ಸರ್ಕಾರ ಆರೋಪಿಗಳನ್ನು ರಕ್ಷಿಸುವ ಅನುಮಾನ ಮೂಡುತ್ತಿದೆ : ಬಸವರಾಜ ಬೊಮ್ಮಾಯಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾಮ ಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ  ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ  ಪ್ರತಿಭಟನಾ ಧರಣಿ ನಡೆಸಿದರು.

Written by - Manjunath N | Last Updated : Jul 11, 2023, 09:15 PM IST
  • ಜೈನ ಮುನಿ ಹತ್ಯೆ ಪ್ರಕರಣದ ಕುರಿತು ಶೂನ್ಯ ವೇಳೆಯಲ್ಲಿ ನಡೆದ ಚರ್ಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನೀಡಿದ ಉತ್ತರ ಖಂಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.
  • ಧರಣಿಗೂ ಮೊದಲು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೈನ ಮುನಿ ಕೊಲೆಗೂ ಬೇರೆ ಕೊಲೆಗೂ ಹೋಲಿಕೆ ಮಾಡುವುದು ಸರಿಯಲ್ಲ.
  • ಯಾರಿಗೂ ಹಿಂಸೆ ಬಯಸದ ಜೈನ ಮುನಿಗಳನ್ನು ಕರೆಂಟ್ ಶಾಕ್ ಕೊಟ್ಟು ಹತ್ತೆ ಮಾಡಿರಬೇಕೆಂದರೆ ಇದರ ಹಿಂದೆ ಷಡ್ಯಂತರ ಇದೆ‌.
ಸರ್ಕಾರ ಆರೋಪಿಗಳನ್ನು ರಕ್ಷಿಸುವ ಅನುಮಾನ ಮೂಡುತ್ತಿದೆ : ಬಸವರಾಜ ಬೊಮ್ಮಾಯಿ title=
file photo

ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾಮ ಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ  ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ  ಪ್ರತಿಭಟನಾ ಧರಣಿ ನಡೆಸಿದರು.

ಜೈನ ಮುನಿ ಹತ್ಯೆ ಪ್ರಕರಣದ ಕುರಿತು ಶೂನ್ಯ ವೇಳೆಯಲ್ಲಿ ನಡೆದ ಚರ್ಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನೀಡಿದ ಉತ್ತರ ಖಂಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಧರಣಿಗೂ ಮೊದಲು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೈನ ಮುನಿ  ಕೊಲೆಗೂ ಬೇರೆ ಕೊಲೆಗೂ ಹೋಲಿಕೆ ಮಾಡುವುದು ಸರಿಯಲ್ಲ. ಯಾರಿಗೂ ಹಿಂಸೆ ಬಯಸದ ಜೈನ ಮುನಿಗಳನ್ನು ಕರೆಂಟ್ ಶಾಕ್ ಕೊಟ್ಟು ಹತ್ತೆ ಮಾಡಿರಬೇಕೆಂದರೆ ಇದರ ಹಿಂದೆ ಷಡ್ಯಂತರ ಇದೆ‌. ಈ ಪ್ರಕರಣದಲ್ಲಿ ಅವರು ಕೊಂದು ಇಷ್ಟೊಂದು ತುಂಡು ಮಾಡಿ ಕೊಳವೆ ಬಾವಿಯಲ್ಲಿ ಹಾಕುವಷ್ಟು ಸಮಯ ಇದ್ದರೆ ಅವರು ಎಷ್ಟು ಪೂರ್ವ ನಿಯೋಜಿತ ಯೋಜನೆ ರೂಪಿಸಿದ್ದರು ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಿದರು.

ಇದನ್ನೂ ಓದಿ: ಅನ್ನಕ್ಕೆ ಕಲ್ಲು ಹಾಕುವ ಕೇಂದ್ರ ಸರ್ಕಾರದ ಕುತಂತ್ರದ ಮಧ್ಯೆ ‘ಅನ್ನಭಾಗ್ಯ’ ಯೋಜನೆ ಜಾರಿ: ಕಾಂಗ್ರೆಸ್

ಈ ಪ್ರಕರಣದಲ್ಲಿ ಯಾರನ್ನೋ ರಕ್ಷಣೆ ಮಾಡುವ ಪ್ರಯತ್ನ‌ ನಡೆಸಿದ್ದೀರಿ ಎನ್ನುವ ಅನುಮಾನ ಮೂಡುತ್ತಿದೆ. ಪ್ರಕರಣವನ್ನು ಸಿಬಿಐಗೆ ಕೊಡುವುದರಿಂದ ರಾಜ್ಯ ಪೊಲಿಸರ ಘನತೆ ಏನು ಕಡಿಮೆ ಆಗುವುದಿಲ್ಲ. ಅನೇಕ ಪ್ರಕರಣಗಳನ್ನು ಹಿಂದೆ ಸಿಬಿಐಗೆ ಕೊಟ್ಟಿದ್ದಾರೆ. ಈ ಪ್ರಕರಣ ಸಿಬಿಐಗೆ ಕೊಡುವುದರಿಂದ ಏನು ಕಳೆದುಕೊಳ್ಳುವುದಿದೆ. ಸಿಬಿಐಗೆ ಕೊಡದಿದ್ದರೆ ಅನುಮಾನ ಹುಟ್ಟುತ್ತದೆ. ನೀವು ಸಿಪಿಐ, ಇನ್ಸ್ ಪೆಕ್ಟರ್ ನಿಂದ ತನಿಖೆ ಮಾಡಿಸಲು ಬಯಸುತ್ತಿದ್ದೀರಿ ಇದರ ವಿರುದ್ದ ಪ್ರತಿಭಟನೆ ನಡೆಸುತ್ತೇವೆ ಎಂದು ಸದನದ ಬಾವಿಗಿಳಿದು ಧರಣಿ ನಡೆಸಿದರು. 

ಆರೋಪಿಗಳ ಮೇಲೆ ಕ್ರಮಣಕ್ಕೆ ಆಗ್ರಹ:

ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ವೇಣುಗೋಪಾಲ ಎನ್ನುವ ವ್ಯಕ್ತಿಯನ್ನು  ಬರ್ಬರ ಹತ್ಯೆ ಮಾಡಲಾಗಿದೆ ಹಂತರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. 
ಹನುಮ ಜಯಂತಿ ಕಾರ್ಯಕ್ರಮದಲ್ಲಿ ಅವಕಾಶ ನೀಡಲಿಲ್ಲಿ ದೇವರ ಫೋಟೊ ಜಾಗದಲ್ಲಿ ಪುನಿತ್ ರಾಜಕುಮಾರ್ ಫೋಟೊ  ಇಡುವ ಕುರಿತು ಮಣಿಕಂಠ, ವೇಣುಗೋಪಾಲ ನಡುವೆ ಗಲಾಟೆಯಾಯಿತು. ಮಾರನೇ ದಿನ ಮಾತುಕತೆ ಮಾಡಲು ಕರೆಯಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೊಗುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಆನ್ ಲೈನ್ ಗೇಮಿಂಗ್ ಕಡಿವಾಣಕ್ಕೆ ಕ್ರಮ: ಸಚಿವ ದಿನೇಶ್ ಗುಂಡೂರಾವ್

ಇಷ್ಟು ಸಣ್ಣ ವಿಚಾರಕ್ಕೆ ಕೊಲೆಯಾಗಿದ್ದರೆ ಇದು ಆಘಾತಕಾರಿ , ಧಾರ್ಮಿಕ ಆಚರಣೆಗಳು ನಿರಂತರ ನಡೆಯುತ್ತವೆ. ಈ ರೀತಿಯ ಕೊಲೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಇದರಲ್ಲಿ ಯಾರೇ ಇದ್ದರೂ ಅವರ ವಿರುದ್ದ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. 
ಈ ರೀತಿಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಪೊಲಿಸರು ಇನ್ನೂ ಯಾರನ್ನೂ ಬಂಧಿಸಿಲ್ಲ. ಆದರೆ ಮೆಲಧಿಕಾರಿಗಳು ಆರೋಪಿಗಳ ಹೆಸರುಗಳನ್ನು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಸಕಲೇಶಪುರ, ಕಲಬುರ್ಗಿ, ನಂಜನಗೂಡಿನಲ್ಲಿ ಹಲವು ಪ್ರಕರಣಗಳು ನಡೆದಿವೆ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News