Chandra Grahan 2022: ನ.8ಕ್ಕೆ ವರ್ಷದ 2ನೇ ಚಂದ್ರಗ್ರಹಣ, ಎಲ್ಲೆಲ್ಲಿ ಗೋಚರಿಸುತ್ತೆ ಗೊತ್ತಾ?

ನವೆಂಬರ್ ತಿಂಗಳಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ಇದು ವರ್ಷದ ಕೊನೆಯ ಗ್ರಹಣವಾಗಿದ್ದು, ಭಾರತದ ಕೆಲವು ಭಾಗಗಳಲ್ಲಿ ಇದನ್ನು ಕಾಣಬಹುದು. ಈ ಚಂದ್ರಗ್ರಹಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ತಿಳಿಯಿರಿ.

Written by - Puttaraj K Alur | Last Updated : Oct 31, 2022, 07:51 PM IST
  • ನವೆಂಬರ್ 8ರಂದು ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ
  • ಚಂದ್ರಗ್ರಹಣ ನ.8ರ ಸಂಜೆ 05.32ಕ್ಕೆ ಪ್ರಾರಂಭವಾಗಿ 06.18ಕ್ಕೆ ಕೊನೆಯಾಗಲಿದೆ
  • ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ, ಗುವಾಹಟಿಯಲ್ಲಿ ಚಂದ್ರಗ್ರಹಣ ವೀಕ್ಷಿಸಬಹುದು
Chandra Grahan 2022: ನ.8ಕ್ಕೆ ವರ್ಷದ 2ನೇ ಚಂದ್ರಗ್ರಹಣ, ಎಲ್ಲೆಲ್ಲಿ ಗೋಚರಿಸುತ್ತೆ ಗೊತ್ತಾ?   title=
ನವೆಂಬರ್ 8ರಂದು ಚಂದ್ರಗ್ರಹಣ

ನವದೆಹಲಿ: ಕಾರ್ತಿಕ ಮಾಸದ ಅಮಾವಾಸ್ಯೆಯಂದು ಸೂರ್ಯಗ್ರಹಣವಿತ್ತು. 15 ದಿನಗಳ ನಂತರ ಕಾರ್ತಿಕ ಪೂರ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ನವೆಂಬರ್ 8ರಂದು ಗೋಚರಿಸಲಿದೆ. ಈ ಚಂದ್ರಗ್ರಹಣ ಈ ವರ್ಷದ ಕೊನೆಯ ಗ್ರಹಣವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಚಂದ್ರಗ್ರಹಣವು ನ.8ರ ಸಂಜೆ 05.32ಕ್ಕೆ ಪ್ರಾರಂಭವಾಗಿ 06.18ಕ್ಕೆ ಕೊನೆಗೊಳ್ಳಲಿದೆ. ಈ ಚಂದ್ರಗ್ರಹಣವನ್ನು ಭಾರತದ ಕೆಲವು ಸ್ಥಳಗಳಲ್ಲಿ ಕಾಣಬಹುದು. ಗ್ರಹಣವು ಯಾವ ಸ್ಥಳಗಳಲ್ಲಿ ಗೋಚರಿಸುತ್ತದೆ ಮತ್ತು ಸೂತಕದ ಅವಧಿ ಯಾವುದು ಎಂಬುದನ್ನು ಇಲ್ಲಿ ತಿಳಿಯಿರಿ.

ಚಂದ್ರಗ್ರಹಣ ಎಲ್ಲಿ ಗೋಚರಿಸುತ್ತದೆ?

ನವೆಂಬರ್ 8ರಂದು ಚಂದ್ರಗ್ರಹಣವು ಭಾರತದ ಪೂರ್ವ ಭಾಗಗಳಲ್ಲಿ ಗೋಚರಿಸುತ್ತದೆ. ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ, ಗುವಾಹಟಿಯಲ್ಲಿ ಚಂದ್ರಗ್ರಹಣವನ್ನು ವೀಕ್ಷಿಸಬಹುದು. ಇದಲ್ಲದೆ ಕಠ್ಮಂಡು, ಟೋಕಿಯೊ, ಮನಿಲಾ, ಬೀಜಿಂಗ್, ಸಿಡ್ನಿ, ಜಕಾರ್ತಾ, ಮೆಲ್ಬೋರ್ನ್, ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಸಿಟಿ, ಲಾಸ್ ಏಂಜಲೀಸ್, ಚಿಕಾಗೋ ಮತ್ತು ಮೆಕ್ಸಿಕೋ ಸಿಟಿಗಳಲ್ಲಿಯೂ ಸಹ ಗೋಚರಿಸುತ್ತದೆ.

ಇದನ್ನೂ ಓದಿ: Vastu Tips For Health : ಉತ್ತಮ ಆರೋಗ್ಯಕ್ಕಾಗಿ ಈ 5 ವಾಸ್ತು ಸಲಹೆಗಳನ್ನು ಅನುಸರಿಸಿ

ಸೂತಕ ಅವಧಿ ಯಾವಾಗ?  

ಸೂತಕವು ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಚಂದ್ರಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಗೋಚರಿಸುವುದರಿಂದ ಸೂತಕವು ಸಹ ಮಾನ್ಯವಾಗಿರುತ್ತದೆ. ಸೂತಕ ಕಾಲದಲ್ಲಿ ಅನೇಕ ಋಣಾತ್ಮಕ ವಿಷಯಗಳ ಉಪಸ್ಥಿತಿಯಿಂದಾಗಿ ಆಹಾರ ಸೇವಿಸುವುದು, ಕುಡಿಯುವುದು, ಆಹಾರ ಬೇಯಿಸುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಇದೇ ವೇಳೆ ದೇವಸ್ಥಾನಗಳ ಬಾಗಿಲು ಮುಚ್ಚಲಿದ್ದು, ಈ ವೇಳೆ ದೇವರಿಗೆ ಪೂಜೆ ಸಲ್ಲಿಸುವುದಿಲ್ಲ. ಇದಲ್ಲದೇ ಗರ್ಭಿಣಿಯರಿಗೂ ಕೆಲವು ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.  

ಚಂದ್ರ ಗ್ರಹಣ ಎಂದರೇನು?

ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ ಮತ್ತು ಚಂದ್ರನು ಗೋಚರಿಸುವುದಿಲ್ಲ. ಈ ಸ್ಥಿತಿಯನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರನು ಭೂಮಿಯ ಸುತ್ತ ಸುತ್ತುತ್ತಿರುವುದರಿಂದ ಭೂಮಿಯ ನೆರಳಿನಲ್ಲಿ ದೀರ್ಘಕಾಲ ಉಳಿಯುವುದಿಲ್ಲ ಮತ್ತು ಕಡಿಮೆ ಸಮಯದಲ್ಲಿ ಭೂಮಿಯ ನೆರಳಿನಿಂದ ಹೊರಬರುತ್ತದೆ. ಚಂದ್ರನು ಭೂಮಿಯ ನೆರಳಿನಿಂದ ಆವೃತವಾಗಿರುವ ಅವಧಿಯನ್ನು ಗ್ರಹಣದ ಅವಧಿ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Vastu Tips: ಮನೆಯ ಯಾವ ದಿಕ್ಕಿನಲ್ಲಿ ಆಮೆ ಪ್ರತಿಮೆ ಇಟ್ಟರೆ ಶುಭ ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News