ಎಂದೂ ಈ ಐದು ಜನರನ್ನು ನಂಬಲೇ ಬಾರದು, ಜೀವಕ್ಕೆ ಮುಳ್ಳಾಗಬಹುದು ಇವರು

ನಮ್ಮನ್ನು ಜೀವನದಲ್ಲಿ ತೊಂದರೆಗೆ ಸಿಲುಕಿಸಬಹುದಾದ ಅನೇಕ ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಚಾಣಾಕ್ಯ ನೀತಿಯಲ್ಲಿ ಹೇಳ;ಲಾದ ವಿಷಯಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಎದುರಾಗಬಹುದಾದ ಕಷ್ಟದಿಂದ ಪಾರಾಗಬಹುದು. 

Written by - Ranjitha R K | Last Updated : May 26, 2022, 02:47 PM IST
  • ಚಾಣಾಕ್ಯ ನೀತಿಯಲ್ಲಿದೆ ಜೀವನ ಪಾಠ
  • ಅನುಸರಿಸಿದರೆ ಜೀವನದಲ್ಲಿ ಸಿಗುತ್ತದೆ ಯಶಸ್ಸು
  • ಸಿಗುತ್ತದೆ ಕಷ್ಟ ಎದುರಿಸುವ ಧೈರ್ಯ
ಎಂದೂ ಈ ಐದು ಜನರನ್ನು ನಂಬಲೇ ಬಾರದು,  ಜೀವಕ್ಕೆ ಮುಳ್ಳಾಗಬಹುದು ಇವರು  title=
Chanakya niti

ಬೆಂಗಳೂರು : ಶ್ರೇಷ್ಠ ರಾಜತಾಂತ್ರಿಕ, ಅರ್ಥಶಾಸ್ತ್ರಜ್ಞರಲ್ಲದೆ, ಆಚಾರ್ಯ ಚಾಣಕ್ಯ ಅವರು  ಜೀವನಕ್ಕೂ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಜೀವನಕ್ಕೆ ಅನುಕೂಲವಾಗುವಂಥಹ ಅನೇಕ ವಿಷಯಗಳನ್ನು ಚಾಣಾಕ್ಯ ತಮ್ಮ ನೀತಿಯಲ್ಲಿ ಬೋಧಿಸಿದ್ದಾರೆ. ಅದನ್ನು ಅನುಸರಿಸುವ ಮೂಲಕ ವ್ಯಕ್ತಿಯು ಜೀವನದಲ್ಲಿ ಎದುರಾಗಬಹುದಾದ ಅನೇಕ ತೊಂದರೆಗಳನ್ನು ತಪ್ಪಿಸಬಹುದು. ಸಣ್ಣಪುಟ್ಟ ತಪ್ಪುಗಳಿಂದ ಆಗಬಹುದಾದ ದೊಡ್ಡ ನಷ್ಟವನ್ನು ತಪ್ಪಿಸಬಹುದು. ಚಾಣಕ್ಯ ನೀತಿಯಲ್ಲಿ, 5 ರೀತಿಯ ವಸ್ತುಗಳು ಮತ್ತು ಜನರಿಂದ ದೂರವಿರುವಂತೆ ಸಲಹೆ ನೀಡಲಾಗಿದೆ. 

ಆಯುಧಗಳನ್ನು ಹೊಂದಿರುವ ಜನರು :  ಯಾರು ತಮ್ಮೊಂದಿಗೆ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುತ್ತಾರೆಯೋ, ಅವರನ್ನು ಎಂದಿಗೂ ನಂಬುವುವಂತಿಲ್ಲ.  ಅಥವಾ ಅವರೊಂದಿಗೆ ಸಲುಗೆಯಿಂದ ಬೆರೆಯುವಂತಿಲ್ಲ. ಕೋಪಗೊಂಡಾಗ ಇವರು ನಿಮಗೆ ಯಾವಾಗ ಬೇಕಾದರೂ ಹಾನಿ ಮಾಡಬಹುದು. 

ಇದನ್ನೂ ಓದಿ : Palmistry: ಯಾರ ಹಸ್ತದಲ್ಲಿ ಈ ಚಿಹ್ನೆ ಇರುತ್ತದೆಯೋ ಅವರು 40 ವರ್ಷ ದಾಟುತ್ತಿದ್ದಂತೆಯೇ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ

ಉನ್ನತ ಸ್ಥಾನದಲ್ಲಿರುವ ಶಕ್ತಿಶಾಲಿ ವ್ಯಕ್ತಿಗಳು: ಶಕ್ತಿಶಾಲಿ ಅಥವಾ ಶಕ್ತಿಯುತ ಜನರನ್ನು ಎಂದಿಗೂ ನಂಬಬೇಡಿ. ಅವರೊಂದಿಗೆ ದ್ವೇಷ ಸಾಧಿಸಬೇಡಿ. ಇದರ ಹಿಂದೆ 2 ದೊಡ್ಡ ಕಾರಣಗಳಿವೆ. ಒಂದು, ಅವರು ತಮ್ಮ ಲಾಭಕ್ಕಾಗಿ ನಿಮ್ಮನ್ನು ಬಲಿಪಶು ಮಾಡುವ ಮುನ್ನ ಕೊಂಚವೂ ಯೋಚಿಸುವುದಿಲ್ಲ. ಎರಡನೆಯದಾಗಿ, ಅವರು ನಿಮ್ಮ ಮೇಲೆ ಕೋಪಗೊಂಡರೆ, ಅವರು ನಿಮ್ಮನ್ನು ನಾಶ ಮಾಡಿ ಬಿಡುತ್ತಾರೆ. 

ದುಷ್ಟ ಮಹಿಳೆ: ದುಷ್ಟ ಪ್ರವೃತ್ತಿ ಹೊಂದಿರುವ ಮಹಿಳೆಯನ್ನು ಎಂದಿಗೂ ನಂಬಬೇಡಿ. ಅವಳು ನಿಮಗೆ ಗೊತ್ತಿಲ್ಲದೆ ನಿಮಗೆ ದೊಡ್ಡ ಹಾನಿ ಮಾಡಬಹುದು. ಅಲ್ಲದೆ, ಇದು ನಿಮ್ಮ ತಪ್ಪಿಲ್ಲದೆಯೂ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. 

ಇದನ್ನೂ ಓದಿ: ಶನಿ ಸಾಡೇ ಸಾತಿ, ಧೈಯ್ಯಾದಿಂದ ಬಳಲುತ್ತಿರುವವರು ಮೇ 30 ರಂದು ಈ ಕೆಲಸ ಮಾಡಿದರೆ ಸಿಗಲಿದೆ ಎಲ್ಲಾ ಕಷ್ಟಗಳಿಂದ ಮುಕ್ತಿ

ಹಿಂಸಾತ್ಮಕ ಮತ್ತು ಅಪಾಯಕಾರಿ ಪ್ರಾಣಿಗಳು: ಹಿಂಸಾತ್ಮಕ ಮತ್ತು ಅಪಾಯಕಾರಿ ಪ್ರಾಣಿಗಳನ್ನು ಎಂದಿಗೂ ನಂಬಬೇಡಿ. ನೀವು ಅವುಗಳಿಗೆ ಎಷ್ಟೇ ಪ್ರೀತಿ ತೋರಿದರೂ, ಅವುಗಳು ಯಾವ ಸಮಯದಲ್ಲಿ ಬೇಕಾದರೂ ನಿಮಗೆ ಹಾನಿ ಮಾಡಬಹುದು. 

ನದಿಯ ಆಳ ಮತ್ತು ವೇಗ : ನದಿಯ ಆಳ ಮತ್ತು ಹರಿವಿನ ಬಗ್ಗೆ ಇರುವ ತಪ್ಪು ತಿಳುವಳಿಕೆಯು ನಿಮ್ಮನ್ನು ಸಾವಿನ ದವಡೆಗೆ ತಳ್ಳಿ ಬಿಡಬಹುದು. ಹಾಗಾಗಿ ಈ ವಿಷಯದಲ್ಲಿ ಯಾವುದೇ ತಪ್ಪು ಮಾಡಬೇಡಿ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News