ಚಾಣಕ್ಯ ನೀತಿ: ಇಂತಹವರಿಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲು ಹಾಕಿದಂತೆ.. ?

Chanakya: ಆಚಾರ್ಯ ಚಾಣಕ್ಯ ಮಹಾನ್ ತಂತ್ರಜ್ಞ ಎಂದು ಹೆಸರುವಾಸಿಯಾಗಿದ್ದಾರೆ. ವಾಸ್ತವವಾಗಿ, ಭಾರತದ ರಾಜಕೀಯ ಮತ್ತು ಇತಿಹಾಸದ ದಿಕ್ಕನ್ನು ಬದಲಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಜೀವಿತಾವಧಿಯಲ್ಲಿ ಅವರು ನೀತಿ ಸಲಹೆಗಾರ, ತಂತ್ರಜ್ಞ, ಬರಹಗಾರ ಮತ್ತು ರಾಜಕಾರಣಿಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಮಾನವ ಸ್ವಭಾವ ಮತ್ತು ಜೀವನದ ಬಗ್ಗೆ ಅವರ ಸಿದ್ಧಾಂತಗಳು ಇಂದಿಗೂ ಬಹಳ ಉಪಯುಕ್ತವಾಗಿವೆ.

Last Updated : Dec 7, 2023, 10:55 AM IST
  • ಚಾಣಕ್ಯನು ನಂದ ರಾಜವಂಶವನ್ನು ನಾಶಮಾಡಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ರಾಜಕಾರಣಿ
  • ಚಾಣಕ್ಯ ರಾಜಕೀಯ, ಅರ್ಥಶಾಸ್ತ್ರ ಮತ್ತು ಜೀವನದ ವಿಷಯಗಳ ಮೇಲೆ ಅನೇಕ ನೈತಿಕ ತತ್ವಗಳನ್ನು ನೀಡಿದ್ದಾರೆ..
  • ಭಾರತೀಯ ಜ್ಞಾನ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯನಿಗೆ ಮಹತ್ತರವಾದ ಸ್ಥಾನವಿದೆ.
ಚಾಣಕ್ಯ ನೀತಿ: ಇಂತಹವರಿಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲು ಹಾಕಿದಂತೆ.. ? title=

Chanakya Neeti: ಮೌರ್ಯರ ಆಳ್ವಿಕೆಯ ಅವಧಿಯಲ್ಲಿ... ಚಂದ್ರಗುಪ್ತ ಮೌರ್ಯನ ಸಲಹೆಗಾರ, ರಾಜನೀತಿಜ್ಞ, ಅರ್ಥಶಾಸ್ತ್ರಜ್ಞ, ಭಾರತೀಯ ತತ್ವಜ್ಞಾನಿ... ಚಾಣಕ್ಯನನ್ನು ಕೌಟಿಲ್ಯ ಎಂದು ಕರೆದ... ಚಾಣಕ್ಯನು ನಂದ ರಾಜವಂಶವನ್ನು ನಾಶಮಾಡಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ರಾಜಕಾರಣಿ. ಚಾಣಕ್ಯ ರಾಜಕೀಯ, ಅರ್ಥಶಾಸ್ತ್ರ ಮತ್ತು ಜೀವನದ ವಿಷಯಗಳ ಮೇಲೆ ಅನೇಕ ನೈತಿಕ ತತ್ವಗಳನ್ನು ನೀಡಿದ್ದಾರೆ..

ಭಾರತೀಯ ಜ್ಞಾನ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯನಿಗೆ ಮಹತ್ತರವಾದ ಸ್ಥಾನವಿದೆ. ಆಚಾರ್ಯ ಚಾಣಕ್ಯ ಮಹಾನ್ ಸಲಹೆಗಾರ, ತಂತ್ರಜ್ಞ ಮತ್ತು ತತ್ವಜ್ಞಾನಿ ಮತ್ತು ವೇದಗಳು ಮತ್ತು ಪುರಾಣಗಳಲ್ಲಿ ಪಾರಂಗತರಾಗಿದ್ದರು. ಅವರು ತಮ್ಮ ಜೀವನದಲ್ಲಿ ಪ್ರತಿ ಸಂದರ್ಭವನ್ನು ಅನುಭವಿಸಿದರು ಮತ್ತು ತಮ್ಮ ಶಿಷ್ಯರಿಗೆ ಕೆಲವು ನೈತಿಕ ತತ್ವಗಳನ್ನು ಕಲಿಸಿದ್ದರು.. ಕಷ್ಟದ ಜೀವನಗಳನ್ನು ಯಾವರೀತಿ ಎದುರಿಬೇಕು ಎನ್ನುವುದನ್ನು ಇವರು ತಿಳಿಸಿದ್ದಾರೆ..

ಇದನ್ನೂ ಓದಿ-ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಇದೆ ಮದ್ದು

ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಒಂದು ಹಂತದಲ್ಲಿ ಕಷ್ಟವನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಶೈಲಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ತಯಾರಿ ನಡೆಸುತ್ತಾನೆ. ಕೆಲವು ಚಾಣಕ್ಯನ ಮಾತುಗಳನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಹೌದು ಚಾಣಕ್ಯ ಅವರ ಪ್ರಕಾರ ನಾವು ಕೆಲವರಿಗೆ ಸಹಾಯ ಮಾಡಲು ಹೋಗಬಾರದು..

ಒಂದೆಡೆ ಸಹಾಯ ಮಾಡುತ್ತಾ ಬದುಕಿದರೆ ಮಾತ್ರ ಸಮಾಜ ಸುಧಾರಿಸುತ್ತದೆ.. ಇಲ್ಲದಿದ್ದರೆ ಸಮಾಜದ ಸ್ಥಿತಿ ಹದಗೆಡುತ್ತದೆ. ಹಾಗಾಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ..ಆದರೆ ಇಲ್ಲಿ ನಾವು ಯಾರಿಗೆ ಸಹಾಯ ಮಾಡುತ್ತಿದ್ದೇವೆ ಎಂಬುದು ಮುಖ್ಯ. ನಾವು ಅರಿವಿಲ್ಲದೆ ತಪ್ಪು ಮಾಡಿದವರಿಗೆ ಸಹಾಯ ಮಾಡಿದರೆ, ನಾವು ಅವನ ಜೀವನವನ್ನು ಮಾತ್ರವಲ್ಲದೆ ಅನೇಕ ಜನರ ಜೀವನವನ್ನು ಸಹ ಹಾಳುಮಾಡುತ್ತೇವೆ.

ಇದನ್ನೂ ಓದಿ-ಹೂವಲ್ಲ ಈ ಗಿಡದ ಎಲೆ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತದೆ ! ಹಚ್ಚಿದ ಕೂಡಲೇ ರಿಸಲ್ಟ್ ಗ್ಯಾರಂಟಿ

ಚಾಣಕ್ಯನ ಪ್ರಕಾರ ನಾವು ಕೆಲವು ರೀತಿಯ ಜನರಿಗೆ ಸಹಾಯ ಮಾಡಬಾರದು. ನಮ್ಮ ಮರ್ಯಾದೆ ಹೋಗುತ್ತದೆ ಎನ್ನುತ್ತಾರೆ. ಹಾಗಾದರೆ ಯಾರಿಗೆ ಸಹಾಯ ಮಾಡಬಾರದು ಎಂಬುದು ಇಲ್ಲಿದೆ. 

ಆಚಾರ್ಯ ಚಾಣಕ್ಯರ ಪ್ರಕಾರ ನಾವು ಮೊದಲು ಸುಳ್ಳುಗಾರನಿಗೆ ಸಹಾಯ ಮಾಡಬಾರದು, ಅವನು ನಮ್ಮನ್ನು ನಂಬಿಸಿ ಮೋಸಗೊಳಿಸಬಹುದು..

ಅಲ್ಲದೆ ಮಾದಕ ವ್ಯಸನಕ್ಕೆ ಒಳಗಾದವರಿಗೆ ಯಾವುದೇ ಕಾರಣಕ್ಕೂ ಸಹಾಯ ಮಾಡಬಾರದು. ಅವುಗಳಿಂದ ಆದಷ್ಟು ದೂರವಿರುವುದು ನಮ್ಮ ಜೀವನಕ್ಕೆ ಒಳ್ಳೆಯದು.

ಮುಖ್ಯವಾಗಿ ಯಾವಾಗಲೂ ಅಸೂಯೆಪಡುವ ವ್ಯಕ್ತಿಗೆ ನಾವು ಸಹಾಯ ಮಾಡಬಾರದು. ಏಕೆಂದರೆ ಅವರು ನಿಮ್ಮಿಂದ ಸಹಾಯ ಪಡೆಯಬಹುದು ಮತ್ತು ನಿಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News