ಬೆಳಗಾವಿ : ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್ -ಬಿಜೆಪಿ ವಿರುದ್ಧ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ ಸುವರ್ಣ ಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆ ಸರ್ಕಾರ ಮಾಡಿದ್ದರೂ ಕಾಂಗ್ರೆಸ್ ಪಕ್ಷ ಸದ್ಯಕ್ಕೆ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಪಡಿಸದೆ ಸುಮ್ಮನ್ನಾಗಿದೆ.
ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸುವರ್ಣ ಸೌಧ ವಿಧಾನಸಭೆಯಲ್ಲಿ ಒಟ್ಟು 7 ಭಾವಚಿತ್ರ ಉದ್ಘಾಟನೆ ಮಾಡಲಾಯಿತು, ಇದರಲ್ಲಿ ಸಾವರ್ಕರ್ ಚಿತ್ರ ಕೂಡ ಒಂದು.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ
ಸಾವರ್ಕರ್ ಭಾವಚಿತ್ರದಲ್ಲಿ ಅಳವಡಿಕೆ ವಿಚಾರದಲ್ಲಿ ಕಾಂಗ್ರೆಸ್ ಗಪ್ ಚುಪ್ ಆಗಿರುವುದು ಏಕೆ? ಅದಕ್ಕೆ ಉತ್ತರ "ಸಾಫ್ಟ್ ಹಿಂದುತ್ವ ". :
ವಿಧಾನಸಭೆಯಲ್ಲಿ ಮಹರ್ಷಿ ವಾಲ್ಮೀಕಿ, ಬಸವಣ್ಣ, ಸಂತ ಶಿಶುನಾಳ ಶರೀಫ, ಕನಕದಾಸ, ನಾರಾಯಣಗುರು, ಅಂಬೇಡ್ಕರ್, ನೆಹರೂ, ಜಗಜೀವನ ರಾಮ್, ಸರದಾರ ವಲ್ಲಭಬಾಯ್ ಪಟೇಲ್, ಕುವೆಂಪು ಮತ್ತಿತರ ಮಹನೀಯರ ಭಾವಚಿತ್ರ ಹಾಕಬೇಕೆಂದು ಒತ್ತಾಯಿಸಿ, ಈ ಮಹನೀಯರ ಭಿತ್ತಿಚಿತ್ರಗಳನ್ನು ಹಿಡಿದು ಬೆಳಗಾವಿ ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಪ್ರದರ್ಶನ ನಡೆಸಲಾಯಿತು. pic.twitter.com/BGuHUllXzD
— Karnataka Congress (@INCKarnataka) December 19, 2022
ಕಾಂಗ್ರೆಸ್ ಪಕ್ಷ ಸಾವರ್ಕರ್ ಭಾವಚಿತ್ರ ವಿಚಾರವಾಗಿ ಹೆಚ್ಚು ಒತ್ತು ನೀಡುವುದು ಬೇಡ ಎಂದು ನಿರ್ಧಾರ ಮಾಡಿದೆ. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಹೊಸದಾಗಿ ಪಾಲಿಸುತ್ತಿರುವ "ಸಾಫ್ಟ್ ಹಿಂದುತ್ವ ". ಈ ಹಿಂದೆ ರಾಹುಲ್ ಗಾಂಧಿ ಪಕ್ಷದ ಮುಖಂಡರಿಗೆ ಹಿಂದೂ ಭಾವನೆಗೆ ದಕ್ಕೆ ಆಗದಂತೆ ಇರುವುದು ಒಳಿತು ಎಂದು ಕಿವಿಮಾತು ಹೇಳಿದ್ದರು.
ಬಿಜೆಪಿ ಸಾವರ್ಕರ್ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ:
ಬಿಜೆಪಿ ರೂಪಿಸಿರುವ ಸಾವರ್ಕರ್ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ರೂಪಿಸಿದೆ, ಈ ಮೂಲಕ ಸರ್ಕಾರವನ್ನು ಇತರೆ ವಿಚಾರದಲ್ಲಿ ಕಟ್ಟಿ ಹಾಕಲು ನಿರ್ಧಾರ ಮಾಡಿದೆ. ಒಂದೇ ವಿಚಾರಕ್ಕೆ ಸಿಮೀತ ಮಾಡಿದ್ರೆ ಸದನದ ದಾರಿ ತಪ್ಪಲಿದೆ ಎಂದು ಪಕ್ಷದ ಒಳಗೆ ಮುಖಂಡರ ಅಭಿಪ್ರಾಯ ಕೇಳಿಬಂದಿದೆ.
ಹೀಗಾಗಿ ಭ್ರಷ್ಟಾಚಾರ ಬಗ್ಗೆ ದಾಖಲೆ ಸಮೇತ ಸರ್ಕಾರವನ್ನು ತರಾಟೆ ತೆಗೆದುಕೊಳ್ಳುವ ಮೂಲಕ, ಇತ್ತೀಚಿಗೆ ಕೈ ನಾಯಕರು ಬಿಜೆಪಿ ಸರ್ಕಾರದ ಚಿಲುಮೆ ಪ್ರಕರಣ, ಬೆಳಗಾವಿ ಗಡಿ ವಿಚಾರ, ಪಿಎಸ್ಐ ನೇಮಕಾತಿ, ಗೃಹ ಸಚಿವರ ಆಡಿಯೋ ಲಿಕ್ ಮತ್ತಿತರೆ ಜಲ್ವಂತ ಸಮಸ್ಯೆಗೆ ಕಾಂಗ್ರೆಸ್ ಧ್ವನಿ ಎತ್ತಲಿದೆ.
ಇದನ್ನೂ ಓದಿ: ನನಗೆ ಇರೋದು ಒಬ್ಬಳೇ ಹೆಂಡತಿ: ಸಾಕು ಮಗನ ಸಂಸಾರದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದೆ..!
ಒಟ್ಟಾರೆ ಕಾಂಗ್ರೆಸ್ ಪಕ್ಷ ಸಾವರ್ಕರ್ ಬಗ್ಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ, ಚುನಾವಣೆ ಹೊಸ್ತಿಲಿನಲ್ಲಿ ಇರುವ ಸಂದರ್ಭದಲ್ಲಿ ಭಾವನೆಗೆ ಧಕ್ಕೆ ಆಗುವ ಮಾತು ಬಂದರೆ ರಾಜಕೀಯ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೌನಕ್ಕೆ ಶರಣಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.