ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ-ಸದಾನಂದ ಗೌಡ

ಬಿ.ಎಸ್.ಯಡಿಯೂರಪ್ಪ ಸರ್ಕಾರವು ಕೊರೊನಾವನ್ನು ನಿಭಾಯಿಸುವುದರ ವಿಚಾರವಾಗಿ ಕೇಂದ್ರ ನಾಯಕತ್ವಕ್ಕೆ ತೃಪ್ತಿ ಇದೆ, ಸದ್ಯ ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಹಿರಿಯ ಬಿಜೆಪಿ ನಾಯಕ ಸದಾನಂದ ಗೌಡ ಹೇಳಿದ್ದಾರೆ.

Written by - Zee Kannada News Desk | Last Updated : Jul 21, 2021, 08:13 PM IST
  • ಬಿ.ಎಸ್.ಯಡಿಯೂರಪ್ಪ ಸರ್ಕಾರವು ಕೊರೊನಾವನ್ನು ನಿಭಾಯಿಸುವುದರ ವಿಚಾರವಾಗಿ ಕೇಂದ್ರ ನಾಯಕತ್ವಕ್ಕೆ ತೃಪ್ತಿ ಇದೆ
  • ಸದ್ಯ ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಹಿರಿಯ ಬಿಜೆಪಿ ನಾಯಕ ಸದಾನಂದ ಗೌಡ ಹೇಳಿದರು.
ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ-ಸದಾನಂದ ಗೌಡ  title=
ಸಂಗ್ರಹ ಚಿತ್ರ

ನವದೆಹಲಿ: ಬಿ.ಎಸ್.ಯಡಿಯೂರಪ್ಪ ಸರ್ಕಾರವು ಕೊರೊನಾವನ್ನು ನಿಭಾಯಿಸುವುದರ ವಿಚಾರವಾಗಿ ಕೇಂದ್ರ ನಾಯಕತ್ವಕ್ಕೆ ತೃಪ್ತಿ ಇದೆ, ಸದ್ಯ ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಹಿರಿಯ ಬಿಜೆಪಿ ನಾಯಕ ಸದಾನಂದ ಗೌಡ ಹೇಳಿದ್ದಾರೆ.

'ನಾಯಕತ್ವದ ಬದಲಾವಣೆಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಯಾವುದೇ ಸತ್ಯವಿದೆ ಎಂದು ನಾನು ಭಾವಿಸುವುದಿಲ್ಲ ಏಕೆಂದರೆ ರಾಜ್ಯಗಳ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕೇಂದ್ರ ಮಟ್ಟದ ನಾಯಕರು ತೆಗೆದುಕೊಳ್ಳುವ ನಿರ್ಧಾರಗಳು ಇವು" ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಯಡಿಯೂರಪ್ಪ (B.S. Yediyurappa) ನವರು ಜುಲೈ 16 ರಂದು (ಶುಕ್ರವಾರ) ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ಮರುದಿನ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದರು. ನಂತರ ಅವರು ತಮ್ಮ ರಾಜೀನಾಮೆ ವಿಚಾರವನ್ನು ನಿರಾಕರಿಸಿದರು ಮತ್ತು ಈ ಸಭೆ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಮಾತ್ರ ಎಂದು ಹೇಳಿದರು.ಆಗಸ್ಟ್ ಮೊದಲ ವಾರದಲ್ಲಿ ನಾಯಕರನ್ನು ಭೇಟಿ ಮಾಡಲು ಮತ್ತೆ ದೆಹಲಿಗೆ ಭೇಟಿ ನೀಡುವುದಾಗಿ ಹೇಳಿದರು.

ಇದನ್ನೂ ಓದಿ : DA Hike : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : DA ಶೇ. 11 ಹೆಚ್ಚಿಸಿದ ಬಿಎಸ್‌ವೈ ಸರ್ಕಾರ

ಯಡಿಯೂರಪ್ಪ ಅವರನ್ನು ಉನ್ನತ ಹುದ್ದೆಯಿಂದ ತೆಗೆದುಹಾಕಲು ಯಾವುದೇ ಕಾರಣಗಳಿಲ್ಲ ಮತ್ತು ಕೋವಿಡ್ -19 ಸಾಂಕ್ರಾಮಿಕ ಮತ್ತು ಇತರ ಅಭಿವೃದ್ಧಿ ಚಟುವಟಿಕೆಗಳನ್ನು ನಿಭಾಯಿಸುವ ಸರ್ಕಾರದ ಕ್ರಮಗಳನ್ನು ಕೇಂದ್ರ ನಾಯಕತ್ವ ಶ್ಲಾಘಿಸಿದೆ.'ನಾಯಕತ್ವ ಬದಲಾವಣೆಗೆ ಸಂಪೂರ್ಣವಾಗಿ ಅವಕಾಶವಿಲ್ಲ ಎಂಬುದು ನನ್ನ ಭಾವನೆ.ಇವೆಲ್ಲವೂ ಬರಿ ಊಹಾಪೋಹಗಳು" ಎಂದು ಅವರು ಹೇಳಿದರು.

ಸಿಎಂ ಪರವಾಗಿ ವಿವಿಧ ಲಿಂಗಾಯತ ಸ್ವಾಮಿಜಿಗಳು ನೀಡಿರುವ ಬೆಂಬಲದ ಬಗ್ಗೆ ಮಾತನಾಡಿದ ಸದಾನಂದ ಗೌಡರು "ನಾವು ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದಾಗ ಜನರು ಅದನ್ನು ಮೆಚ್ಚುತ್ತಾರೆ. ಇದರ ಪರಿಣಾಮವಾಗಿ ಜನರು ಅವರ ಪರವಾಗಿ ನಿಲ್ಲುತ್ತಾರೆ.ನಾಯಕತ್ವ ಬದಲಾವಣೆಗೆ ಯಾವುದೇ ಅವಕಾಶವಿಲ್ಲ ಎಂದು ನಾನು ಭಾವಿಸುತ್ತೇನೆ. ಉಳಿದವುಗಳನ್ನು ರಾಷ್ಟ್ರಮಟ್ಟದ ನಾಯಕರಿಗೆ ಬಿಟ್ಟದ್ದು" ಎಂದು ಅವರು ಪುನರುಚ್ಚರಿಸಿದರು.

ಇದನ್ನೂ ಓದಿ : ರೈತರ ಹೋರಾಟದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದೇನು?

ಇನ್ನೊಂದೆಡೆಗೆ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು."ಮುಖ್ಯಮಂತ್ರಿ ಮುಂದುವರಿಯಲಿದ್ದಾರೆ, ಅವರೇ ಅದನ್ನು ಹೇಳಿದ್ದಾರೆ. ನಮ್ಮ ಉಸ್ತುವಾರಿ ಅರುಣ್ ಸಿಂಗ್ ಕೂಡ ಇದನ್ನು ಹೇಳಿದ್ದಾರೆ.ಈ ಎಲ್ಲಾ ಊಹಾಪೋಹಗಳು ಮತ್ತು ವದಂತಿಗಳ ಮೂಲಕ ಅವರು ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಹೇಳಿರುವುದನ್ನು ಪಿಟಿಐ ಉಲ್ಲೇಖಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News