How To Save Money While Shopping: ಶಾಪಿಂಗ್ ಮಾಡುವುದೆಂದರೆ ಎಲ್ಲರಿಗೂ ಇಷ್ಟ. ಕೈಯ್ಯಲ್ಲಿ ಹಣವಿದ್ದರೆ ಸಾಕು ಮನಸ್ಸು ಶಾಪಿಂಗ್ ನತ್ತ ಹೊರಳುತ್ತದೆ. ಶಾಪಿಂಗ್ ಮಾಡುವುದು ಎಂದಾದರೆ ಜೇಬಿನಲ್ಲಿದ್ದ ಹಣ ಹೇಗೆ ಖಾಲಿಯಾಗುತ್ತದೆ ಎಂದು ಗೊತ್ತಾಗುವುದೇ ಇಲ್ಲ. ಹಾಗಂತ ಶಾಪಿಂಗ್ ಮಾಡಲೇಬಾರದಾ ಎನ್ನುವ ಪ್ರಶ್ನೆ ಏಳುತ್ತದೆ. ಕಡಿಮೆ ಹಣದಲ್ಲಿ ಹೆಚ್ಚು ಶಾಪಿಂಗ್ ಮಾಡುವುದೇ ನಿಜವಾದ ಪ್ರತಿಭೆ. ಆದರೆ ಅನೇಕ ಜನರು ಶಾಪಿಂಗ್ ಸಮಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಜೇಬಿಗೆ ಕತ್ತರಿ ಬೀಳುತ್ತದೆ. ಮಾತ್ರವಲ್ಲ ತಿಂಗಳ ಬಜೆಟ್ ಸಂಪೂರ್ಣವಾಗಿ ಹಾಳಾಗುತ್ತದೆ. ಹೀಗಾಗಿ ಶಾಪಿಂಗ್ ಮಾಡುವಾಗ ಅನೇಕ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲಿ ನಾವು ಹೇಳುವ ಕ್ರಮಗಳನ್ನು ಅನುಸರಿಸುವುದರಿಂದ ಕಡಿಮೆ ವೆಚ್ಚದಲ್ಲಿ ಶಾಪಿಂಗ್ ಮಾಡಿ ಮುಗಿಸುವುದು ಸಾಧ್ಯವಾಗುತ್ತದೆ.
ಈ ರೀತಿ ಶಾಪಿಂಗ್‌ನಲ್ಲಿ ಹಣವನ್ನು ಉಳಿಸಿ :
ತರಾತುರಿಯಲ್ಲಿ ಶಾಪಿಂಗ್ ತೆರಳುವುದನ್ನು ತಪ್ಪಿಸಿ :
ಆರಾಮವಾಗಿ ಶಾಪಿಂಗ್ ಮಾಡಲು ನಿಮ್ಮ ಬಳಿ ಸಮಯವಿದೆಯೇ ಎನ್ನುವುದನ್ನು ಶಾಪಿಂಗ್ ತೆರಳುವ ಮುನ್ನ ನೋಡಿಕೊಳ್ಳಿ. ಶಾಪಿಂಗ್ ಮಾಡುವಾಗ ಬೇಕಾದಷ್ಟು ಸಮಯವಿದ್ದರೆ ಏನು ಬೇಕು ಏನು ಬೇಡ ಎನ್ನುವುದನ್ನು ತಾಳ್ಮೆಯಿಂದ ಯೋಚಿಸುವುದು ಸಾಧ್ಯವಾಗುತ್ತದೆ. ಹೀಗೆ ಮಾಡುವುದರಿಂದ ಅನಾವಶ್ಯಕ ವಸ್ತುಗಳನ್ನು ಖರೀದಿಸಿ ತರುವುದನ್ನು ತಪ್ಪಿಸಬಹುದು. ನಿಜವಾಗಿಯೂ ಅಗತ್ಯ ವಸ್ತುಗಳ ಮೇಲೆ ಹಣ ವ್ಯಯಾ ಮಾಡುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Relationship Tips: ಹುಡುಗಿಯರು ಈ 5 ಗುಣಗಳಿಗೆ ಆಕರ್ಷಿತರಾಗುತ್ತಾರೆ, ನೀವೂ ಪ್ರಯತ್ನಿಸಿ!
ಶಾಪಿಂಗ್ ತೆರಳುವ ಮುನ್ನ ಲಿಸ್ಟ್ ಮಾಡಿಕೊಳ್ಳಿ :
ಶಾಪಿಂಗ್ ಗೆ ಹೋಗುವ ಮುನ್ನ ನಿಮ್ಮ ನೀವು ಏನೆಲ್ಲಾ ಖರೀದಿಸಬೇಕು ಎನ್ನುವುದನ್ನು ಲಿಸ್ಟ್ ಮಾಡಿಕೊಳ್ಳಿ. ಇಲ್ಲವಾದರೆ ಮಾರುಕಟ್ಟೆಗೆ ಹೋಗಿ ಏನು ಖರೀದಿಸಬೇಕು, ಏನು ಖರೀದಿಸಬಾರದು ಎಂದು ಯೋಚಿಸುವುದರಲ್ಲೇ ಸಮಯ ಕಳೆದು ಹೋಗುತ್ತದೆ. ಲಿಸ್ಟ್ ಮಾಡಿಕೊಂಡು ಹೋದಾಗ ಏನು ಖರೀದಿಸಬೇಕು ಎನ್ನುವುದು ಗೊತ್ತಿರುತ್ತದೆ, ಮಾತ್ರವಲ್ಲ, ಅನಗತ್ಯ ವಸ್ತುಗಳ ಮೇಲೆ ಹಂ ಖರ್ಚು ಮಾಡುವುದು ಕೂಡಾ ತಪ್ಪುತ್ತದೆ.
ಇಂಪಲ್ಸ್ ಬೈಯಿಂಗ್ ಗೆ ಹೋಗಲೇ ಬೇಡಿ :
ಇಂಪಲ್ಸ್ ಬೈಯಿಂಗ್ ಅಂದರೆ ನಿರ್ದಿಷ್ಟ ವಸ್ತುವನ್ನು ಖರೀದಿಸುವ ಯೋಚನೆ ಇಲ್ಲದೆ ಶಾಪಿಂಗ್ ಗೆ ತೆರಳಿ ಅಲ್ಲಿ ಕಂಡದ್ದನ್ನು ಖರೀದಿಸಿ ತರುವುದು. ಈ ಅಭ್ಯಾಸವು ನಿಮ್ಮ ಮಾಸಿಕ ಬಜೆಟ್ ಅನ್ನು ಹಾಳುಮಾಡುತ್ತದೆ. ಹೀಗಾಗಿ ಸುಖಾ ಸುಮ್ಮನೆ ಕಂಡ ಕಂಡ ವಸ್ತುಗಳ ಮೇಲೆ ಹಣ ಹಾಕುವ ಬದಲು ನಿಜವಾಗಿಯೂ ಅಗತ್ಯ ಇರುವ ವಸ್ತುಗಳ ಮೇಲೆ ಖರ್ಚು ಮಾಡುವುದು ಸೂಕ್ತ.
ಇದನ್ನೂ ಓದಿ : Vastu Tips : ಗ್ರಹ ದೋಷಕ್ಕೆ ಪರಿಹಾರ ನೀಡುತ್ತದೆ ಅಡುಗೆ ಮನೆಯಲ್ಲಿರುವ ಈ ವಸ್ತು!
ಶಾಪಿಂಗ್ ಮಾಡುವ ಮುನ್ನ ಮನೆಯಲ್ಲಿಯೇ ಪರಿಶೀಲಿಸಿ :
ರೇಷನ್ ಆಗಲಿ ಅಥವಾ ಬೇರೆ ಯಾವ ವಸ್ತುವೇ ಆಗಲಿ ಖರೀದಿ ಮಾಡುವ ಮುನ್ನ ನಿಮ್ಮ ಮನೆಯನ್ನೊಮ್ಮೆ ಪರಿಶೀಲಿಸಿಕೊಳ್ಳಿ. ಫ್ರಿಡ್ಜ್, ಸ್ಟೋರ್ ರೂಂ , ಡ್ರಾಯರ್ ಮತ್ತು ಬೀರುಗಳನ್ನು ಪರಿಶೀಲಿಸಿ ನೋಡಿ. ಇಲ್ಲವಾದರೆ, ಮನೆಯಲ್ಲಿ ಈಗಾಗಲೇ ಇರುವ ವಸ್ತುಗಳು ಮತ್ತೆ ಅದೇ ವಸ್ತುವನ್ನು ಖರೀದಿಸಿ ತರುವ ಸಂದರ್ಭ ಎದುರಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.