Auspicious Gifts: ಈ ಉಡುಗೊರೆಗಳು ಸಿಗುವುದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಯಾವ ಉಡುಗೊರೆ ಯಾವ ಸಂಕೇತ ನೀಡುತ್ತದೆ?

Good Luck Gifts: ಕೆಲ ವಸ್ತುಗಳು ಅತ್ಯಂತ ಶುಭವಾಗಿರುತ್ತವೆ. ಅವು ಸಕಾರಾತ್ಮಕ ಶಕ್ತಿಯ ಮೂಲಗಳಾಗಿರುತ್ತವೆ ಹಾಗೂ ಅವುಗಳ ಉಪಸ್ಥಿತಿ ಇಡೀ ವಾತಾವರಣವನ್ನು ಸಕಾರಾತ್ಮಕಗೊಳಿಸುತ್ತದೆ. ಈ ಶುಭ ವಸ್ತುಗಳು ಉಡುಗೊರೆಯ ರೂಪದಲ್ಲಿ ಬಂದರೆ ಜೀವನದಲ್ಲಿ ಸೌಭಾಗ್ಯವೇ ಪ್ರಾಪ್ತಿಯಾಗುತ್ತದೆ.   

Written by - Nitin Tabib | Last Updated : Jun 6, 2022, 05:36 PM IST
  • ಉಡುಗೊರೆಗಳು ಕೂಡ ಸೌಭಾಗ್ಯ ಹಾಗೂ ದೌರ್ಭಾಗ್ಯ ತರುತ್ತವೆ.
  • ಈ ವಸ್ತುಗಳು ಉಡುಗೊರೆಯ ರೂಪದಲ್ಲಿ ಬಂದರೆ ಭಾಗ್ಯ ಬದಲಾಗುತ್ತದೆ.
  • ಈ ವಸ್ತುಗಳನ್ನು ಎಂದಿಗೂ ಕೂಡ ಉಡುಗೊರೆಯಾಗಿ ಕೊಡಬೇಡಿ.
Auspicious Gifts: ಈ ಉಡುಗೊರೆಗಳು ಸಿಗುವುದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಯಾವ ಉಡುಗೊರೆ ಯಾವ ಸಂಕೇತ ನೀಡುತ್ತದೆ? title=
Vastu Tips On Gifts

Good Luck sign by Gifts: ವಿಶೇಷ ಸಂದರ್ಭಗಳಲ್ಲಿ ಜನರು ತಮ್ಮ ಹತ್ತಿರದ ಸಂಬಂಧಿಗಳಿಗೆ, ಬಂಧು ಮಿತ್ರರಿಗೆ, ಸಹೋದ್ಯೋಗಿಗಳಿಗೆ ಉಡುಗೊರೆಯನ್ನು ನೀಡುತ್ತಾರೆ. ಈ ಉಡುಗೊರೆಗಳು ಸಾಕಷ್ಟು ಖುಷಿಯನ್ನು ಕೊಡುತ್ತವೆ ಮತ್ತು ವಿಶೇಷ ಸಂದರ್ಭಗಳನ್ನು ಅವಿಸ್ಮರಣೀಯಗೊಳಿಸುತ್ತವೆ. ಇದೇ ಕಾರಣದಿಂದ ಜನರು ಹಲವಾರು ವರ್ಷಗಳ ಕಾಲ ಉಡುಗೊರೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಆದರೆ, ಈ ಉಡುಗೊರೆಗಳು ಸೌಭಾಗ್ಯ ಹಾಗೂ ದೌರ್ಭಾಗ್ಯಕ್ಕೂ ಕೂಡ ಕಾರಣವಾಗುತ್ತವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ಉಡುಗೊರೆಗಳಿಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ವಿಶೇಷ ಸಲಹೆಗಳನ್ನು ನೀಡಲಾಗಿದೆ.

ಉಡುಗೊರೆ ರೂಪದಲ್ಲಿ ಇವುಗಳನ್ನು ಎಂದಿಗೂ ಕೂಡ ಕೊಡಬೇಡಿ
ಉಡುಗೊರೆಯಾಗಿ ಎಂದಿಗೂ ಕೂಡ ಹರಿತವಾದ ವಸ್ತುವನ್ನು, ಶೂ-ಚಪ್ಪಲಿಗಳನ್ನು ಕೊಡಬೇಡಿ. ಉಡುಗೊರೆಯ ರೂಪದಲ್ಲಿ ಈ ವಸ್ತುಗಳನ್ನು ನೀಡುವುದು ಸಂಬಂಧದಲ್ಲಿ ಕಹಿ ಹಿಂಡಿದಂತೆ. ಇದಲ್ಲದೆ ರುಮಾಲು ಅಥವಾ ಕರವಸ್ತ್ರವನ್ನು ಉಡುಗೊರೆಯ ರೂಪದಲ್ಲಿ ಕೊಡಬೇಡಿ. ಹೀಗೆ ಮಾಡುವುದರಿಂದ ನೀವು ಉಡುಗೊರೆ ನೀಡುವವರ ಜೊತೆಗೆ ನಿಮ್ಮ ಮತಭೇಧ ಅಥವಾ ಜಗಳ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. 

ಈ ಉಡುಗೊರೆಗಳು ಮನೆಗೆ ಸೌಭಾಗ್ಯವನ್ನು ತರುತ್ತವೆ
ಲೋಹದ ಆನೆ:
ಚಿನ್ನ, ಬೆಳ್ಳಿ, ಹಿತ್ತಾಳೆ, ಅಷ್ಟ ಧಾತುಗಳಿಂದ ತಯಾರಿಸಲಾದ ಆನೆಯನ್ನು ಕಾಣಿಕೆಯ ರೂಪದಲ್ಲಿ ಪಡೆಯುವುದು ತುಂಬಾ ಶುಭಕರ ಎನ್ನಲಾಗುತ್ತದೆ. ಆನೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಲೋಹದ ಆನೆಗಳು ಇರುವ ಮನೆಯಲ್ಲಿ ದೇವಿ ಲಕ್ಷ್ಮಿಯ ಚಿತ್ರವನ್ನು ಹಾಕುವುದು ಒಳ್ಳೆಯದು. ಲೋಹದ ಆನೆ ಉಡುಗೊರೆಯಾಗಿ ಬಂದರೆ, ಅದು ಮನೆಯಲ್ಲಿ ಆದಾಯವನ್ನು ಹೆಚ್ಚಿಸುವ ಅಥವಾ ಧನಾಗಮನದ ಸಂಕೇತವಾಗಿದೆ.

ಪಿಯೋನಿಯಾ ಹೂವುಗಳು: ಫೆಂಗ್ ಶೂಯಿ ನಿಯಮಗಳಲ್ಲಿ ಪಿಯೋನಿಯಾ ಹೂವುಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಹೂವುಗಳು ಉಡುಗೊರೆಯಾಗಿ ಬಂದರೆ, ಅದು ನಿಮ್ಮ ಅದೃಷ್ಟದ ಸಂಕೇತವಾಗಿದೆ. ಅಷ್ಟೇ ಅಲ್ಲ, ಈ ಹೂವುಗಳ ಚಿತ್ರವನ್ನು ಉಡುಗೊರೆಯಾಗಿ ನೀವು ಪಡೆದರೆ ಅಥವಾ ಮನೆಯಲ್ಲಿ ಅಂತಹ ಚಿತ್ರವಿದ್ದರೆ ಮನೆಯಲ್ಲಿ ಧನಾಗಮನ ಹೆಚ್ಚಾಗುತ್ತದೆ.

ಲಾಫಿಂಗ್ ಬುದ್ಧ: ಫೆಂಗ್ ಶೂಯಿ ನಿಯಮಗಳಲ್ಲಿ ಲಾಫಿಂಗ್ ಬುದ್ಧನನ್ನು ತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ. ಹೀಗಾಗಿ ಹಲವು ಮನೆಗಳಲ್ಲಿ ನೀವು ಲಾಫಿಂಗ್ ಬುದ್ಧನ ಪ್ರತಿಮೆಯನ್ನು ನೋಡಬಹುದು. ತನ್ನ ಕೈಯಲ್ಲಿ ಹಣದ ಕಟ್ಟನ್ನು ಹೊಂದಿರುವ ದೊಡ್ಡ ಹೊಟ್ಟೆಯೊಂದಿಗೆ ನಗುತ್ತಿರುವ ನಗುವ ಬುದ್ಧ ನಿಮ್ಮ ಬಳಿ ಉಡುಗೊರೆಯ ರೂಪದಲ್ಲಿ ಬಂದರೆ, ನೀವು ಖುಷಿಪಡಬೇಕು. ಏಕೆಂದರೆ ಅದು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ.

ಕ್ರಾಸ್ಸುಲಾ ಅಥವಾ ಬಿದಿರಿನ ಸಸ್ಯ: ಸಸ್ಯಗಳನ್ನು ಉಡುಗೊರೆಯಾಗಿ ನೀಡುವುದು ಪರಿಸರದ ದೃಷ್ಟಿಯಿಂದ ಒಂದು ಒಳ್ಳೆಯ ಬೆಳವಣಿಗೆಯಾಗಿದೆ ಮತ್ತು ಕೆಲವು ಸಸ್ಯಗಳನ್ನು ಶಾಸ್ತ್ರಗಳಲ್ಲಿ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬಿದಿರು ಅಥವಾ ಕ್ರಾಸ್ಸುಲಾ ಗಿಡವನ್ನು ಉಡುಗೊರೆಯಾಗಿ ಪಡೆಯುವುದರಿಂದ ಮನೆಯಲ್ಲಿ ಧನಗಮನ ಹೆಚ್ಚಾಗುತ್ತದೆ. ಅಲ್ಲದೆ, ಇದು ಮನೆಯ ಜನರಿಗೆ ಪ್ರಗತಿಯನ್ನು ನೀಡುತ್ತದೆ.

ಇದನ್ನೂ ಓದಿ-Shani Dev:ಈ ಮೂರು ರಾಶಿಗಳ ಜನರ ಮೇಲೆ ಯಾವಾಗಲು ಶನಿ ಕೃಪಾದೃಷ್ಠಿ ಇರುತ್ತದೆ, ನಿಮ್ಮ ರಾಶಿ ಇದೆಯಾ ಇವುಗಳಲ್ಲಿ?

ವಿಂಡ್‌ಚೈಮ್‌ಗಳು: ವಿಂಡ್‌ಚೈಮ್‌ಗಳನ್ನು ಉಡುಗೊರೆಯಾಗಿ ಪಡೆಯುವುದು ತುಂಬಾ ಮಂಗಳಕರ. ಇದು 8 ಕೋಲುಗಳನ್ನು ಹೊಂದಿದ್ದರೆ ಮತ್ತು ಲೋಹ ಅಥವಾ ಮರದಿಂದ ಕೂಡಿದ್ದರೆ, ಅದು ಇನ್ನಷ್ಟು ಹೆಚ್ಚು ಮಂಗಳಕರವಾಗಿರುತ್ತದೆ. ಇದು ನಿಮ್ಮ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ-Samudrik Shastra: ನಿಮ್ಮ ಕಣ್ಣುಗಳು ಹೇಳುತ್ತವೆ ಜೀವನದ ರಹಸ್ಯ!

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News