ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಂಡ ದುರಂತ ಪ್ರಕರಣ ನಡೆದಿರೋದು ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಮಡಹಳ್ಳಿ ಗ್ರಾಮದಲ್ಲಿ ದೇವರ ಪೂಜಾರಿಯೊಬ್ಬ ಕೊಂಡ ಹಾಯುವ ವೇಳೆ ಕೊಂಡಕ್ಕೆ
ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಹೌದು! ಸಕ್ಕರೆನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಮತ್ತೊಂದು ಕೊಂಡ ದುರಂತ ಪ್ರಕರಣ ನಡೆದಿದ್ದು,ಕೊಂಡಕ್ಕೆ ಬಿದ್ದು ಪೂಜಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ತಮ್ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ದೇವರನ್ನು ಹೊತ್ತು ಕೊಂಡ ಹಾಯುತ್ತಿದ್ದ ಅರ್ಚಕ ನಿಂಗರಾಜು ಗಂಭೀರವಾಗಿ ಗಾಯಗೊಂಡಿದ್ದು ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ- Black Cobra: ಮದವೇರಿದ ಕಾಳಿಂಗ ಸರ್ಪದ ರೋಷವೇಷ, ಹೇಗಿದೆ ನೋಡಿ..!
ಅಂದಹಾಗೆ ನೆನ್ನೆ ತಮ್ಮಡಹಳ್ಳಿ ಗ್ರಾಮದಲ್ಲಿ ಮೂಕಮಾರಮ್ಮನ ಹಬ್ಬವನ್ನು (Mukamaramma Konda) ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಗ್ರಾಮ ದೇವರ ಹಬ್ಬದ ಅಂಗವಾಗಿ ಕೊಂಡಾಬಂಡಿ ಉತ್ಸವ ದೇವರ ಮೆರವಣಿಗೆ ಉತ್ಸವ ಸೇರಿ ಇನ್ನಿತರ ಧಾರ್ಮಿಕ ಪೂಜಾ ಕೈಂಕರ್ಯದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ದೇವರ ಮೆರವಣಿಗೆ ಉತ್ಸವಹದ ಬಳಿಕ ದೇವಸ್ಥಾನದ ಆವರಣದಲ್ಲಿ ಕೊಂಡಬಂಡಿ ಉತ್ಸವ ಕೂಡ ಇತ್ತು.
ಈ ಉತ್ಸವದ ವೇಳೆ ದೇವರನ್ನು ಹೊತ್ತಿದ್ದ ಹಲವಾರು ಅರ್ಚಕರು ದೇವರನ್ನು ತಲೆಯ ಮೇಲೆ ಹೊತ್ತು ಕೊಂಡ ಹಾಯುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಈ ಬಾರಿಯು ಕೂಡ ಕೊಂಡ (Konda) ಹಾಯಲು ದೇವರನ್ನು ಹೊತ್ತಿದ್ದ ಹಲವು ಅರ್ಚಕರು ಕೊಂಡ ಹಾಯಲು ಮುಂದಾಗಿ ಕೊಂಡ ಹಾಯ್ದಿದ್ದಾರೆ. ಈ ವೇಳೆ ಕೊಂಡ ಹಾಯಲು ಹೋಗಿದ್ದ ದೇವರ ಗುಡ್ಡಪ್ಪ ನಿಂಗರಾಜು ಕೊಂಡ ಹಾಯುವ ವೇಳೆ ಕೊಂಡಕ್ಕೆ ಮುಗ್ಗರಿಸಿ ಬಿದ್ದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- Raghavapura Jatre: ರಾಘವಪುರ ಜಾತ್ರೆಯಲ್ಲಿ ರಥ ಎಳೆದ ಮಹಿಳೆಯರು!!
ಈ ವೇಳೆ ಕೊಂಡದ ಸ್ಥಳದಲ್ಲೇ ಇದ್ದ ಊರಿನ ಜನರು ಕೊಂಡಕ್ಕೆ ಮುಗ್ಗರಿಸಿ ಬಿದ್ದ ಅರ್ಚಕನ್ನು ಮೇಲೆತ್ತಿದ್ದಾರೆ. ತೀವ್ರ ಸುಟ್ಟ ಗಾಯದಿಂದ ಆತಂಕದಲ್ಲಿದ್ದ ಅರ್ಚಕನನ್ನು ಊರಿನ ಗ್ರಾಮಸ್ಥರು ಕೂಡಲೇ ಆ್ಯಂಬುಲೆನ್ಸ್ ಮೂಲಕ ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆಯಲ್ಲಿ ದೇವರ ಅರ್ಚಕ ನಿಂಗರಾಜುಗೆ ತೀವ್ರ ಗಂಭೀರ ಸುಟ್ಟಗಾಯಗಳಾಗಿದ್ದು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಾ ಇದ್ದಾರೆ. ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಯಾವುದೇ ಧಾರ್ಮಿಕ ಹಬ್ಬಗಳು ಗ್ರಾಮೀಣ ಭಾಗದಲ್ಲಿ ನಡೆದಿರಲಿಲ್ಲ. ಇದೀಗ ಈ ಬಾರಿ ಕೋವಿಡ್ ಕಡೆಮೆಯಾಗಿರುವ ಹಿನ್ನಲೆಯಲ್ಲಿ ಮತ್ತೆ ಗ್ರಾಮದೇವತೆ ಹಬ್ಬಗಳ ಆಚರಣೆಗಳ ಸಂಭ್ರಮ ಎಲ್ಲೆಡೆ ಮನೆಮಾಡಿರುವುದು ಗಮನಾರ್ಹವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.