ಏನಿದು "ಮಾತೃಪೂರ್ಣ" ಯೋಜನೆ!

ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಂತರ ಈ ಯೋಜನೆ ಜಾರಿಗೆ ತಂದಿರುವುದು ಕರ್ನಾಟಕ ಮಾತ್ರ.

Last Updated : Oct 2, 2017, 03:50 PM IST
ಏನಿದು "ಮಾತೃಪೂರ್ಣ" ಯೋಜನೆ! title=
Pic: Twitter

ಬೆಂಗಳೂರು: ಮಾತೃಪೂರ್ಣ ಯೋಜನೆಯಿಂದ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಊಟ ದೊರೆಯುತ್ತದೆ ಎಂಬುದು ಸಾಮಾನ್ಯ ಸಂಗತಿ. ಆದರೆ ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯ ಉದ್ದೇಶ ತಿಳಿಯುವುದು ಬಹಳ ಅವಶ್ಯ. 

ಏನಿದು ಮಾತೃಪೂರ್ಣ ಯೋಜನೆ? ಎಂದು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

*.ಗರ್ಭೀಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಇದು.

*. ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟ ನೀಡುವುದು.

*. ಬಿಸಿಯೂಟದ ಜೊತೆ ಗರ್ಭೀಣಿಯರು ಹಾಗೂ ಬಾಣಂತಿಯರಿಗೆ ಕಬ್ಬಿಣಾಂಶದ ಮಾತ್ರೆಗಳನ್ನ ವಿತರಿಸುವುದು.

*. ಮಧ್ಯಾಹ್ನದ ಬಿಸಿಯೂಟ ನೀಡಿ ಪೌಷ್ಠಿಕಾಂಶ ಹೆಚ್ಚಿಸಿಸುವುದು, ಕಡಿಮೆ ತೂಕದ ಮಕ್ಕಳ ಜನನ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಕಡಿಮೆ ಮಾಡೋದು  ಯೋಜನೆಯ ಉದ್ದೇಶ.

*."ಮಾತೃಪೂರ್ಣ " ಅನ್ನ,ಸಾಂಬಾರ್, ಪಲ್ಯದ ಜೊತೆ ಬೇಯಿಸಿದ ಮೊಟ್ಟೆ, 200 ಮಿ.ಲೀ ಹಾಲು ಮತ್ತು ಚಿಕ್ಕಿಗಳನ್ನ ನೀಡುವುದು‌

*.ತಿಂಗಳಲ್ಲಿ ಕನಿಷ್ಠ 25 ದಿನ ಆಹಾರ ನೀಡುವ ಯೋಜನೆ.

*.ಸುಮಾರು 12 ಲಕ್ಷ ಗರ್ಭೀಣಿಯರು, ಬಾಣಂತಿಯರಿಗೆ ಪ್ರಯೋಜನ.

ಆಂಧ್ರ ಪ್ರದೇಶದಲ್ಲಿ ಈ ಯೋಜನೆಯು "ಅನ್ನ ಅಮೃತ ಹಸ್ತಂ" ಎಂಬ ಹೆಸರಿನಲ್ಲಿ ಮತ್ತು ತೆಲಂಗಾಣದಲ್ಲಿ ಈ ಯೋಜನೆಯು "ಆರೋಗ್ಯ ಲಕ್ಷ್ಮೀ" ಎಂಬ ಹೆಸರಿನಲ್ಲಿ ಜಾರಿಯಲ್ಲಿದೆ. 

Trending News