Bad Morning Habits: ಮುಂಜಾನೆಯ ಈ ಐದು ಅಭ್ಯಾಸಗಳಿಂದಲೂ ಹೆಚ್ಚಾಗುತ್ತೆ ತೂಕ

Bad Morning Habits: ಪ್ರಸ್ತುತ ಬಹುತೇಕ ಮಂದಿಯನ್ನು ಕಾಡುತ್ತಿರುವ ಸಮಸ್ಯೆ ಎಂದರೆ ತೂಕ ಹೆಚ್ಚಳ. ನೀವು ಸೇವಿಸುವ ಆಹಾರ ಮಾತ್ರವಲ್ಲ, ನಿಮ್ಮ ಬೆಳಗಿನ ಕೆಲವು ಅಭ್ಯಾಸಗಳು ಕೂಡ ತೂಕ ಹೆಚ್ಚಳಕ್ಕೆ ಕಾರಣವಿರಬಹುದು. ಬೆಳಗಿನ ಯಾವ ಕೆಟ್ಟ ಅಭ್ಯಾಸಗಳು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ತಿಳಿಯಿರಿ.

Written by - Yashaswini V | Last Updated : Dec 16, 2022, 01:20 PM IST
  • ಬೆಳಿಗ್ಗೆ ಹೊತ್ತು ನೀವೂ ಈ ತಪ್ಪುಗಳನ್ನು ಮಾಡುತ್ತೀರಾ...
  • ಬೆಳಗಿನ ಈ ಅಭ್ಯಾಸಗಳಿಂದ ತೂಕ ಹೆಚ್ಚಾಗುತ್ತದೆ
  • ನೀವು ನಿಮ್ಮ ದಿನವನ್ನು ಸರಿಯಾಗಿ ಪ್ರಾರಂಭಿಸದಿದ್ದರೆ, ನಿಮ್ಮ ಆರೋಗ್ಯವು ಹದಗೆಡಬಹುದು.
Bad Morning Habits: ಮುಂಜಾನೆಯ ಈ ಐದು ಅಭ್ಯಾಸಗಳಿಂದಲೂ ಹೆಚ್ಚಾಗುತ್ತೆ ತೂಕ  title=
Bad morning habits

Bad Morning Habits: ಆರೋಗ್ಯಕರ ಜೀವನಶೈಲಿ, ಉತ್ತಮ ಮುಂಜಾನೆ ನಿಮ್ಮ ದಿನಚರಿಯನ್ನು ಆಹ್ಲಾದಕರವಾಗಿಸುತ್ತದೆ. ಆದರೆ, ಬೆಳಿಗ್ಗೆ ಹೊತ್ತು ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಬೆಳಗಿನ ಈ ಕೆಟ್ಟ ಅಭ್ಯಾಸಗಳು ನಿಮ್ಮ ಒತ್ತಡಭರಿತ ಜೀವನಕ್ಕೆ ಕಾರಣವಾಗುವುದರ ಜೊತೆಗೆ ನಿಮ್ಮ ತೂಕ ಹೆಚ್ಚಳಕ್ಕೂ ಕಾರಣವಾಗಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು, ನಿಮ್ಮ ಬೆಳಗಿನ ಕೆಲವು ಅನಾರೋಗ್ಯಕರ ಅಭ್ಯಾಸಗಳು ದೇಹದ ತೂಕವನ್ನು ಹೆಚ್ಚಿಸುತ್ತದೆ. ಅಂತಹ ಅಭ್ಯಾಸಗಳು ಯಾವುವು ಎಂದು ತಿಳಿಯಿರಿ...

ಮುಂಜಾನೆಯ ಈ ಐದು ಅಭ್ಯಾಸಗಳಿಂದಲೂ ಹೆಚ್ಚಾಗುತ್ತೆ ತೂಕ:
ತಡವಾಗಿ ಏಳುವುದು:

ಪ್ರತಿ ವ್ಯಕ್ತಿಗೂ ಆರೋಗ್ಯವಾಗಿರಲು ನಿತ್ಯ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಅವಶ್ಯಕ. ಆದರೆ, ಇದಕ್ಕಿಂತ ಕಡಿಮೆ ನಿದ್ರೆ ಮಾಡುವುದು ಅಥವಾ ಹೆಚ್ಚು ನಿದ್ರೆ ಮಾಡುವುದು ಎರಡೂ ಕೂಡ ನಿಮ್ಮ ತೂಕದ ಮೇಲೆ ಪರಿಣಾಮ ಬೀರಬಹುದು. ಕೆಲವರು ರಾತ್ರಿ ತಡವಾಗಿ ಮಲಗುವ ಅಭ್ಯಾಸದಿಂದಾಗಿ ಮುಂಜಾನೆ ತಡವಾಗಿ ಏಳುತ್ತಾರೆ. ಇದನ್ನು ತಪ್ಪಿಸಿ, ನಿತ್ಯ ರಾತ್ರಿ 10 ಗಂಟೆಯೊಳಗೆ ಮಲಗಲು ಪ್ರಯತ್ನಿಸಿ. 

ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿಯದಿರುವುದು:
ಕೆಲವರು ಬೆಳಿಗ್ಗೆ ಎದ್ದ ಬಳಿಕ ನೀರು ಕುಡಿಯುವುದಿಲ್ಲ. ಆದರಿದು ನೀವು ಯೋಚಿಸುವುದಕ್ಕಿಂತ ಹೆಚ್ಚಾಗಿ ನಿಮ್ಮ ಸೊಂಟದ ಮೇಲೆ ಪರಿಣಾಮ ಬೀರುತ್ತದೆ. ಮುಂಜಾನೆ ನೀರು ಕುಡಿಯದಿರುವುದು ನಿರ್ಜಲೀಕರಣ ಮತ್ತು ನಿಧಾನ ಚಯಾಪಚಯಕ್ಕೆ ಕಾರಣವಾಗುತ್ತದೆ. ಇದು ನಿಮ್ಮ ತೂಕ ಹೆಚ್ಚಳದ ಮೇಲೂ ಪರಿಣಾಮ ಬೀರಬಹುದು. 

ಇದನ್ನೂ ಓದಿ- ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಬಾಳೆಹಣ್ಣು

ವ್ಯಾಯಾಮ:
ಈ ಓಟದ ಜೀವನಶೈಲಿಯಲ್ಲಿ ವ್ಯಾಯಾಮ ಮಾಡಲು ಸಮಯವೇ ಇರುವುದಿಲ್ಲ. ಆದರೆ, ಬೆಳಿಗ್ಗೆ ಓಟ, ಸ್ಕಿಪ್ಪಿಂಗ್ ಮತ್ತು ಜಾಗಿಂಗ್‌, ವ್ಯಾಯಾಮ ಯಾವುದನ್ನೂ ಮಾಡದಿದ್ದರೆ ತೂಕ ನಷ್ಟ ಸಾಧ್ಯವಾಗುವುದಿಲ್ಲ.

ಕೆನೆಭರಿತ, ಸಕ್ಕರೆ ತುಂಬಿದ ಕಾಫಿ:
ಬೆಳಿಗ್ಗೆ ಕೊಬ್ಬಿನ ಕೆನೆ ಮತ್ತು ಸಕ್ಕರೆಯಿಂದ ತುಂಬಿದ ಒಂದು ಕಪ್ ಕಾಫಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ನೀವೂ ಬೆಳಿಗ್ಗೆ ಹೊತ್ತು ಫುಲ್ ಕ್ರೀಮ್ ಹಾಲಿನಿಂದ ತಯಾರಿಸಿದ ಕಾಫಿ ಕುಡಿಯುವ ಅಭ್ಯಾಸ ಹೊಂದಿದ್ದರೆ, ಇಂದಿನಿಂದಲೇ ಈ ಅಭ್ಯಾಸ ತಪ್ಪಿಸಿ.

ಇದನ್ನೂ ಓದಿ- Weight Loss Drinks: ಮಲಗುವ ಮುನ್ನ ಈ ಡ್ರಿಂಕ್ಸ್ ಕುಡಿದರೆ ಯಾವುದೇ ಜಿಮ್, ವ್ಯಾಯಾಮ ಮಾಡದೆಯೂ ಕರಗುತ್ತೆ ಬೆಲ್ಲಿ ಫ್ಯಾಟ್

ತಪ್ಪಾದ ಆಹಾರ ಪದ್ಧತಿ:
ಆರೋಗ್ಯಕರವಾಗಿರಲು ನಮ್ಮ ಬೆಳಗಿನ ಉಪಹಾರವೂ ಆರೋಗ್ಯಕರವಾಗಿರಬೇಕು. ಉದಾಹರಣೆಗೆ, ನಮ್ಮ ಬೆಳಗಿನ ಉಪಹಾರವು ಪ್ರೊಟೀನ್ ಯುಕ್ತವಾಗಿರಬೇಕು. ಮಾತ್ರವಲ್ಲ, ಇದು ತೂಕ ನಷ್ಟ ವರ್ಧಕವಾಗಿರಬೇಕು. ಆದರೆ, ನಮ್ಮಲ್ಲಿ ಹೆಚ್ಚಿನವರು ನಿತ್ಯ ಬೆಳಿಗ್ಗೆ ಕೊಬ್ಬು ಮತ್ತು ಹೆಚ್ಚಿನ ಸೋಡಿಯಂಯುಕ್ತ ಉಪಹಾರವನ್ನು ಸೇವಿಸುತ್ತಾರೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ತಿಂಡಿ ತಿನ್ನುವಾಗ ಟಿವಿ ವೀಕ್ಷಣೆ:
ನೀವೂ ಕೂಡ ತಿಂಡಿ ಸೇವಿಸುವಾದ ಟಿವಿ ವೀಕ್ಷಿಸುವ ಕೆಟ್ಟ ಅಭ್ಯಾಸವನ್ನು ಹೊಂದಿದ್ದರೆ, ಇಂದಿನಿಂದಲೇ ನಿಮ್ಮ ಈ ಅಭ್ಯಾಸವನ್ನು ತ್ಯಜಿಸಿ. ವಾಸ್ತವವಾಗಿ, ಟಿವಿ ವೀಕ್ಷಿಸುತ್ತಾ ಏನನ್ನಾದರೂ ಸೇವಿಸುವಾಗ ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬುದರ ಮೇಲೆಯೂ ಸರಿಯಾಗಿ ಗಮನಹರಿಸುವುದಿಲ್ಲ. ಇದೂ ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಪ್ಪದೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News