ಇಂದು ಶಾಸಕರ ಜೊತೆ ಸಿಎಂ ಸಭೆ, ಮುಖಾಮುಖಿಯಾಗ್ತಾರಾ ಯಡಿಯೂರಪ್ಪ, ಯತ್ನಾಳ್..?

 ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಶಾಸಕರ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮುಂಬಯಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಬಾಗದ ಶಾಸಕರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. 

Written by - Zee Kannada News Desk | Last Updated : Jan 4, 2021, 12:17 PM IST
  • ಮುಂಬಯಿ ಕರ್ನಾಟಕ ಭಾಗದ ಶಾಸಕರೊಂದಿಗೆ ಯಡಿಯೂರಪ್ಪ ಸೋಮವಾರ ಸಭೆ
    ಸಭೆಗೆ ಹಾಜರಾಗುತ್ತಾರಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್..?
    ಯಡಿಯೂರಪ್ಪ ನಾಯಕತ್ವವನ್ನೇ ಪ್ರಶ್ನಿಸಿರುವ ಯತ್ನಾಳ್
ಇಂದು ಶಾಸಕರ ಜೊತೆ ಸಿಎಂ ಸಭೆ, ಮುಖಾಮುಖಿಯಾಗ್ತಾರಾ ಯಡಿಯೂರಪ್ಪ, ಯತ್ನಾಳ್..? title=
ಮುಂಬಯಿ ಕರ್ನಾಟಕ ಭಾಗದ ಶಾಸಕರೊಂದಿಗೆ ಯಡಿಯೂರಪ್ಪ ಸೋಮವಾರ ಸಭೆ

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನ ಮತ್ತು ಶಾಸಕರ ದೂರುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ (B S  Yadiyurappa) ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಶಾಸಕರ ಸಭೆ ಕರೆದಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಶಾಸಕರ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮುಂಬಯಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಬಾಗದ ಶಾಸಕರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. 

ಕುತೂಹಲ ಕೆರಳಿಸಿದೆ ಬಸನಗೌಡ ಪಾಟೀಲ್ ಯತ್ನಾಳ್ ನಡೆ:
ಮುಖ್ಯಮಂತ್ರಿ ಮುಂಬಯಿ ಕರ್ನಾಟಕ ಭಾಗದ ಶಾಸಕರ ಸಭೆ ಕರೆದಿರುವುದರಿಂದ,  ಈ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಭಾಗವಹಿಸುತ್ತಾರಾ ಇಲ್ಲವಾ ಅನ್ನೋದು ಕುತೂಹಲ ಕೆರಳಿಸಿದೆ. ಸಭೆಗೆ ಹಾಜರಾದರೆ, ತನ್ನೊಳಗಿನ ಅಸಮಾಧಾನವನ್ನು ಬಿ ಎಸ್ ಯಡಿಯೂರಪ್ಪ ( B S Yadiyurappa) ಅವರೆದುರು ವ್ಯಕ್ತ ಪಡಿಸುತ್ತಾರಾ ಅಥವಾ ಮೌನಕ್ಕೆ ಶರಣಾಗುತ್ತಾರಾ ಅನ್ನೋದು ಕೂಡಾ ಕುತೂಹಲದ ಸಂಗತಿಯಾಗಿದೆ. ಸಿಎಂ ನಡೆಸುತ್ತಿರುವ ವಲಯವಾರು ಸಭೆಗೆ  ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ (Naleen Kumar Kateel) ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆಯಲು ಆಗ್ರಹಿಸಿದ್ದರು. 

ALSO READ: ಜೆಡಿಎಸ್ ಬಲ‌ಪಡಿಸಲು ಅಖಾಡಕ್ಕಿಳಿದ Nikhil Kumaraswamy!

ಯಡಿಯೂರಪ್ಪ ನಾಯಕತ್ವ ಪ್ರಶ್ನಿಸಿರುವ ಯತ್ನಾಳ್:
ಸಿಎಂ ಬಿಎಸ್‌ವೈ ನಾಯಕತ್ವದ ವಿರುದ್ಧ ಯತ್ನಾಳ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.  ಯತ್ನಾಳ್ ನಡೆ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿತ್ತು. ಶಿವಮೊಗ್ಗದಲ್ಲಿ ನಡೆದ ಬಿಜೆಪಿ (BJP) ಕೋರ್‌ ಕಮಿಟಿ ಸಭೆಯಲ್ಲೂ ಈ ವಿಚಾರ ಚರ್ಚೆಗೆ ಬಂದಿತ್ತು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಅವರ ಬಳಿ ಯತ್ನಾಳ್ ಬಂಡಾಯದ ಬಗ್ಗೆ ಯಡಿಯೂರಪ್ಪ ದೂರು ನೀಡಿದ್ದರು. ಅಲ್ಲದೆ ಅವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News