Diabetes: ದೇಹದಲ್ಲಿ ಈ ವಿಟಮಿನ್ ಕೊರತೆಯು ಮಧುಮೇಹದ ಅಪಾಯ ಹೆಚ್ಚಿಸುತ್ತದೆ, ಈ ರೋಗಲಕ್ಷಣ ನಿರ್ಲಕ್ಷಿಸಬೇಡಿ

ವಿಟಮಿನ್ ಡಿ ಕೊರತೆಯು ಮಧುಮೇಹದಂತಹ ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣವಾಗಿದೆ ಎಂದು ಅನೇಕ ಅಧ್ಯಯನಗಳಲ್ಲಿ ಬಹಿರಂಗಪಡಿಸಲಾಗಿದೆ.

Written by - Puttaraj K Alur | Last Updated : Dec 4, 2021, 10:59 AM IST
  • ದೇಹದಲ್ಲಿನ ವಿಟಮಿನ್ ಡಿ ಕೊರತೆಯು ಮಧುಮೇಹಕ್ಕೆ ಕಾರಣವಾಗಬಹುದು
  • ಸೂರ್ಯನ ಬೆಳಕು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ
  • ವಿಟಮಿನ್ ಡಿ ಕೊರತೆ ನೀಗಿಸಲು ಪ್ರತಿದಿನ ಸ್ವಲ್ಪ ಸಮಯ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು
Diabetes: ದೇಹದಲ್ಲಿ ಈ ವಿಟಮಿನ್ ಕೊರತೆಯು ಮಧುಮೇಹದ ಅಪಾಯ ಹೆಚ್ಚಿಸುತ್ತದೆ, ಈ ರೋಗಲಕ್ಷಣ ನಿರ್ಲಕ್ಷಿಸಬೇಡಿ title=
ವಿಟಮಿನ್ ಡಿ ಕೊರತೆಯು ಮಧುಮೇಹಕ್ಕೆ ಕಾರಣ

ನವದೆಹಲಿ: ದೇಹದಲ್ಲಿ ವಿಟಮಿನ್ ಡಿ ಕೊರತೆಯು ಮಧುಮೇಹ(Diabetes)ದ ಅಪಾಯವನ್ನು ಹೆಚ್ಚಿಸುತ್ತದೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಜೀವಸತ್ವಗಳು ಅವಶ್ಯಕವಾಗಿದೆ ಮತ್ತು ದೇಹದಲ್ಲಿ ಯಾವುದೇ ವಿಟಮಿನ್ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು.

ವಿಟಮಿನ್ ಡಿ ಕೊರತೆಯಿಂದ ಮಧುಮೇಹದ ಅಪಾಯ

ಅಧ್ಯಯನದ ಪ್ರಕಾರ ದೇಹದಲ್ಲಿ ವಿಟಮಿನ್ ಡಿ ಕೊರತೆ(Vitamin Deficiency)ಯು ಮಧುಮೇಹಕ್ಕೆ ಕಾರಣವಾಗಬಹುದು. ದೇಹದಲ್ಲಿ ಗ್ಲೂಕೋಸ್ ಮಟ್ಟವು ತುಂಬಾ ಹೆಚ್ಚಾದಾಗ ಮಧುಮೇಹವು ಗಂಭೀರ ಸ್ಥಿತಿ ತಲುಪುತ್ತದೆ. ಈ ಸ್ಥಿತಿಯಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ಇನ್ಸುಲಿನ್ ಉತ್ಪಾದಿಸಲು ದೇಹಕ್ಕೆ ಸಾಧ್ಯವಾಗುವುದಿಲ್ಲ ಅಥವಾ ದೇಹದ ಜೀವಕೋಶಗಳು ಇನ್ಸುಲಿನ್‌ಗೆ ಪ್ರತಿಕ್ರಿಯಿಸುವುದಿಲ್ಲ.

ಪರಿಣಾಮ ಏನಾಗುತ್ತದೆ ಗೊತ್ತಾ..?

ವಿಟಮಿನ್ ಡಿ ಅನ್ನು ಸನ್ಶೈನ್ ವಿಟಮಿನ್ ಎಂದೂ ಕರೆಯುತ್ತಾರೆ. ಏಕೆಂದರೆ ಸೂರ್ಯನ ಬೆಳಕು ವಿಟಮಿನ್ ಡಿ(Vitamin D)ಯ ಅತ್ಯುತ್ತಮ ಮೂಲವಾಗಿದೆ. ನಿಮ್ಮ ಚರ್ಮದ ಮೇಲೆ ಸೂರ್ಯನ ಬೆಳಕು ಬಿದ್ದಾಗ, ನೀವು ಅದರಿಂದ ವಿಟಮಿನ್ ಡಿ ಪಡೆಯುತ್ತೀರಿ. ಇದಲ್ಲದೇ ಅನೇಕ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಡಿ ಕೂಡ ಇರುತ್ತದೆ. ವಿಟಮಿನ್ ಡಿ ಕೊರತೆಯು ಮಧುಮೇಹದಂತಹ ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣವಾಗಿದೆ ಎಂದು ಅನೇಕ ಅಧ್ಯಯನಗಳಲ್ಲಿ ಬಹಿರಂಗಪಡಿಸಲಾಗಿದೆ.

ಇದನ್ನೂ ಓದಿ: Clove Tea:ಚಳಿಗಾಲದ ಋತುವಿನಲ್ಲಿ ನಿತ್ಯ ಬೆಳಗ್ಗೆ ಒಂದು ಕಪ್ ಈ ಚಹಾ ಸೇವಿಸಿ, ಹಲವು ಕಾಯಿಲೆಗಳಿಂದ ದೂರ ಉಳಿಯಿರಿ

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವಲ್ಲಿ ಇನ್ಸುಲಿನ್ ಪಾತ್ರ

ವರದಿಗಳ ಪ್ರಕಾರ ದೇಹದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಇನ್ಸುಲಿನ್‌ಗೆ ದೇಹದ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಮಟ್ಟ(High Blood Sugar)ವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಇದು ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಕಡಿಮೆ ಮಾಡುತ್ತದೆ. ಟೈಪ್ 2  ಮಧುಮೇಹದಲ್ಲಿ ದೇಹವು ಇನ್ಸುಲಿನ್‌ಗೆ ಪ್ರತಿಕ್ರಿಯಿಸುವುದಿಲ್ಲ.

ವಿಟಮಿನ್ ಡಿ ಯ ಸರಿಯಾದ ಮಟ್ಟ

ವಿಟಮಿನ್ ಡಿ ಮಟ್ಟವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಪ್ರತಿಯೊಬ್ಬರೂ ಒಂದೇ ಮಟ್ಟದ ವಿಟಮಿನ್ ಡಿ ಹೊಂದಿರುವುದು ಅನಿವಾರ್ಯವಲ್ಲ.

ವಿಟಮಿನ್ ಡಿ ಉರಿಯೂತ ಕಡಿಮೆ ಮಾಡುತ್ತದೆ

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದೇಹದಲ್ಲಿ ಇನ್ಸುಲಿನ್ ಸಾಮಾನ್ಯ ಬಿಡುಗಡೆಯಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಿಟಮಿನ್ ಡಿ ಕೊರತೆಯಿಂದ ಈ ಸಮಸ್ಯೆ  

ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ ದೇಹದಲ್ಲಿ ನಡೆಯುವ ಅನೇಕ ಪ್ರಕ್ರಿಯೆಗಳು ನಿಧಾನಗೊಳ್ಳಲು ಪ್ರಾರಂಭಿಸುತ್ತವೆ. ಇದು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಪ್ರತಿದಿನ ಸ್ವಲ್ಪ ಸಮಯ ಬಿಸಿಲಿನಲ್ಲಿ ಕುಳಿತುಕೊಳ್ಳಿ. ಇದು ಮೂಳೆಗಳು ಮತ್ತು ಸ್ನಾಯುಗಳನ್ನು ಸಹ ಬಲಪಡಿಸುತ್ತದೆ.

ಇದನ್ನೂ ಓದಿ: Bed Tea Side Effects : ಅಪ್ಪಿತಪ್ಪಿಯೂ ಕುಡಿಯಬೇಡಿ ಬೆಳಗ್ಗೆ ಎದ್ದ ತಕ್ಷಣ ಟೀ : ಇದರಿಂದ ಆರೋಗ್ಯಕ್ಕೆ ತಪ್ಪಿದಲ್ಲ ಅಪಾಯ!

ಎಣ್ಣೆಯುಕ್ತ ಮೀನು, ಕಾಡ್ ಲಿವರ್ ಎಣ್ಣೆ, ಕೆಂಪು ಮಾಂಸ ಮತ್ತು ಮೊಟ್ಟೆಯ ಹಳದಿ ಲೋಳೆಗಳು ಉತ್ತಮ ಪ್ರಮಾಣದ ವಿಟಮಿನ್ ಡಿ ಅನ್ನು ಹೊಂದಿರುತ್ತವೆ.

ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಿರಿ

ಹೆಚ್ಚು ವಿಟಮಿನ್ ಡಿ(Vitamin D Deficiency) ತೆಗೆದುಕೊಳ್ಳಬೇಡಿ ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ಇದು ನಿಮಗೆ ಹಾನಿಕಾರಕವೂ ಆಗಬಹುದು. ವಿಟಮಿನ್ ಡಿ ಪೂರಕಗಳನ್ನು ದೀರ್ಘಕಾಲದವರೆಗೆ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ರಚನೆಗೆ ಕಾರಣವಾಗುತ್ತದೆ. ಮೂಳೆಗಳನ್ನು ದುರ್ಬಲಗೊಳಿಸುವುದರ ಜೊತೆಗೆ ಮೂತ್ರಪಿಂಡ ಮತ್ತು ಹೃದಯವನ್ನು ಸಹ ಹಾನಿಗೊಳಿಸುತ್ತದೆ. ತಜ್ಞರ ಪ್ರಕಾರ ಪೂರಕಗಳ ಬದಲಿಗೆ ಸೂರ್ಯನ ಬೆಳಕಿನೊಂದಿಗೆ ವಿಟಮಿನ್ ಡಿ ಕೊರತೆಯನ್ನು ಪೂರೈಸಲು ಪ್ರಯತ್ನಿಸುವುದು ಉತ್ತಮ. ಮತ್ತೊಂದೆಡೆ ನೀವು ಪೂರಕಗಳನ್ನು ತೆಗೆದುಕೊಂಡರೆ ವೈದ್ಯರ ಸಲಹೆಯ ಮೇರೆಗೆ ಮಾತ್ರ ಅವುಗಳನ್ನು ತೆಗೆದುಕೊಳ್ಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News