Parrot: ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ

Parrot Missing: ಗಿಣಿ ಕಳೆದುಕೊಂಡ ಕುಟುಂಬವೊಂದು ತಮ್ಮ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದೆ. 

Written by - Chetana Devarmani | Last Updated : Jul 19, 2022, 03:21 PM IST
  • ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ
  • ಗಿಣಿ ಕಳೆದುಕೊಂಡು ಕುಟುಂಬದಿಂದ ಬಹುಮಾನ ಘೋಷಣೆ
  • ತುಮಕೂರು ಜಯನಗರ ನಿವಾಸಿ ರವಿ ಕುಟುಂಬ
Parrot: ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ title=
ಗಿಣಿ

ತುಮಕೂರು: ಗಿಣಿ ಕಳೆದುಕೊಂಡ ಕುಟುಂಬವೊಂದು ತಮ್ಮ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದೆ. ತುಮಕೂರು ಜಯನಗರ ನಿವಾಸಿ ರವಿ ಎಂಬುವವರ ಕುಟುಂಬ ಈ ಪ್ರಕಟಣೆ ನೀಡಿದ್ದಾರೆ. 

ಇದನ್ನೂ ಓದಿ: Bomb threat: ಡಿಕೆ ಶಿವಕುಮಾರ್‌ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ.!

ಆಫ್ರಿಕನ್ ಗ್ರೇ ಜಾತಿಯ ಗಿಣಿ ಸಾಕಿದ್ದ ರವಿ ಎಂಬುವವರ ಕುಟುಂಬ, ಕಳೆದ 16/07/2022 ರಂದು ಮನೆಯಿಂದ ನಾಪತ್ತೆಯಾಗಿರುವ ಗಿಣಿಯನ್ನು ಹುಡುಕಿಕೊಡಲು ಪ್ರಕಟಣೆ ನೀಡಿದೆ. ಪ್ರೀತಿಯ ಗಿಣಿ ನಾಪತ್ತೆಯಾಗಿರುವುದಕ್ಕೆ ರವಿ ಕುಟುಂಬಸ್ಥರೆಲ್ಲರೂ ತುಂಬಾ ದುಃಖಿತರಾಗಿದ್ದಾರೆ.

ಗಿಣಿಗೆ ರುಸ್ತುಮಾ ಎಂಬ ಹೆಸರಿಟ್ಟಿದ್ದು, ಮನೆಯಲ್ಲಿ ಸಾಕಿಕೊಂಡಿದ್ದರು. ಆಫ್ರಿಕನ್‌ ಗ್ರೇ ತಳಿಯ ಎರಡು ಗಿಣಿಗಳನ್ನು ಮನೆಯಲ್ಲಿ ಸಾಕಲಾಗಿತ್ತು. ಎರಡೂವರೆ ವರ್ಷದಿಂದ ಗಿಣಿಗಳನ್ನು ಪ್ರೀತಿಯಿಂದ ಸಾಕಿದ್ದರು. ಇದೀಗ ಗಿಣಿ ನಾಪತ್ತೆಯಾಗಿದ್ದು, ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಿದ್ದಾರೆ. 

ಇದನ್ನೂ ಓದಿ: ಗಂಡ ಹೆಂಡತಿ ಜಗಳ:‌ ಎಣ್ಣೆ ಏಟಲ್ಲಿ ಅತ್ತೆಯನ್ನು ಕೊಂದ ಪಾಪಿ ಅಳಿಯ

ಗಿಣಿ ಕಾಣಿಸಿದರೆ ಮಾಹಿತಿ ನೀಡುವಂತೆ ತುಮಕೂರು‌ ನಗರದಲ್ಲಿ ಬ್ಯಾನರ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗಿಣಿ ಕಾಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಗಿಣಿ ಹುಡುಕಿ ಕೊಟ್ಟರೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News