4000 ದಿಂದ 4500 ಜನಸಂಖ್ಯೆ ಹೊಂದಿರುವ ಗ್ರಾಮ ಮತ್ತು ಅತ್ಯಂತ ಪುರಾತನ ಇತಿಹಾಸ ಸಹ ಇದೆ. ಇದು ಹುಬ್ಬಳ್ಳಿ ಹಾಗೂ ಕುಂದಗೋಳ ಮಧ್ಯಭಾಗದಲ್ಲಿರುವ ಗ್ರಾಮ. ‌ಆದರೆ ಈ ಗ್ರಾಮದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. 

Written by - Yashaswini V | Last Updated : May 26, 2023, 12:54 PM IST
  • ಸುಮಾರು 4000 ದಿಂದ 4500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಒಂದು ಪ್ರಾಥಮಿಕ ಕೇಂದ್ರವೂ ಇಲ್ಲ!
  • ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಾಗ ನೀಡಿದ್ದರೂ ಇಲ್ಲ ಕಟ್ಟಡ ಭಾಗ್ಯ
  • ಆಂಬ್ಯುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ
ಆಂಬ್ಯುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ title=

ಹೆರಿಗೆಗೆಂದು ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಅಂಬುಲನ್ಸನಲ್ಲೇ ಮಹಿಳೆ ಮಗುವಿಗೆ ಜನ್ಮ‌ ನೀಡಿದ ಪ್ರಸಂಗ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಡಿ ಗ್ರಾಮದ ಆಫ್ರೀನ್ ಎಂಬುವವಳಿಗೆನೇ ಅಂಬುಲೆನ್ಸ್ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ. 
 
ವಾಸ್ತವವಾಗಿ ಇಂದು ಬೆಳಿಗ್ಗೆ  ಗುಡೆನಕಟ್ಟಿ ಗ್ರಾಮದ ಆಫ್ರೀನ್ ಎಂಬಾಕೆಗೆ ಹೆರಿಗೆ ನೋವು ಆರಂಭವಾಗಿತ್ತು.‌ ತಕ್ಷಣವೇ ಕುಟುಂಬದವರು108ಗೆ ಕರೆ ಮಾಡಿದ್ದಾರೆ. 108 ಸಿಬ್ಬಂದಿಗಳು ಕುಂದಗೋಳ ತಾಲೂಕಾ ಆಸ್ಪತ್ರೆಗೆ ರವಾನಿಸುತ್ತುದ್ದಾಗಲೇ ಮಹಿಳೆಗೆ ಹೆರಿಗೆ ನೋವು ಜೋರಾಗಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಅಶೋಕ‌ ಪೂಜಾರ, ಬಸವರಾಜ ರಾಠೋಡ ಎಂಬ ಅಂಬುಲೆನ್ಸ್ ಸಿಬ್ಬಂದಿ ಅಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿ‌‌‌‌ ಚಿಕಿತ್ಸೆ ನೀಡಲಾಗುತ್ತಿದೆ. 

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಡಿ ಗ್ರಾಮದಲ್ಲಿ ಸುಮಾರು 4000 ದಿಂದ 4500 ಜನಸಂಖ್ಯೆ ಹೊಂದಿರುವ ಗ್ರಾಮ ಮತ್ತು ಅತ್ಯಂತ ಪುರಾತನ ಇತಿಹಾಸ ಸಹ ಇದೆ. ಇದು ಹುಬ್ಬಳ್ಳಿ ಹಾಗೂ ಕುಂದಗೋಳ ಮಧ್ಯಭಾಗದಲ್ಲಿರುವ ಗ್ರಾಮ. ‌ಆದರೆ ಈ ಗ್ರಾಮದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಇದರಿಂದಾಗಿ ಜನರು ಪಡಬಾರದ ಕಷ್ಟ ಪಡುತಿದ್ದಾರೆ. ಈ ನಡುವೆ  ತೀವ್ರ ಹೆರಿಗೆ ನೋವಿನಿಂದ ಬಳಲುತಿದ್ದ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಅಂಬುಲನ್ಸ್ ನಲ್ಲಿಯೇ ಹೆರಿಗೆಯಾದ ಘಟನೆ ಸ್ಥಳೀಯರಲ್ಲಿ ಅಸಮಾಧಾನಕ್ಕೆ‌ ಕಾರಣವಾಗಿದೆ‌.

ಇದನ್ನೂ ಓದಿ- ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ 48 ಗಂಟೆ ಗುಡುಗು ಸಹಿತ ಭಾರೀ ಮಳೆ.!!

ಇನ್ನು ಈ ಗ್ರಾಮದಲ್ಲಿ ಜನರಿಗೆ ಆರೋಗ್ಯ ಸಮಸ್ಯೆ ಆದರೆ ಇಲ್ಲಿನ ಜನರು ಕುಂದಗೋಳ ಅಥವಾ ಹುಬ್ಬಳ್ಳಿಗೆ ಹೋಗಬೇಕು. ಅನೇಕ ಸಲ ಸಾಂಕ್ರಾಮಿಕ ರೋಗ ಸೇರಿದಂತೆ ಮಾರಕ ಕಾಯಿಲೆಯಿಂದ ಬಳಲುತಿದ್ದ ಇಲ್ಲಿನ ಜನರು ಸರಿಯಾದ ಆಸ್ಪತ್ರೆ ಹಾಗೂ ಸಮಯಕ್ಕೆ ಸರಿಯಾಗಿ ವೈದ್ಯರು ಸಿಗದೇ ಇರುವ ಕಾರಣ ಪಡಬಾರದ ಕಷ್ಟ ಪಟ್ಟಿದ್ದಾರೆ. ಇನ್ನು ಸೂಕ್ತ ಚಿಕಿತ್ಸೆ ಸಿಗದೇ ಕೇಲವರು ಅಸುನೀಗಿರುವ ಉದಾಹರಣೆಗಳು ಸಹ ಇವೆ. ಆದ್ದರಿಂದ ಗ್ರಾಮ ಪಂಚಾಯತಿ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಆರೋಗ್ಯ ಇಲಾಖೆಗೆ ಜಾಗ ಸಹ ನೀಡಲಾಗಿದೆ. ಆದಾಗ್ಯೂ, ಸಂಬಂಧ ಪಟ್ಟವರು ಮಾತ್ರ ಇದುವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ನಿರ್ಮಾಣ ಗೋಜಿಗೂ ಕೂಡ ಹೋಗ್ತಾ ಇಲ್ಲ. 

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಗ್ರಾಮದ ಹಿರಿಯರು ಹಾಗೂ ಸಾಮಾಜಿಕ ಕಾರ್ಯಕರ್ತ ಬಸವರಾಜ ಯೊಗಪ್ಪನವರ ಕೂಡಲೇ ನಾವು ಕೊಟ್ಟ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಬೇಕು ಎಂದು  ಆಗ್ರಹಿಸಿದ್ದಾರೆ. 

ಇದನ್ನೂ ಓದಿ- ಮಹಿಳಾ ಕೆಎಎಸ್ ಅಧಿಕಾರಿಗೆ ಸಹೋದರನಿಂದಲೇ ಜೀವ ಬೆದರಿಕೆ..!

ಈ ಬಗ್ಗೆ ಜೀ ನ್ಯೂಸ್ ಕನ್ನಡ ಸುದ್ದಿಗಾರರೊಂದಿಗೆ ಮಾತನಾಡಿರುವ ಬಸವರಾಜ ಯೋಗಪ್ಪನವರ, ತೀವ್ರ ಹೆರಿಗೆ ನೋವಿನಿಂದ ಬಳಲುತಿದ್ದ ಮಹಿಳೆಗೆ ಅಂಬುಲೆನ್ಸ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಅಂಬುಲನ್ಸ್ ನಲ್ಲಿಯೇ   ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  108 ಸಿಬ್ಬಂದಿಗಳಾದ ಅಶೋಕ ಪೂಜಾರ ಮತ್ತು ಬಸವರಾಜ್ ರಾಥೋಠ  ಅವರ ಕಾರ್ಯ ಮೆಚ್ಚಲೇಬೇಕು. ಅವರ ಸಮಯ ಚೆನ್ನಾಗಿತ್ತು, ಹಾಗಾಗಿ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಆದರೆ, ಈ ರೀತಿಯ ಅಪಾಯಕಾರಿ ಸನ್ನಿವೇಶಗಳನ್ನು ತಪ್ಪಿಸುವ ಅವಶ್ಯಕತೆ ಇದ್ದು, ಇನ್ನಾದರು ಸಂಬಂಧಿಸಿದ ಅಧಿಕಾರಿಗಳು ಎಚ್ಚೇತ್ತುಕೊಳ್ಳಬೇಕಾಗಿದೆ ಎಂದಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News