COVID-19 3rd wave : ಕರ್ನಾಟಕ ಸೇರಿದಂತೆ ದೇಶದ ಈ 5 ರಾಜ್ಯಗಳಲ್ಲಿ ಹೊಸ ರೂಪಾಂತರ AY.4.2 ಪ್ರಕರಣ ಪತ್ತೆ!

ಕೊರೋನಾ ಹೊಸ AY.4.2 ರೂಪಾಂತರವು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಬಂದಿದೆ. ಹೊಸ ರೂಪಾಂತರವು ತನಿಖೆಯಲ್ಲಿದೆ ಮತ್ತು ತಜ್ಞರ ಪ್ರಕಾರ ಹೊಸ ರೂಪಾಂತರವು ಕೋವಿಡ್-19 ನ ಡೆಲ್ಟಾ ಪ್ಲಸ್ ವೇರಿಯಂಟ್ ಕುಟುಂಬದಿಂದ ಬಂದಿದೆ

Written by - Channabasava A Kashinakunti | Last Updated : Oct 28, 2021, 01:49 PM IST
  • ಕೋವಿಡ್-19 ಮೂರನೇ ಅಲೆಯ ಭಯದ ನಡುವೆ
  • ಕೊರೋನಾ ಹೊಸ AY.4.2 ರೂಪಾಂತರ
  • ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ
COVID-19 3rd wave : ಕರ್ನಾಟಕ ಸೇರಿದಂತೆ ದೇಶದ ಈ 5 ರಾಜ್ಯಗಳಲ್ಲಿ ಹೊಸ ರೂಪಾಂತರ AY.4.2 ಪ್ರಕರಣ ಪತ್ತೆ! title=

ನವದೆಹಲಿ : ಕೋವಿಡ್-19 ಮೂರನೇ ಅಲೆಯ ಭಯದ ನಡುವೆ, ಕೊರೋನಾ ಹೊಸ AY.4.2 ರೂಪಾಂತರವು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಬಂದಿದೆ. ಹೊಸ ರೂಪಾಂತರವು ತನಿಖೆಯಲ್ಲಿದೆ ಮತ್ತು ತಜ್ಞರ ಪ್ರಕಾರ ಹೊಸ ರೂಪಾಂತರವು ಕೋವಿಡ್-19 ನ ಡೆಲ್ಟಾ ಪ್ಲಸ್ ವೇರಿಯಂಟ್ ಕುಟುಂಬದಿಂದ ಬಂದಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಸತತ ಎರಡನೇ ದಿನವಾದ ಬುಧವಾರ ಕೋವಿಡ್-19 ಪ್ರಕರಣಗಳಲ್ಲಿ(COVID-19 Cases) ಸ್ವಲ್ಪ ಹೆಚ್ಚಳ ದಾಖಲಾಗಿದೆ. ರಾಜ್ಯವು ಒಟ್ಟು 1,485 ಹೊಸ ಪ್ರಕರಣಗಳನ್ನು ಸೇರಿಸಿದೆ ಮತ್ತು 38 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : COVID-19 Positive : ರಾಜ್ಯದ ವಸತಿ ಶಾಲೆಯೊಂದರಲ್ಲಿ 32 ವಿದ್ಯಾರ್ಥಿಗಳಿಗೆ 'ಕೊರೋನಾ ಪಾಸಿಟಿವ್'!

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 16,156 ಹೊಸ ಪ್ರಕರಣಗಳು ಮತ್ತು 733 ಜನ ಮೃತರಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(Ministry of Health and Family Welfare)ದ ಅಂಕಿಅಂಶಗಳ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆ 1,60,989 ಆಗಿದೆ.

ಎರಡೂ ಡೋಸ್‌ ಪಡೆದವರ ಸಂಖ್ಯೆ ಸುಮಾರು 11 ಕೋಟಿ ದಾಟಿದೆ ಇದನ್ನೂ ಸರ್ಕಾರದ ಅಂಕಿಅಂಶಗಳು ಬಹಿರಂಗಪಡಿಸಿವೆ. ಲಸಿಕೆ(COVID-19 vaccine) ಮಾಹಿತಿಯ ಪ್ರಕಾರ, 3.92 ಕೋಟಿ ಫಲಾನುಭವಿಗಳು ತಮ್ಮ ಎರಡನೇ ಡೋಸ್‌ಗೆ ಆರು ವಾರಗಳಿಗಿಂತ ಹೆಚ್ಚು ಸಮಯದಲ್ಲಿ ತೆಗೆದುಕೊಂಡಿದ್ದಾರೆ.

ಸುಮಾರು 1.57 ಕೋಟಿ ಜನರು ನಾಲ್ಕರಿಂದ ಆರು ವಾರಗಳವರೆಗೆ ತಡವಾಗಿದ್ದರೆ, 1.50 ಕೋಟಿಗೂ ಹೆಚ್ಚು ಜನರು ತಮ್ಮ ಎರಡನೇ ಡೋಸ್ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ(Covaxin or Covishield vaccine)ಗಾಗಿ ಎರಡರಿಂದ ನಾಲ್ಕು ವಾರಗಳವರೆಗೆ ವಿಳಂಬವಾಗಿದ್ದಾರೆ. ಅಲ್ಲದೆ, 3.38 ಕೋಟಿಗೂ ಹೆಚ್ಚು ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆಯಲು ಎರಡು ವಾರಗಳವರೆಗೆ ವಿಳಂಬವಾಗಿದೆ.

ಇದನ್ನೂ ಓದಿ : HD Kumaraswamy: ಎಂಇಎಸ್ ವಿನಾಕಾರಣ ಕನ್ನಡಿಗರನ್ನು ಕೆಣಕುತ್ತಿದೆ- ಸಾಮಾಜಿಕ ಮಾಧ್ಯಮದಲ್ಲಿ ಎಚ್ಡಿಕೆ ಗುಡುಗು

ಕೇಂದ್ರ ಆರೋಗ್ಯ ಸಚಿವಾಲಯವು ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ತಮ್ಮ ಎರಡನೇ ಡೋಸ್(second dose) ಅನ್ನು ಇನ್ನೂ ತೆಗೆದುಕೊಳ್ಳದ ಫಲಾನುಭವಿಗಳಿಗೆ ಎರಡನೇ ಡೋಸ್ ನೀಡಲು ಆದ್ಯತೆ ನೀಡುವಂತೆ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News