ಬೆಂಗಳೂರು : Zodiac Sign Nature : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ವಿಭಿನ್ನವಾಗಿರುತ್ತದೆ. ಕೆಲವರು ಸ್ವಭಾವತಃ ತುಂಬಾ ಶ್ರಮಜೀವಿಗಳಾಗಿದ್ದರೆ, ಕೆಲವರಿಗೆ ಕಷ್ಟಪಟ್ಟು ಕೆಲಸ ಮಾಡುವುದು ಇಷ್ಟವಿರುವುದಿಲ್ಲ. ಮಹಾನ್ ಸೋಮಾರಿಗಳಾಗಿರುತ್ತಾರೆ. ಯಾವ ಕೆಲಸ ಮಾಡುವುದು ಅವರಿಗೆ ಬೇಕಾಗಿರುವುದಿಲ್ಲ. ತಮ್ಮ ಆಲಸ್ಯ ಮತ್ತು ಸೋಮಾರಿತನದಿಂದಾಗಿ ವೈಫಲ್ಯದ ಹಾದಿಯಲ್ಲಿ ಸಾಗುತ್ತಾರೆ.
ಈ ಸೋಮಾರಿತನದಿಂದ ವ್ಯಕ್ತಿಯ ದೇಹ, ಮನಸ್ಸು ಮತ್ತು ಸಂಪತ್ತು ವ್ಯರ್ಥವಾಗುತ್ತದೆ. ಇದರಿಂದ ವ್ಯಕ್ತಿ ಅನೇಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಸೋಮಾರಿತನದಿಂದಾಗಿ ವ್ಯಕ್ತಿಯೊಳಗಿನ ಪ್ರತಿಭೆಯೂ ದಮನವಾಗುತ್ತದೆ. ಜ್ಯೋತಿಷ್ಯದಲ್ಲಿ ಅತ್ಯಂತ ಸೋಮಾರಿಯಾಗಿರುವ ಮೂರು ರಾಶಿಯವರನ್ನು ಹೇಳಲಾಗಿದೆ.
ಇದನ್ನೂ ಓದಿ : 30 ವರ್ಷಗಳ ಬಳಿಕ ರೂಪುಗೊಳ್ಳುತ್ತಿರುವ ಗ್ರಹಗಳ ಸಂಯೋಗದಿಂದ ನಾಲ್ಕು ರಾಶಿಯವರಿಗೆ ರಾಜ ಯೋಗ
ಮೀನ : ಈ ರಾಶಿಯ ಜನರು ಸೋಮಾರಿಗಳು. ತಮ್ಮದೇ ಆದ ಲೋಕದಲ್ಲಿ ಇರುವುದೆಂದರೆ ಇವರಿಗೆ ಇಷ್ಟ. ಇವ್ರು ತಮ್ಮ ಆಯ್ಕೆಯ ಪ್ರಕಾರವೇ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಇಷ್ಟವಿಲ್ಲದ ಕೆಲಸ ಕೊಟ್ಟರೆ ಯಾರದ್ದೋ ಬಲವಂತಕ್ಕಾಗಿ ಅರೆ ಮನಸ್ಸಿನಿಂದ ಆ ಕೆಲಸವನ್ನು ಮಾಡುತ್ತಾರೆ. ತಮ್ಮ ಸೋಮಾರಿತನ ಮತ್ತು ಆಲಸ್ಯದಿಂದಾಗಿ, ಅನೇಕ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.
ವೃಶ್ಚಿಕ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ತಮ್ಮ ಮನಸ್ಸಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ತಮಗೆ ಮನಸ್ಸಿಲ್ಲ ಎಂದಾದರೆ ಅದು ಎಂಥ ಮುಖ್ಯವಾದ ಕೆಲಸವೇ ಆಗಿರಲಿ ಕುಳಿತ ಜಾಗದಿಂದ ಇವ್ರು ಕದಲುವುದೇ ಇಲ್ಲ. ತಮ್ಮ ಗುರಿಯನ್ನು ತಲುಪಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಆರೋಗ್ಯದ ಬಗ್ಗೆ ಸ್ವಲ್ಪವೂ ಕಾಳಜಿ ಇರುವುದಿಲ್ಲ. ಹಾಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ : Chaturmas Horoscope 2022: ಜುಲೈ 10ರಿಂದ ಈ ರಾಶಿಗಳ ಜನರಿಗೆ ಬಂಪರ್ ಲಾಭ, ಚಾತುರ್ಮಾಸದಿಂದ ಇವರಿಗೆ ಲಾಭ
ವೃಷಭ ರಾಶಿ : ಈ ರಾಶಿಯವರು ತಮ್ಮ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ. ಇತರರ ಕೆಲಸವನ್ನು ಮಾಡಲು ಹೇಳಿದರೆ ಕಾರಣ ಹೇಳಿ ನುಣುಚಿ ಕೊಳ್ಳುತ್ತಾರೆ. ಸ್ವಭಾವತಃ ಕಠಿಣ ಪರಿಶ್ರಮಿಗಳು. ಆದರೆ ಅವರು ಆಸಕ್ತಿ ಹೊಂದಿರುವ ವಿಷಯಗಳಲ್ಲಿ ಮಾತ್ರ ಶ್ರಮಿಸುತ್ತಾರೆ. ತಮ್ಮ ಆಯ್ಕೆಯ ಕೆಲಸವನ್ನು ಮಾಡಲು ಅವರು ಹಲವು ಗಂಟೆಗಳ ಕಾಲ ಶ್ರಮಿಸಲು ಸಿದ್ಧರಾಗಿದ್ದಾರೆ. ಆಸಕ್ತಿ ಇಲ್ಲ ಎಂದಾದರೆ ಅದರತ್ತ ತಿರುಗಿಯೂ ನೋಡುವುದಿಲ್ಲ. ಈ ಕಾರಣದಿಂದಾಗಿ, ಅನೇಕ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.