ನವದೆಹಲಿ : ಕೆಲವೊಮ್ಮೆ ಎಷ್ಟೇ ಕಠಿಣ ಪರಿಶ್ರಮ ಪಟ್ಟರೂ ಯಶಸ್ಸು ಎನ್ನುವುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಇನ್ನು ಕೆಲವೊಮ್ಮೆ ಎಲ್ಲಾ ಕಾರ್ಯಗಳು ನಿರಾಯಾಸವಾಗಿ ಕೈಗೂಡುತ್ತವೆ. ಇವೆಲ್ಲವೂ ಅದೃಷ್ಟ ಮತ್ತು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಸಮಯವನ್ನು ಅವಲಂಬಿಸಿರುತ್ತದೆ. ಜ್ಯೋತಿಷ್ಯದಲ್ಲಿ (astrology), ಮದುವೆಯ ನಂತರ ಅದೃಷ್ಟ ತೆರೆಯುವ ಕೆಲವು ವಿಶೇಷ ವ್ಯಕ್ತಿಗಳ ಬಗ್ಗೆ ಹೇಳಲಾಗಿದೆ. ಅವರು ತಮ್ಮ ಮದುವೆಯ ನಂತರ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. ಇವರ ಆರ್ಥಿಕ ಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ, ಮದುವೆಯಾಗುತ್ತಿದ್ದಂತೆಯೇ, ಇದ್ದಕ್ಕಿದ್ದಂತೆಯೇ ಧನಿಕರಾಗಿ ಬಿಡುತ್ತಾರೆ.
ಮದುವೆಯ ನಂತರ ಬೆಳಗುತ್ತದೆ ಅದೃಷ್ಟ :
F ಅಕ್ಷರದಿಂದ ಪ್ರಾರಂಭವಾಗುವ ಹೆಸರು :
F ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರ ಅದೃಷ್ಟ ಮದುವೆಯ ನಂತರ ಬದಲಾಗುತ್ತದೆ (Name Astrology). ಇವರಿಗೆ ಮದುವೆಗಿಂತ ಮೊದಲು ಎಷ್ಟು ಪ್ರಯತ್ನ ಪಟ್ಟರೂ ಫಲ ಸಿಗುವುದಿಲ್ಲ. ಆದರೆ, ಮದುವೆಯಾದ ತಕ್ಷಣ ಒಂದರ ಹಿಂದೆ ಒಂದರಂತೆ ಯಶಸ್ಸು ಇವರ ಪಾಲಿಗೆ ಒಲಿದು ಬರುತ್ತದೆ.
ಇದನ್ನೂ ಓದಿ : Astrology : ಲಕ್ಷ್ಮಿದೇವಿಯ ಆಶೀರ್ವಾದದಿಂದ ಈ 4 ರಾಶಿಯವರು ಶ್ರೀಮಂತರಾಗಿರುತ್ತಾರೆ!
H ಅಕ್ಷರದಿಂದ ಪ್ರಾರಂಭವಾಗುವ ಹೆಸರು:
H ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು , ಅವರು ತುಂಬಾ ಪ್ರೀತಿಸುವ ಮತ್ತು ಯಾವಾಗಲೂ ಬೆಂಬಲ ನೀಡುವ ಸಂಗಾತಿಯನ್ನು ಪಡೆಯುತ್ತಾರೆ (Lucky name). ಈ ಕಾರಣದಿಂದಾಗಿಯೇ ಅವರು ಮದುವೆಯ ನಂತರ ಹೆಚ್ಚು ಯಶಸ್ವಿಯಾಗುತ್ತಾರೆ. ಸಾಕಷ್ಟು ಹಣವನ್ನೂ ಗಳಿಸುತ್ತಾರೆ.
M ಅಕ್ಷರದಿಂದ ಪ್ರಾರಂಭವಾಗುವ ಹೆಸರು:
M ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಶ್ರಮಜೀವಿಗಳಾಗಿರುತ್ತಾರೆ ಆದರೆ ಮದುವೆಯ (Marriage) ನಂತರ ಮಾತ್ರ ಅವರು, ತಮ್ಮ ಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತಾರೆ. ಮದುವೆಯ ನಂತರ ಹುದ್ದೆ, ಹಣ, ಪ್ರತಿಷ್ಠೆ ಎಲ್ಲವೂ ಸಿಗುತ್ತದೆ. ಅವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನವನ್ನು ನಡೆಸುತ್ತಾರೆ.
ಇದನ್ನೂ ಓದಿ : ಮೌನಿ ಅಮಾವಾಸ್ಯೆಯಂದು ಈ ಸುಲಭ ಕೆಲಸ ಮಾಡಿ; ಲಕ್ಷ್ಮಿದೇವಿ ವರ್ಷವಿಡೀ ನಿಮ್ಮ ಮೇಲೆ ಸಂಪತ್ತು ಸುರಿಸುತ್ತಾಳೆ
P ಅಕ್ಷರದಿಂದ ಹೆಸರೂ ಆರಂಭವಾದರೆ : ಯಾರ ಹೆಸರು P ಅಕ್ಷರದಿಂದ ಆರಂಭವಾಗುತ್ತದೆಯೋ ಅವರು ತಮ್ಮ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಾರೆ. ಆದರೆ, ಮದುವೆಯಾದ ತಕ್ಷಣ ಅವರ ಜೀವನದ ಕೆಟ್ಟ ದಿನಗಳು ಹಿಂದೆ ಸರಿಯುತ್ತವೆ (Lucky names). ಹಣ, ಪ್ರಗತಿ ಎಲ್ಲವೂ ಯಾವರನ್ನು ಹಿಂಬಾಲಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.