DVS : “ಸ್ವಲ್ಪ ಸುಸ್ತಾಗಿತ್ತು, ಈಗ ಆರಾಮಾಗಿದ್ದೇನೆ’’, ಅಷ್ಟಕ್ಕೂ ಚಿತ್ರದುರ್ಗದಲ್ಲಿ ಸದಾನಂದ ಗೌಡರಿಗೆ ಆಗಿದ್ದೇನು..?

ಮಾಜಿ ಮುಖ್ಯಮಂತ್ರಿ ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡರ ಆರೋಗ್ಯ ಇದೀಗ ಸ್ಥಿರವಾಗಿದೆ . 

Written by - Zee Kannada News Desk | Last Updated : Jan 3, 2021, 10:48 PM IST
  • ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರ ಆರೋಗ್ಯ ಇದೀಗ ಸ್ಥಿರ
    ಎಕೊ, ಇಸಿಜಿ ಸೇರಿದಂತೆ ಎಲ್ಲಾ ಪ್ಯಾರಾಮಿಟರ್ ಗಳು ಸಹಜವಾಗಿವೆ ಎಂದು ಟ್ವೀಟ್ ಮಾಡಿದ ಡಿವಿಎಸ್
    ಚಿತ್ರದುರ್ಗದಲ್ಲಿ ಕುಸಿದು ಬಿದ್ದ ಕೇಂದ್ರ ಸಚಿವರು
DVS : “ಸ್ವಲ್ಪ ಸುಸ್ತಾಗಿತ್ತು, ಈಗ ಆರಾಮಾಗಿದ್ದೇನೆ’’, ಅಷ್ಟಕ್ಕೂ ಚಿತ್ರದುರ್ಗದಲ್ಲಿ ಸದಾನಂದ ಗೌಡರಿಗೆ ಆಗಿದ್ದೇನು..? title=
ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರ ಆರೋಗ್ಯ ಇದೀಗ ಸ್ಥಿರ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡರ ಆರೋಗ್ಯ ಇದೀಗ ಸ್ಥಿರವಾಗಿದೆ . ಸದಾನಂದಗೌಡರೇ ಟ್ವೀಟ್ ಮಾಡಿದ್ದು ತಮ್ಮ ಆರೋಗ್ಯ ಸ್ಥಿತಿಯನ್ನು ಹೇಳಿ ಕೊಂಡಿದ್ದಾರೆ. 

“ನನ್ನ ಆರೋಗ್ಯ ಸುಸ್ಥಿರವಾಗಿದೆ. ಸಕ್ಕರೆ ಅಂಶ ಕಡಿಮೆಯಾಗಿ ಸ್ವಲ್ಪ ಸುಸ್ತಾಗಿತ್ತು. ಈಗ ಆರಾಮಾಗಿದ್ದೇನೆ. ಎಕೊ, ಇಸಿಜಿ ಸೇರಿದಂತೆ ಎಲ್ಲಾ ಪ್ಯಾರಾಮಿಟರ್ ಗಳು ಸಹಜವಾಗಿವೆ. ಸದೃಢ ಆರೋಗ್ಯಕ್ಕಾಗಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಡಿವಿಎಸ್ (DVS) ಟ್ವೀಟ್ ಮಾಡಿದ್ದಾರೆ.

 

ALSO READ : ರಾಜ್ಯದಲ್ಲಿ ಜೆಡಿಎಸ್ ಮುಗಿಸುವ ಎಲ್ಲ ಪ್ರಯತ್ನಗಳು ವಿಫಲ : ಹೆಚ್ ಡಿ ಕುಮಾರಸ್ವಾಮಿ

67 ವರ್ಷದ ಸದಾನಂದ ಗೌಡರಿಗೆ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್ ಪುತ್ರ ಕಾರ್ತಿಕ್, (Karthik) ತಂದೆಯವರ ಆರೋಗ್ಯ ಈಗ ಚೆನ್ನಾಗಿದೆ. ಸಕ್ಕರೆ ಅಂಶ ಕಡಿಮೆಯಾಗಿ ತಲೆ ಸುತ್ತು ಬಂದಿತ್ತು ಎಂದಿದ್ದಾರೆ. 

ಕೇಂದ್ರ ಸಚಿವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.  ಅವರನ್ನು ಮುಂದಿನ 24 ಗಂಟೆಗಳ ಕಾಲ ನಿಗಾ (Observation) ದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ಹೇಳಲಾಗಿದೆ. “ಸದಾನಂದ ಗೌಡರ  ಆರೋಗ್ಯ ಸ್ಥಿರವಾಗಿದೆ. ರಕ್ತ ಮತ್ತು ಇತರ ಪ್ಯಾರಾಮೀಟರ್ (Parameter’s)ಗಳು ಸಾಮಾನ್ಯವಾಗಿವೆ. ಚಿಂತೆಗೆ ಯಾವುದೇ ಕಾರಣವಿಲ್ಲ. 24 ಗಂಟೆ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದೆ.  ಕಡಿಮೆ ಸಕ್ಕರೆ (Low blood sugar) ಅಂಶದ ಕಾರಣ ಅವರಲ್ಲಿ ತಲೆ ಸುತ್ತು (Giddiness) ಕಾಣಿಸಿಕೊಂಡಿತ್ತು ಎಂದು ಸಚಿವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಭಾನುವಾರ ಬಿಜೆಪಿ (BJP) ಕಾರ್ಯಕಾರಿಣಿ ಮುಗಿಸಿಕೊಂಡು ಬೆಂಗಳೂರಿಗೆ (Bengaluru) ಹಿಂತಿರುಗುವಾಗ  ಚಿತ್ರದುರ್ಗದಲ್ಲಿ ಊಟಕ್ಕೆ ಕಾರು ನಿಲ್ಲಿಸಲಾಗಿತ್ತು. ಈ ವೇಳೆ ಕಾರಿನಿಂದ ಇಳಿಯುವಾಗ ಸದಾನಂದ ಗೌಡರು ಕುಸಿದು ಬಿದ್ದಿದ್ದರು.  ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News