ಸಚಿವ ಬಿ.ಸಿ.ನಾಗೇಶ್ ಮನೆಮೇಲೆ ದಾಳಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

ಕನಕಪುರದಲ್ಲಿ ಭಯದ ವಾತಾವರಣ ಹುಟ್ಟಿಸಿ, ಅಕ್ರಮ ಹಣದ ವಹಿವಾಟು ನಡೆಸಿ ತಿಹಾರ್ ಜೈಲುವಾಸ ಮುಗಿಸಿ ಬಂದವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಿದರು ಎಂದು ಬಿಜೆಪಿ ಟೀಕಿಸಿದೆ.

Written by - Zee Kannada News Desk | Last Updated : Jun 2, 2022, 11:50 AM IST
  • ಯುವ ಕಾಂಗ್ರೆಸ್ ಅಧ್ಯಕ್ಷ‌ ನಲಪಾಡ್‌ ಪಡೆದ ಶಿಕ್ಷಣದ ಪದವಿಗಿಂತ ಐಪಿಸಿ ಸೆಕ್ಷನ್ ಕೇಸುಗಳೇ ಜಾಸ್ತಿ ಇದೆ
  • ಶಿಕ್ಷಣ ಮಂತ್ರಿಗಳ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಗಲಭೇಕೋರರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಪ್ರೇರಣೆಯೇ?
  • ಈ ಮರಿರೌಡಿಗಳು ಕಾಂಗ್ರೆಸ್‌ ಪಕ್ಷ ಸೇರಿಕೊಂಡರೆ ರಾಜ್ಯದ ಗತಿ ಏನಾಗಬಹುದು? ಎಂದು ಪ್ರಶ್ನಿಸಿದ ಬಿಜೆಪಿ
ಸಚಿವ ಬಿ.ಸಿ.ನಾಗೇಶ್ ಮನೆಮೇಲೆ ದಾಳಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ title=
ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಮೇಲೆ ದಾಳಿ ನಡೆಸಿರುವ ಘಟನೆ ಖಂಡಿಸಿರುವ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. #ಗೂಂಡಾಕಾಂಗ್ರೆಸ್‌ ಹ್ಯಾಶ್ ಟ್ಯಾಗ್ ಬಳಸಿ ಗುರುವಾರ ಸರಣಿ ಟ್ವೀಟ್ ಮಾಡಿದೆ.  

‘ತುಮಕೂರಿನಲ್ಲಿ ಶಿಕ್ಷಣ ಮಂತ್ರಿಗಳ ಮನೆಗೆ ನುಗ್ಗಿ ಎನ್‌ಎಸ್‌ಯುಐ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಈ ಗಲಭೇಕೋರರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರೇರಣೆಯೇ? ಈ ಮರಿರೌಡಿಗಳು ಕಾಂಗ್ರೆಸ್‌ ಪಕ್ಷ ಸೇರಿಕೊಂಡರೆ ರಾಜ್ಯದ ಗತಿ ಏನಾಗಬಹುದು?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ: ನ್ಯಾ.ಕೆ.ಭಕ್ತವತ್ಸಲ ಆಯೋಗಕ್ಕೆ ಅಹವಾಲು ಸಲ್ಲಿಸಲು ಸೂಚನೆ

‘ಯುವ ಕಾಂಗ್ರೆಸ್ ಅಧ್ಯಕ್ಷ‌ ನಲಪಾಡ್‌ ಪಡೆದ ಶಿಕ್ಷಣದ ಪದವಿಗಿಂತ ಐಪಿಸಿ ಸೆಕ್ಷನ್ ಕೇಸುಗಳೇ ಜಾಸ್ತಿ ಇದೆ. ಮೃಗಿಯ ವರ್ತನೆಯವರನ್ನು ಕಾಂಗ್ರೆಸ್ ಪಕ್ಷ ಯುವ‌ ಘಟಕಕ್ಕೆ ನೇಮಿಸಿದೆ. ಇವರಿಂದ ಪ್ರೇರಣೆ ಪಡೆದ ಎನ್‌ಎಸ್‌ಯುಐ ಸಂಘಟನೆ ಸಚಿವರ ಮನೆಗೆ ನುಗ್ಗಿ ದಾಂಧಲೆ ನಡೆಸಿದೆ. ಯಥಾ ಪಕ್ಷದ ಮುಖ್ಯಸ್ಥ, ತಥಾ ಕಾರ್ಯಕರ್ತ!’ ಎಂದು ಬಿಜೆಪಿ ಕಿಡಿಕಾರಿದೆ.

‘ಕನಕಪುರದಲ್ಲಿ ಭಯದ ವಾತಾವರಣ ಹುಟ್ಟಿಸಿ, ಅಕ್ರಮ ಹಣದ ವಹಿವಾಟು ನಡೆಸಿ ತಿಹಾರ್ ಜೈಲುವಾಸ ಮುಗಿಸಿ ಬಂದವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಿದರು. ಮಾರಣಾಂತಿ ಹಲ್ಲೆ ಮಾಡಿ ಜೈಲು ವಾಸ ಮುಗಿಸಿ ಬಂದವರನ್ನು ಯುವ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿದರು. ಸಚಿವರ ಮನೆಮೇಲೆ ದಾಳಿ ಮಾಡಿದವರಿಗೆ ಯಾವ ಹುದ್ದೆ ತಯಾರಿದೆ?’ ಎಂದು ಕಾಂಗ್ರೆಸ್‍ಗೆ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: 'ಸಚಿವ ನಾಗೇಶ್ ಅವರ ಮನೆ ಮೇಲಿನ ದಾಳಿ ಹೇಡಿತನದ ಸಂಕೇತ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News