Chandra Grahan 2022 Effect on Zodiac Signs: 2022 ರ ವರ್ಷದ ಮೊದಲ ಚಂದ್ರ ಗ್ರಹಣವು 16 ಮೇ 2022 ರಂದು ಸಂಭವಿಸಲಿದೆ. ಸೋಮವಾರ ಈ ಚಂದ್ರಗ್ರಹಣವು ವೃಶ್ಚಿಕ ರಾಶಿಯಲ್ಲಿ ಸಂಭವಿಸಲಿದೆ. ಭಾರತದಲ್ಲಿ ಇದರ ಗೋಚರತೆಯ ಕೊರತೆಯಿಂದಾಗಿ, ಗ್ರಹಣದ ಸೂತಕಾವಧಿಗೆ ಮಾನ್ಯತೆ ಇರುವುದಿಲ್ಲ. ಆದಾಗ್ಯೂ, ವರ್ಷದ ಮೊದಲ ಚಂದ್ರ ಗ್ರಹಣ ದಿನ ಅನೇಕ ವಿಶೇಷ ಕಾಕತಾಳೀಯಗಳಿಗೆ ಸಾಕ್ಷಿಯಾಗಲಿದೆ. ಇದು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಕೆಲ ರಾಶಿಗಳ ಜಾತಕದ ಜನರಿಗೆ, ವರ್ಷದ ಮೊದಲ ಚಂದ್ರ ಗ್ರಹಣವು ಸಮಸ್ಯೆಗಳನ್ನು ಕೂಡ ಉಂಟುಮಾಡಬಹುದು, ಆದರೆ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ, ಇದು ಕೆಲ ರಾಶಿಗಳ ಜನರ ಪಾಲಿಗೆ ಲಾಭದಾಯಕವೆಂದು ಸಾಬೀತಾಗಲಿದೆ. ವರ್ಷದ ಮೊದಲ ಚಂದ್ರಗ್ರಹಣದಿಂದ ಯಾವ ರಾಶಿಯ ಜನರಿಗೆ ಪ್ರಯೋಜನ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
1. ಮೇಷ ರಾಶಿ- ಚಂದ್ರ ಗ್ರಹಣವು ಮೇಷ ರಾಶಿಯ ಜನರ ಮೇಲೆ ವಿಶೇಷ ಪರಿಣಾಮ ಬೀರಲಿದೆ. ಈ ಜಾತಕದ ಜನರು ತಮ್ಮ ವ್ಯವಹಾರ ಮತ್ತು ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ನಿರೀಕ್ಷಿಸಬಹುದು. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ಜನರೊಂದಿಗೆ ಉತ್ತಮ ಬಾಂಧವ್ಯ ಏರ್ಪಡಲಿದೆ. ಸುಖ-ಸೌಕರ್ಯಗಳು ಹೆಚ್ಚಾಗಲಿವೆ.
2. ಸಿಂಹ ರಾಶಿ- ಸಿಂಹ ರಾಶಿಯವರಿಗೆ, ಸೋಮವಾರ, ಮೇ 16 ಮಂಗಳಕರ ಸಾಬೀತಾಗಲಿದೆ. ಏಕೆಂದರೆ, ವರ್ಷದ ಮೊದಲ ಸಂಪೂರ್ಣ ಚಂದ್ರ ಗ್ರಹಣವು ನಿಮ್ಮ ಮೇಲೆ ಅನುಕೂಲಕರ ಪರಿಣಾಮವನ್ನು ಬೀರಲಿದೆ. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿರ್ದಿಷ್ಟ ವ್ಯಕ್ತಿಯಿಂದ ಪ್ರಯೋಜನಗಳನ್ನು ಪಡೆಯುವಿರಿ. ಹಿರಿಯರ ಸಲಹೆ ಸಿಗಲಿದೆ. ಮಾತಿನಲ್ಲಿ ತಾಳ್ಮೆವಹಿಸಿ ಮತ್ತು ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ.
ಇದನ್ನೂ ಓದಿ-Tulsi Plant Remedies : ಈ ನಾಲ್ಕು ದಿನ ಅಪ್ಪಿ ತಪ್ಪಿಯೂ ತುಳಸಿ ಗಿಡಕ್ಕೆ ನೀರು ಅರ್ಪಿಸಬೇಡಿ, ಮುನಿಸಿಕೊಳ್ಳುತ್ತಾಳೆ ಲಕ್ಷ್ಮಿ
3. ಧನು ರಾಶಿ- ಚಂದ್ರ ಗ್ರಹಣವು ಧನು ರಾಶಿಯವರಿಗೆ ಧನಾತ್ಮಕ ಪರಿಣಾಮ ಬೀರಲಿದೆ. ಈ ಸಮಯದಲ್ಲಿ, ನೀವು ಆರ್ಥಿಕ ಪ್ರಗತಿಯನ್ನು ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯಬಹುದು. ಹೂಡಿಕೆಯಿಂದ ಲಾಭವಾಗುವ ನಿರೀಕ್ಷೆ ಇದೆ. ಧನು ರಾಶಿಯ ಜನರು ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಬಹುದು. ತಾಳ್ಮೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿ. ಬಲವಾದ ಆರ್ಥಿಕ ಸ್ಥಿತಿಯ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ-Vastu Tips: ಮನೆಯ ಈ ದಿಕ್ಕಿನಲ್ಲಿ ಲಾಫಿಂಗ್ ಬುದ್ಧನನ್ನು ಅಪ್ಪಿತಪ್ಪಿ ಇಟ್ಟರೂ ಅಪಾಯ ತಪ್ಪಿದ್ದಲ್ಲ!
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.