ಈ ಮೂರು ಅಭ್ಯಾಸಗಳಿಂದ ದೂರವಿದ್ದರೆ ಡಯಾಬಿಟೀಸ್ ಅಪಾಯ ಕಡಿಮೆಯಾಗುತ್ತದೆ

ಇನ್ಸುಲಿನ್ ಕೊರತೆಯು ಅನೇಕ ಜೀವಕೋಶಗಳು ಮತ್ತು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಕಾರಣದಿಂದ  ಹೃದಯಾಘಾತ , ಕಣ್ಣಿನ ದೌರ್ಬಲ್ಯ ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.

Written by - Ranjitha R K | Last Updated : Mar 16, 2022, 11:15 AM IST
  • ಮಧುಮೇಹ ರೋಗಿಗಳು ಜಾಗರೂಕರಾಗಿರಬೇಕು
  • ಕೆಟ್ಟ ಅಭ್ಯಾಸಗಳು ಆರೋಗ್ಯವನ್ನು ಹಾಳುಮಾಡುತ್ತವೆ
  • ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿಕೊಳ್ಳಿ
ಈ ಮೂರು ಅಭ್ಯಾಸಗಳಿಂದ ದೂರವಿದ್ದರೆ ಡಯಾಬಿಟೀಸ್ ಅಪಾಯ ಕಡಿಮೆಯಾಗುತ್ತದೆ title=
ಕೆಟ್ಟ ಅಭ್ಯಾಸಗಳು ಆರೋಗ್ಯವನ್ನು ಹಾಳುಮಾಡುತ್ತವೆ (file photo)

ಬೆಂಗಳೂರು : ಮಧುಮೇಹವು (Diabetes) ಇಡೀ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ಗಂಭೀರ ಕಾಯಿಲೆಯಾಗಿದೆ. ಮಧುಮೇಹದ ಸ್ಥಿತಿಯಲ್ಲಿ, ದೇಹದಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ ಅಥವಾ ದೇಹವು ಅದನ್ನು ಬಳಸಲು ಸಾಧ್ಯವಾಗುವುದಿಲ್ಲ (effect of diabetes). ಇದರಿಂದಾಗಿ ಹಲವಾರು ಸಮಸ್ಯೆಗಳಿವೆ ಕಾರಣವಾಗುತ್ತದೆ. ಇದಾದ ನಂತರ ಅನೇಕ ಇತರ ಅಂಗಗಳು ಕೂಡಾ ಹಾನಿಗೊಳಗಾಗಬಹುದು.

ಈ ಮೂರು ಅಭ್ಯಾಸಗಳಿಂದ ಮಧುಮೇಹಿಗಳು ದೂರವಿರಬೇಕು :  
ಇನ್ಸುಲಿನ್ ಕೊರತೆಯು ಅನೇಕ ಜೀವಕೋಶಗಳು ಮತ್ತು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಕಾರಣದಿಂದ  ಹೃದಯಾಘಾತ (Heart attack), ಕಣ್ಣಿನ ದೌರ್ಬಲ್ಯ ಮತ್ತು ಮೂತ್ರಪಿಂಡದ ಕಾಯಿಲೆಗಳ (Kidney problem) ಅಪಾಯ ಹೆಚ್ಚಾಗುತ್ತದೆ. ಮಧುಮೇಹ ರೋಗಿಗಳು ಪ್ರಮುಖವಾಗಿ ಮೂರು ಅಭ್ಯಾಸಗಳಿಂದ ದೂರವಿದ್ದರೆ, ಈ ಅಪಾಯವನ್ನು ಕೂಡಾ ಕಡಿಮೆ ಮಾಡ ಬಹುದು. 

ಇದನ್ನೂ ಓದಿ : Health Tips: ನಿಮ್ಮ ದೇಹದ ಈ ಭಾಗದಲ್ಲಿ ನೋವು ಇದೆಯೇ? ಇದು ಕಿಡ್ನಿ ವೈಫಲ್ಯದ ಲಕ್ಷಣವಾಗಿರಬಹುದು

1. ಅನಾರೋಗ್ಯಕರ ಜೀವನಶೈಲಿ :
ದೇಹವು ಯಾವಾಗಲೂ ಸಕ್ರಿಯವಾಗಿರುವುದು ಬಹಳ ಮುಖ್ಯ. ಸರಿಯಾದ ಜೀವನಕ್ರಮವನ್ನು ಅನುಸರಿಸದೆ ಇದ್ದರೆ, ದೀರ್ಘಕಾಲದ ಕಾಯಿಲೆಗೆ ಒಳಗಾಗುವ ಅಪಾಯ ಹೆಚ್ಚಾಗುತ್ತದೆ (healthy lifestyle). ಆದ್ದರಿಂದ, ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ  ವ್ಯಾಯಾಮ (exercise) ಮಾಡಬೇಕು. ಈಗಾಗಲೇ ಮಧುಮೇಹ ಹೊಂದಿದ್ದರೆ, ನಿಮ್ಮ ದಿನಚರಿಯನ್ನು ಕಡ್ಡಾಯವಾಗಿ ಬದಲಾಯಿಸಿಕೊಳ್ಳಿ. 

 2. ಹೆಚ್ಚು ಸಿಹಿ ಪದಾರ್ಥ ತಿನ್ನುವುದು :
ಕೆಲವು ಜನರು ಹೆಚ್ಚು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮಧುಮೇಹವಿದ್ದಾಗ ಅಧಿಕ ಕ್ಯಾಲೊರಿ ಮಾರಣಾಂತಿಕವಾಗಿ ಪರಿಣಮಿಸಬಹುದು.   ಆದ್ದರಿಂದ, ಸಿಹಿ ಪದಾರ್ಥಗಳನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು.

ಇದನ್ನೂ ಓದಿ : Dandruff: ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ

3. ಬೊಜ್ಜು :
ನಿಮ್ಮ ತೂಕವು ನಿರಂತರವಾಗಿ ಹೆಚ್ಚಾಗುತ್ತಿದ್ದರೆ,  ತಕ್ಷಣದಿಂದಲೇ  ವ್ಯಾಯಾಮ ಮಾಡಲು ಪ್ರಾರಂಭಿಸಿ. ಸ್ಥೂಲಕಾಯತೆಯಿದ್ದಾಗ ದೇಹದೊಳಗಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಕ್ರಮೇಣ ಇದು ಮಧುಮೇಹ ರೋಗಿಗಳ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.

ನೀವು ಡಯಾಬಿಟೀಸ್ ನಿಂದ (diabetes) ದೂರ ಇರಬೇಕಾದರೆ ಆರೋಗ್ಯದ ಬಗ್ಗೆ ಇಂದಿನಿಂದಲೇ ಜಾಗರೂಕರಾಗಿರಿ. ಅನಾರೋಗ್ಯಕರ ಜೀವನಶೈಲಿಯನ್ನು (unhealthy lifestyle)ತ್ಯಜಿಸಿ ಮತ್ತು ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿ. ಮಧುಮೇಹವನ್ನು ತಪ್ಪಿಸಲು, ದೇಹದ ಚಟುವಟಿಕೆಗಳು ಅಗತ್ಯವಾಗಿದೆ. ಇದು ಕ್ಯಾಲೊರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News