Daily Horoscope: ದಿನಭವಿಷ್ಯ 09-05-2021 Today astrology

 ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ..    

Written by - ZH Kannada Desk | Last Updated : May 9, 2021, 07:30 AM IST
  • ವೃಷಭ ರಾಶಿಯವರ ಹಳೆ ಸಾಲ ವಸೂಲಿಯಾಗುತ್ತದೆ
  • ಕರ್ಕಾಟಕ ರಾಶಿಯವರು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಿ
  • ವೃಶ್ಚಿಕ ರಾಶಿಯವರು ಹಿತಶತ್ರುಗಳಿಂದ ಜಾಗೃತೆ ವಹಿಸಿ
Daily Horoscope: ದಿನಭವಿಷ್ಯ 09-05-2021 Today astrology

ಬೆಂಗಳೂರು : ನಿಮ್ಮ ನಿಮ್ಮ ರಾಶಿಗನುಗುಣವಾಗಿ ನಿಮ್ಮ ನಿತ್ಯ ಭವಿಷ್ಯ ಹೀಗಿದೆ.. 

ಮೇಷ: ಈ ದಿನ ನಿಮ್ಮ ಹಳೆ ಆಸೆ ಮತ್ತು ಆಕಾಂಕ್ಷೆ ಈಡೇರುವ ದಿನ ಆಗಿದೆ.  ಈ ದಿನ ಉದ್ಯೋಗ ವಿಷಯದಲ್ಲಿ ಸಾಕಷ್ಟು ಒಳ್ಳೆಯ ಸುದ್ದಿಗಳು ಕೇಳುತ್ತೀರಿ.  ಈ ದಿನ ತಾಯಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.  ಸಂಜೆ ನಂತರ ಹೊಸ ಸ್ನೇಹಿತರ ಪರಿಚಯ ನಿಮಗೆ ಆಗುತ್ತದೆ. 

ವೃಷಭ: ಈ ದಿನ ಹಳೆ ಸಾಲ ವಸೂಲಿ ಆಗುತ್ತದ. ಈ ದಿನ ಕೃಷಿ ಉತ್ಪನ್ನ ಚಟುವಟಿಕೆಯಲ್ಲಿ ಒಳ್ಳೆ ಲಾಭ ಮಾಡಬಹುದು.  ಈ ದಿನ ಕೆಲವು ಯುವಕ ಮತ್ತು ಯುವತಿರರಿಗೆ ಕಂಕಣ ಭಾಗ್ಯದ ಕುರಿತು ಒಂದಿಷ್ಟು ಮಾನಸಿಕ ಚಿಂತೆಗಳು ಸಹ ಕಾಡುತ್ತದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. 

ಮಿಥುನ: ಈ ದಿನ ಬಿಡುವು ಇಲ್ಲದಷ್ಟು ಕೆಲಸ ಕಾರ್ಯಗಳು ಇದರ ಮಧ್ಯೆ, ಸಹ ನೀವು ಪ್ರಯಾಣ ಮಾಡಬೇಕಾಗುತ್ತದೆ ಹಾಗೆಯೇ ಸ್ನೇಹಿತರ ಜೊತೆಗೆ ಚರ್ಚೆ ಸಹ ಮಾಡುತ್ತೀರಿ. ಈ ದಿನ ನಿಮ್ಮ ನಿರೀಕ್ಷೆಯಂತೆ ಉದ್ಯೋಗ ವಿಷಯದಲ್ಲಿ ಸಾಕಷ್ಟು ಒಳ್ಳೆಯದು ಆಗುತ್ತದೆ, ಈ ದಿನ ಶುಭಫಲ ಇದೆ. 

ಇದನ್ನೂ ಓದಿ : ಗುರುವಾರ ಈ ಗಿಡವನ್ನು ಪೂಜಿಸಿದರೆ ಸಂಸಾರದಲ್ಲಿ ಕಾಣಿಸಿಕೊಳ್ಳಲಿದೆ ಸುಖ ಶಾಂತಿ

ಕರ್ಕಾಟಕ: ಈ ದಿನ ಮನೆ ಜನರ ಬಗ್ಗೆ ಹೆಚ್ಚಿನ ಕಾಳಜಿ ಮಾಡಬೇಕು, ಆರೋಗ್ಯದ ವಿಷಯದಲ್ಲಿ ಅದಕ್ಕೆ ತಕ್ಕಂತೆ ಔಷಧಿ ಸೇವನೆ ಮಾಡಿರಿ, ಈ ದಿನ ಹಿತೈಷಿಗಳ ಸಂಪೂರ್ಣ ಸಹಕಾರ ನಿಮಗೆ ಸಿಗುತ್ತದೆ. ಈ ದಿನ ನಿರೀಕ್ಷೆಯಂತೆ ನಿಮ್ಮ ಕೆಲಸ ಕಾರ್ಯಗಳು ಲಾಭ ಮಾಡಿಕೊಡುತ್ತದೆ. 

ಸಿಂಹ: ಈ ದಿನ ಸ್ವಂತ ಕೆಲಸ ಕಾರ್ಯದಲ್ಲಿ ಸಾಕಷ್ಟು ಹಿನ್ನಡೆ ಆಗುತ್ತದೆ,  ಉನ್ನತ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಾಕಷ್ಟು ಆಲಕ್ಷ್ಯ ಸಹ ಮಾಡುತ್ತಾರೆ. ಈ ದಿನ ಕ್ರೀಡೆಯಲ್ಲಿ ಹೆಚ್ಚಿನ ಒಳಿತು ಕಾಣುತ್ತೀರಿ. ಈ ದಿನ ಮಿಶ್ರಫಲ ಇದೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮. 

ಕನ್ಯಾ: ಈ ದಿನ ವಸ್ತು ಖರೀದಿಗೆ ಹೆಚ್ಚಿನ ಸಮಯ ಮೀಸಲು ಇಡುತ್ತೀರಿ. ಕುಟುಂಬ ಜನರು ತೆಗೆದುಕೊಳ್ಳುವ ಒಮ್ಮತದ ನಿರ್ಣಯಗಳಿಗೆ ನೀವು ಖುಷಿ ಪಡುತ್ತೀರಿ. ಈ ದಿನ ಹಣಕಾಸಿನ ವಿಷಯದಲ್ಲಿ ತುಂಬಾ ತಾಳ್ಮೆ ಇರುವುದು ಒಳ್ಳೆಯದು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫. 

ತುಲಾ: ಈ ದಿನ ಕುಟುಂಬ ಜನರಿಂದ ನೀವು ಶುಭ ಸುದ್ದಿ ಕೇಳುತ್ತೀರಿ, ಕೆಲಸ ಕಾರ್ಯದಲ್ಲಿ ಸಾಕಷ್ಟು ಪ್ರಗತಿ ಸಹ ಕಾಣುತ್ತೀರಿ. ಈ ದಿನ ಮನೆಯಲ್ಲಿ ಸಮಾಧಾನಕರ ವಾತಾವರಣ ಇರುತ್ತದೆ, ಈ ದಿನ ಆರೋಗ್ಯದ ಬಗ್ಗೆ ಅನಗತ್ಯ ಚಿಂತೆಗಳು ಬೇಡ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೩. 

ಇದನ್ನೂ ಓದಿ : Astrology On Corona End In India: ಭಾರತದಲ್ಲಿ ಕೊರೊನಾ ಅಂತ್ಯದ ಕುರಿತು ಜೋತಿಷ್ಯ ಶಾಸ್ತ್ರ ಏನು ಹೇಳುತ್ತೆ?

ವೃಶ್ಚಿಕ: ಈ ದಿನ ಅನಗತ್ಯ ಓಡಾಟ ನಿಮಗೆ ಹೆಚ್ಚಿಗೆ ಆಗುತ್ತದೆ ಈ ದಿನ ದೇಹದ ಆಲಸ್ಯ ಕೂಡ ಹೆಚ್ಚಿಗೆ ಇರುತ್ತದೆ. ಈ ದಿನ ಹಿತ ಶತ್ರುಗಳು ನಿಮಗೆ ವಾಮ ಮಾರ್ಗದಲ್ಲಿ ವಂಚನೆ ಮಾಡಲು ಕಾಯುತ್ತಾ ಇದ್ದಾರೆ ತುಂಬಾ ಜಾಗ್ರತೆ ಇರಬೇಕು. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೯. 

ಧನಸ್ಸು: ಈ ದಿನ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮೇಲೆ ಸಾಕಷ್ಟು ಒತ್ತಡ ಉಂಟಾಗುತ್ತದೆ. ವ್ಯವಹಾರದಲ್ಲಿ ಹೆಚ್ಚಿನ ಧೈರ್ಯ ಮತ್ತು ದಿಟ್ಟತನ ಪ್ರದರ್ಶನ ಮಾಡಿರಿ. ಈ ದಿನ ಸ್ನೇಹಿತರು ನಿಮ್ಮನ್ನು ನಿಂದನೆಗೆ ಗುರಿಯಾಗಿಸುತ್ತಾರೆ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭. 

ಮಕರ: ಈ ದಿನ ಮುಂದಿನ ಭವಿಷ್ಯದ ಕುರಿತು ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ಅನುಭವಿ ಜನರ ಸಲಹೆ ಪಡೆಯಿರಿ. ನಿಮ್ಮ ಪ್ರತಿಭೆ ಕಂಡು ಸಾಮಾಜಿಕ ಗೌರವ ಸಹ ಸಿಗುತ್ತದೆ.  ಉಷ್ಣ ಹೆಚ್ಚಿಗೆ ಇರುವ ಆಹಾರ ಸೇವನೆ ಮಾಡಬೇಡಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೨. 

ಇದನ್ನೂ ಓದಿ : Akshaya Tritiya 2021: ಶುಭ ಯೋಗಗಳನ್ನು ಹೊತ್ತು ತರಲಿದೆ ಅಕ್ಷಯ ತೃತೀಯ.! ಹೆಚ್ಚಾಗಲಿದೆ ಸುಖ ಸಮೃದ್ಧಿ

ಕುಂಭ: ಈ ದಿನ ಕುಟುಂಬ ಜನರು ಮತ್ತು ಸ್ನೇಹಿತರು ನಿಮ್ಮನ್ನು ಹೆಚ್ಚಾಗಿ ಹೊಗಳುತ್ತಾರೆ. ಆದ್ರೆ ಬೊಗಳೆ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡಬೇಡಿ.  ಆರೋಗ್ಯದ ವಿಷಯದಲ್ಲಿ ಒಳ್ಳೆಯ ಅಭಿವೃದ್ದಿ ಆಗುತ್ತದೆ. ಈ ದಿನ ಉದ್ಯೋಗ ವಿಷಯದಲ್ಲಿ ಒಳ್ಳೆಯ ಸುದ್ದಿ ಕೇಳುವ ನಿರೀಕ್ಷೆ ಸಹ ಇದೆ. 

ಮೀನ: ಈ ದಿನ ಕಾರ್ಯ ಕಲಾಪ ಯಾವುದೇ ಅಡ್ಡಿ ಆತಂಕ ಇಲ್ಲದೆ ಸಾಗುತ್ತದ. ಕುಟುಂಬ ಜನರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಉತ್ತಮ ಅವಕಾಶ ಸಹ ದೊರೆಯುತ್ತದೆ, ಈ ದಿನ ಸಣ್ಣ ವ್ಯಾಪಾರ ಮಾಡುವ ಜನರಿಗೆ ಹೆಚ್ಚಿನ ಲಾಭ ದೊರೆಯುವ ವಿಶ್ವಾಸ ಇದೆ. 

ಇದನ್ನೂ ಓದಿ : Turtle Ring Effects: ಈ 4 ರಾಶಿಯವರು ಎಂದಿಗೂ ಆಮೆ ಉಂಗುರವನ್ನು ಧರಿಸಬಾರದು!

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News