ಕರ್ನಾಟಕ ಬಂದ್ ಮುಂದೂಡಿಕೆ.. ಕನ್ನಡಪರ ಸಂಘಟನೆಗಳ ಒಕ್ಕೂಟಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪತ್ರ

Karnataka Bandh: ಡಿ.31ರ ಕರ್ನಾಟಕ ಬಂದ್ ಮುಂದೂಡಿಕೆ ವಿಚಾರವಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪತ್ರ ಬರೆದಿದ್ದಾರೆ. 

Edited by - Zee Kannada News Desk | Last Updated : Dec 29, 2021, 12:09 PM IST
  • ಡಿಸೆಂಬರ್ 31ರ ಕರ್ನಾಟಕ ಬಂದ್ ಮುಂದೂಡಿಕೆ ವಿಚಾರ
  • ಕನ್ನಡಪರ ಸಂಘಟನೆಗಳ ಒಕ್ಕೂಟಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪತ್ರ
  • ಬಂದ್ ಬಗ್ಗೆ ಚಿತ್ರನಟರು, ಉದ್ಯಮಿಗಳು ಕೂಡ ಅಸಮಾಧನ ಹೊರ ಹಾಕಿದ್ದಾರೆ
  • ಸಾರ್ವಜನಿಕ ವಲಯದಿಂದಲೂ ಬಂದ್ ಗೆ ವಿರೋಧ ವ್ಯಕ್ತವಾಗುತ್ತಿದೆ
  • ಈ ಹಿನ್ನೆಲೆ ಕರ್ನಾಟಕ ಬಂದ್ ಮುಂದೂಡುವಂತೆ ಮನವಿ
ಕರ್ನಾಟಕ ಬಂದ್ ಮುಂದೂಡಿಕೆ.. ಕನ್ನಡಪರ ಸಂಘಟನೆಗಳ ಒಕ್ಕೂಟಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪತ್ರ   title=
ಕರ್ನಾಟಕ ಬಂದ್

ಬೆಂಗಳೂರು: ಡಿ.31ರ ಕರ್ನಾಟಕ ಬಂದ್ (Karnataka Bandh) ಮುಂದೂಡಿಕೆ ವಿಚಾರವಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟಕ್ಕೆ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ (Praveen Shetty) ಪತ್ರ ಬರೆದಿದ್ದಾರೆ. 

ಬಂದ್ ಬಗ್ಗೆ ಚಿತ್ರನಟರು, ಉದ್ಯಮಿಗಳು ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ಸಾರ್ವಜನಿಕ ವಲಯದಿಂದಲೂ ಬಂದ್ ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕ ಬಂದ್ ಮುಂದೂಡುವಂತೆ ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ (Praveen Shetty letter to Vatal Nagaraj) ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮುಖ್ಯವಾಗಿ ಬೆಳಗಾವಿ ಕ್ರಿಯಾ ಸಮಿತಿ ಬಂದ್ ಗೆ ಬೆಂಬಲ ನೀಡಿಲ್ಲ. ಒಮಿಕ್ರಾನ್ (Omicron) ದಿನದಿಂದ ದಿ‌ನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಿಲ್ಲದೆ. ವರ್ತಕರು, ವಾಣಿಜ್ಯೋದ್ಯಮಿಗಳು, ಹೋಟೆಲ್ ಮಾಲೀಕರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ವರ್ಷದ ಕೊನೆಯ ದಿನ ಆದ್ದರಿಂದ ಒಳ್ಳೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಬಂದ್ ಬಗ್ಗೆ ಚಿತ್ರನಟರು, ಉದ್ಯಮಿಗಳು ಕೂಡ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಪತ್ರದಲ್ಲಿ ಸೇರಿಸಿದ್ದಾರೆ.

ಸಾರ್ವಜನಿಕ ವಲಯದಿಂದಲೂ ಬಂದ್ ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಬಂದ್ ಮುಂದೂಡುವುದು ಸೂಕ್ತ ಎಂದು ಪತ್ರದ ಮೂಲಕ ವಿನಂತಿಸಿದ್ದಾರೆ.

ಕರ್ನಾಟಕ ಬಂದ್ ಗೆ ಮುಂಚೂಣಿಯಲ್ಲಿದ್ದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ, ಇದೀಗ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಈ ಪತ್ರ ಬರೆದಿದ್ದಾರೆ. ಡಿ. 31ಕ್ಕೆ ಕರ್ನಾಟಕ ಬಂದ್ ಮಾಡದಂತೆ ವಾಟಾಳ್ ನಾಗರಾಜ್‌ ಅವರಿಗೆ ಮನವಿ ಮಾಡಿದ್ದಾರೆ.

31ರಂದು ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ನಮ್ಮ ನಿರ್ಮಾಪಕರಿಗೆ ತೊಂದರೆ ಬೇಡ. ಒಮಿಕ್ರಾನ್ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಾರ್ ಹಾಗೂ ಹೊಟೇಲ್ ಉದ್ಯಮಕ್ಕೆ ಈಗಾಗಲೇ ಗಾಯದ ಮೇಲೆ ಬರೆ ಬಿದ್ದಿದೆ. ಈ ಹಿನ್ನೆಲೆ ಬಂದ್ ಮುಂದೂಡುವಂತೆ ಮನವಿ ಮಾಡಿದ್ದಾರೆ. 

ಇದನ್ನೂ ಓದಿ: ಹಿಂದು ಮತ್ತು ಹಿಂದುತ್ವದ ಕುರಿತ ಹಳೆಯ ಪೋಸ್ಟ್ ಹಂಚಿಕೊಂಡ ಶಶಿ ತರೂರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News