Longest Lunar Eclipse 2021 - ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು (Chanda Grahan 2021) ನವೆಂಬರ್ 19 ರ ಶುಕ್ರವಾರ ಬೆಳಗ್ಗೆ 11:34 ಕ್ಕೆ ಪ್ರಾರಂಭವಾಗಿದೆ. ಇದು ಸಂಜೆ 5.59 ರವರೆಗೆ ಇರಲಿದೆ. ಇಂದಿನ ಚಂದ್ರಗ್ರಹಣವನ್ನು ಶತಮಾನದ ಸುದೀರ್ಘ ಚಂದ್ರಗ್ರಹಣ ಎಂದು ಬಣ್ಣಿಸಲಾಗುತ್ತಿದೆ. ಭಾರತದಲ್ಲಿ ಖಂಡಗ್ರಾಸ ಚಂದ್ರಗ್ರಹಣವಾಗಿರುವುದರಿಂದ ದೇಶದಾದ್ಯಂತ ಇದನ್ನು ನೋಡಲಾಗುವುದಿಲ್ಲ. ಭಾರತದಲ್ಲಿ, ಎರಡು ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ಗ್ರಹಣ ಭಾಗಶಃ ಗೋಚರಿಸುತ್ತವೆ.
Lunar Eclipse 2021 In India: ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಗ್ರಹಣದ ವಿದ್ಯಮಾನವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಪೂಜೆ ಮತ್ತು ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಗ್ರಂಥಗಳಲ್ಲಿ ಗ್ರಹಣಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ. ಗ್ರಹಣ ಮುಗಿದ ನಂತರ ಕೆಲವು ಕೆಲಸಗಳನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಗ್ರಹಣದ ನಂತರ ಏನು ಮಾಡಬೇಕೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಸ್ನಾನ ಮಾಡಿ
ಧಾರ್ಮಿಕ ನಂಬಿಕೆಗಳ ಪ್ರಕಾರ, ಚಂದ್ರಗ್ರಹಣದ ನಂತರ ಸ್ನಾನ ಮಾಡಬೇಕು. ಸ್ನಾನ ಮಾಡುವುದರಿಂದ ಗ್ರಹಣದ ಪ್ರಭಾವವು ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ. ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಸೇರಿಸಿ ಸ್ನಾನ ಮಾಡಿ.
ಶುಭ್ರವಾದ ಬಟ್ಟೆಗಳನ್ನು ಧರಿಸಿ
ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು.
ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸಿ
ಗ್ರಹಣ ಮುಗಿದ ನಂತರ ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸಿ ಮನೆಯ ದೇವರ ಕೋಣೆಯಲ್ಲಿಯೂ ಕೂಡ ಗಂಗಾಜಲವನ್ನು ಸಿಂಪಡಿಸಿ.
ಇದನ್ನೂ ಓದಿ-ಕಾರ್ತಿಕ ಹುಣ್ಣಿಮೆಯ ದಿನ ಏರ್ಪಡಲಿದೆ ಶುಭ ಸಂಯೋಗ, ಈ ಮುಹೂರ್ತದಲ್ಲಿ ಪೂಜೆ ಮಾಡಿದರೆ ಆಗಲಿದೆ ಧನಲಾಭ
ಗಂಗಾಜಲದಿಂದ ಭಗವಂತನಿಗೆ ಅಭಿಷೇಕ ಮಾಡಿ
ಗ್ರಹಣದ ನಂತರ ದೇವತೆಗಳಿಗೆ ಗಂಗಾಜಲದಿಂದ ಅಭಿಷೇಕ ಮಾಡಬೇಕು.
ಇದನ್ನೂ ಓದಿ- Lunar Eclipse 2021: 580 ವರ್ಷಗಳ ಬಳಿಕ ಸಂಭವಿಸಲಿದೆ ಇಂಥಹ ಚಂದ್ರಗ್ರಹಣ, ಇಲ್ಲಿ ವೀಕ್ಷಿಸಬಹುದು Live Streaming
ಹಸುವಿಗೆ ಆಹಾರ
ಗ್ರಹಣ ಮುಗಿದ ನಂತರ ಹಸುವಿಗೆ ರೊಟ್ಟಿ ತಿನ್ನಿಸಿ. ಹಸುವಿಗೆ ರೊಟ್ಟಿ ತಿನ್ನಿಸುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಹಸುವಿಗೆ ಆಹಾರ ನೀಡುವುದರಿಂದ ಎಲ್ಲಾ ರೀತಿಯ ದೋಷಗಳಿಂದ ಮುಕ್ತಿ ಸಿಗುತ್ತದೆ.
ಇದನ್ನೂ ಓದಿ-Kartik Purnima 2021: ನೀವು ಶ್ರೀಮಂತರಾಗಲು ಬಯಸಿದರೆ ಕಾರ್ತಿಕ ಪೂರ್ಣಿಮೆಯಂದು ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.