ಹಣೆ, ಕೆನ್ನೆಯಲ್ಲಿ ಮಾತ್ರ ಮೊಡವೆ ಕಾಣಿಸಿಕೊಳ್ಳುತ್ತಿವೆಯೇ? ಈ ಆರೋಗ್ಯ ಸಮಸ್ಯೆಯೂ ಕಾರಣವಾಗಿರಬಹುದು, ಎಚ್ಚರ!

Acne on forehead and Cheeks: ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಆದರೆ ಮುಖದ ಆಯ್ದ ಭಾಗಗಳಲ್ಲಿ ಮಾತ್ರ ಮೊಡವೆಗಳು ಕಾಣಿಸಿಕೊಂಡರೇ ಅದು ಆರೋಗ್ಯ ಸಮಸ್ಯೆಯಿಂದಲೇ. ಇಂತಹ ಸಂದರ್ಭದಲ್ಲಿ ಹೊಟ್ಟೆ ಆರೋಗ್ಯದ ಕಡೆ ಗಮನ ನೀಡಿ. 

Written by - Savita M B | Last Updated : Sep 26, 2023, 09:10 AM IST
  • ಪ್ರತಿದಿನ ನಾವು ಸೇವಿಸುವ ಆಹಾರವೂ ನಮ್ಮ ತ್ವಚೆಯ ಪರಿಣಾಮ ಬೀರುತ್ತದೆ.
  • ಮುಖ ಮತ್ತು ಕೆನ್ನೆಯಲ್ಲಿ ಮೊಡವೆಗಳು ಕಾಣಿಸಿಕೊಳ್ಳಲು ಕಾರಣಗಳು
  • ಹೊಟ್ಟೆಯ ಆರೋಗ್ಯವನ್ನು ಸುಧಾರಿಸಲು ಇಲ್ಲಿವೆ ಸಿಂಪಲ್‌ ಟಿಪ್ಸ್‌
ಹಣೆ, ಕೆನ್ನೆಯಲ್ಲಿ ಮಾತ್ರ ಮೊಡವೆ ಕಾಣಿಸಿಕೊಳ್ಳುತ್ತಿವೆಯೇ? ಈ ಆರೋಗ್ಯ ಸಮಸ್ಯೆಯೂ ಕಾರಣವಾಗಿರಬಹುದು, ಎಚ್ಚರ!  title=

Beauty Tips: ಪ್ರತಿದಿನ ನಾವು ಸೇವಿಸುವ ಆಹಾರವೂ ನಮ್ಮ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.  ಹದಿಹರೆಯದ ವಯಸ್ಸಿನಲ್ಲಿ ಮೊಡವೆಗಳು ಸಮಸ್ಯೆ ಬರುವುದು ಸಾಮಾನ್ಯ. ಆದರೆ ನಿಮ್ಮ  ಹೊಟ್ಟೆಯಲ್ಲಿ ಏನಾದರೂ ಸಮಸ್ಯೆ ಇದ್ದಾಗ ನಿಮ್ಮ ತ್ವೆಚೆಯ ಕೆಲವು ಭಾಗಗಳಲ್ಲಿ ಮಾಮಾತ್ರ ಮೊಡವೆಗಳು ಕಾಣಿಸಿಕೊಳ್ಳುತ್ತವೆ. 

ಕೆಲವೊಂದು ಆಹಾರಗಳು ನಮ್ಮ ದೇಹಕ್ಕೆ ಆಗುವುದಿಲ್ಲ ಅಂದರೇ ಅಲರ್ಜಿಯನ್ನು ಉಂಟುಮಾಡುತ್ತವೆ. ಆ ರೀತಿಯ ಆಹಾರ ಸೇವಿಸಿದಾಗ, ಕರಿದ ತಿಂಡಿ, ಹೆಚ್ಚು ಮಾಂಸಾಹಾರ ಸೇವನೆ, ಮದ್ಯವ ಸೇವನೆ ಇವೆಲ್ಲ ಕಾರಣಗಳಿಂದ ಮೊಡವೆ ಸಮಸ್ಯೆ ಉದ್ಭವವಾಗುತ್ತದೆ. 

ಇದನ್ನೂ ಓದಿ-ಈ ಒಂದು ಎಲೆ ಸಾಕು.. ಕೂದಲು ದಟ್ಟ ಕಪ್ಪು ಬಲವಾಗಿ ಬೆಳೆಯುತ್ತದೆ

ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೇ ನಿಮ್ಮ ಹೊಟ್ಟೆಯ ಆರೋಗ್ಯ ಸರಿಯಿಲ್ಲ ಎಂದರ್ಥ

ಚರ್ಮದ ಕಜ್ಜಿ ಹಾಗೂ ತುರಿಕೆ: ನಿಮ್ಮ ಹೊಟ್ಟೆಯ ಆರೋಗ್ಯಲ್ಲಿ ಏನಾದರೂ ತೊಂದರೇ ಇದ್ದರೆ ಅದು ನಿಮ್ಮ ಮುಖದಲ್ಲಿ ಗೋಚರವಾಗುತ್ತದೆ. ಹೌದು ಈ ಕಜ್ಜಿ, ತುರಿಕೆ, ಅಲರ್ಜಿಯಂತಹ ಸಮಸ್ಯೆಗಳು ಹೊಟ್ಟೆಯ ಅನಾರೋಗ್ಯದಿಂದಲೇ ಉಂಟಾಗುತ್ತವೆ. 

ಹಣೆ ಮತ್ತು ಕೆನ್ನೆಯಲ್ಲಿ ಮಾತ್ರವ ಮೊಡವೆ ಕಾಣಿಸಿಕೊಳ್ಳುವುದು: ಹಣೆ ಮತ್ತು ಕೆನ್ನೆಯಲ್ಲಿ ಮಾತ್ರ ಮೊಡವೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದರೇ ನೀವು ನಿಮ್ಮ ಹೊಟ್ಟೆಯ ಆರೋಗ್ಯದ ಕಡೆಗೆ ಗಮನ ಕೊಡಲೇಬೇಕು. ಬ್ಯಾಕ್ಟೀರಿಯಾ ಸೋಂಕು, ಅನ್ನನಾಳದಲ್ಲಿ ತೊಂದರೆ ಈ ಎಲ್ಲ ಸಮಸ್ಯೆಗಳಿಂದ ಮುಖದ ಆಯ್ದ ಭಾಗದಲ್ಲಿ ಮಾತ್ರ ಮೊಡವೆಗಳು ಹುಟ್ಟಿಕೊಳ್ಳುತ್ತವೆ. 

ಜೀರ್ಣಕ್ರಿಯೆ ಸಮಸ್ಯೆ: ಜೀರ್ಣಕ್ರಿಯೆಯಲ್ಲಿ ಏನಾದರೂ ತೊಂದರೇ ಇದ್ದಾಗ ಉರಿಯೂತ, ಆಗಾಗ ಮಲ ವಿಸರ್ಜನೆ, ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತವೆ. ಇವೆಲ್ಲದರ ಜೊತೆಗೆ ಮೊಡವೆಗಳೂ ಕಾಣಿಸಿಕೊಳ್ಳುತ್ತವೆ.

ಸೋರಿಯಾಸಿಸ್: ಈ ಸೋರಿಯಾಸಿಸ್ ಅಧಿಕ ಒತ್ತಡದಿಂದ ಉಂಟಾಗುವ ತ್ವಚೆಯ ಸಮಸ್ಯೆಯಾಗಿದ್ದು, ಇದರಿಂದ ಮುಖದಲ್ಲಿ ಪ್ಯಾಚ್‌ಗಳು ಹುಟ್ಟಿಕೊಳ್ಳುತ್ತವೆ. 

ಇದನ್ನೂ ಓದಿ-ಜೀವನದಲ್ಲಿ ಎಂತಹ ಪರಿಸ್ಥಿತಿಯೇ ಎದುರಾಗಲಿ ಈ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!

ಹೊಟ್ಟೆಯ ಆರೋಗ್ಯ ಸುಧಾರಿಸಲು ಈ ಟಿಪ್ಸ್‌ ಫಾಲೋ ಮಾಡಿ

*ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
*ಯೋಗ, ಧ್ಯಾನ ಮಾಡಿ 
*ಮೊಸರು ಮಜ್ಜಿಗೆಯಂತಹ ಪ್ರೊಬಯೋಟಿಕ್‌ ಆಹಾರಗಳನ್ನು ಹೆಚ್ಚು ಸೇವಿಸಿ
*ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸಿ ಆದರೆ ಮಿತವಾಗಿರಲಿ
*ಹಣ್ಣು, ತರಕಾರಿ, ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸಿ
*ಬಣ್ಣಗಳನ್ನು ಹಾಕಿ ಮಾಡಿದ ಆಹಾರದಿಂದ ದೂರವಿರಿ. 
*ಧೂಮಪಾನ, ಜಂಕ್‌ಫುಡ್‌ಗಳನ್ನು ಆದಷ್ಟು ಅವೈಡ್‌ ಮಾಡಿ 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News