ರಂಗದಲ್ಲೇ ಹೃದಯಾಘಾತ; ಯಕ್ಷಗಾನ ಕಲಾವಿದ ಚಂದ್ರಹಾಸ ಹುಡಗೋಡು ಸಾವು

ರಂಗಸ್ಥಳದಲ್ಲಿ ಯಕ್ಷಗಾನ ಪ್ರಸಂಗವೊಂದರಲ್ಲಿ ಅಭಿನಯಿಸುತ್ತಿದ್ದ ಖ್ಯಾತ ಕಲಾವಿದ ಚಂದ್ರಹಾಸ ಗೋಡು ಅವರು ವೇದಿಕೆಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

Updated: Mar 11, 2019 , 01:07 PM IST
ರಂಗದಲ್ಲೇ ಹೃದಯಾಘಾತ; ಯಕ್ಷಗಾನ ಕಲಾವಿದ ಚಂದ್ರಹಾಸ ಹುಡಗೋಡು ಸಾವು

ಉಡುಪಿ: ರಂಗಸ್ಥಳದಲ್ಲಿ ಯಕ್ಷಗಾನ ಪ್ರಸಂಗವೊಂದರಲ್ಲಿ ಅಭಿನಯಿಸುತ್ತಿದ್ದ ಖ್ಯಾತ ಕಲಾವಿದ ಚಂದ್ರಹಾಸ ಗೋಡು ಅವರು ವೇದಿಕೆಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ 50 ವರ್ಷ ವಯಸ್ಸಾಗಿತ್ತು.

ಭಾನುವಾರ ರಾತ್ರಿ ಕೊಲ್ಲೂರು ಸಮೀಪದ ಬೈಂದೂರಿನ ಜೋಗಿಬೆಟ್ಟು ಗ್ರಾಮದಲ್ಲಿ ನಡೆಯುತ್ತಿದ್ದ ಎಳಜಿತ್ ಯಕ್ಷಗಾನ ಕಾರ್ಯಕ್ರಮದಲ್ಲಿ ಭೀಷ್ಮ ವಿಜಯ ಪ್ರಸಂಗದಲ್ಲಿ ಸಾಲ್ವನ ಪಾತ್ರ ನಿರ್ವಹಿಸುತ್ತಿದ್ದ ಚಂದ್ರಹಾಸ ಅವರು ಇದ್ದಕ್ಕಿದ್ದಂತೆ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. 

ಉತ್ತರ ಕನ್ನಡದ ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಕಲಾವಿದರಾಗಿದ್ದರು.  ಇವರಿಗೆ ಅಭಿನವ ಸಾಲ್ವ ಎಂಬ ಬಿರುದು ಸಹ ದೊರೆತಿದೆ. ಅಷ್ಟೇ ಅಲ್ಲದೆ, ಉತ್ತರಕನ್ನಡದ ಹಡಿನಬಾಳ ಗ್ರಾಮ ಪಂಚಾಯತ್‌ನ ಅಧ್ಯಕ್ಷರೂ ಸಹ ಆಗಿದ್ದರು ಎನ್ನಲಾಗಿದೆ.