Disposal Plate Side Effects: ನೀವು ಸಹ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ತಿನ್ನುತ್ತೀರಾ? ಹಾಗಿದ್ದರೆ ಹುಷಾರ್!

Disposal Plate Side Effects: ಪ್ಲಾಸ್ಟಿಕ್ ಪ್ಲೇಟ್‌ನಲ್ಲಿ ಆಹಾರವನ್ನು ಸೇವಿಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಇದು ಕೆಲವು 'ಸ್ಲೋ ಪಾಯ್ಸನ್' ನಂತಿದ್ದು ಅದು ಮುಂದೊಂದು ದಿನ ನಿಮ್ಮನ್ನು ಯಾವುದೋ ಪ್ರಮುಖ ಕಾಯಿಲೆಯಿಂದ ಬಳಲುವಂತೆ ಮಾಡುತ್ತದೆ.

Written by - Yashaswini V | Last Updated : Oct 26, 2021, 07:51 AM IST
  • ಪ್ಲಾಸ್ಟಿಕ್ ತಟ್ಟೆಯಲ್ಲಿ ಆಹಾರವನ್ನು ತಿನ್ನುವುದರಿಂದ ಅನೇಕ ಅನಾನುಕೂಲತೆಗಳಿವೆ
  • ನೀವು ಕ್ಯಾನ್ಸರ್ನಂತಹ ಅಪಾಯಕಾರಿ ಕಾಯಿಲೆಗೆ ಬಲಿಯಾಗುವ ಸಾಧ್ಯತೆ ಇರುತ್ತದೆ
  • ದೀರ್ಘಕಾಲದವರೆಗೆ ಪ್ಲಾಸ್ಟಿಕ್ ತಟ್ಟೆಯಲ್ಲಿ ಆಹಾರವನ್ನು ಸೇವಿಸುವುದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ
Disposal Plate Side Effects: ನೀವು ಸಹ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ತಿನ್ನುತ್ತೀರಾ? ಹಾಗಿದ್ದರೆ ಹುಷಾರ್!  title=
Disposal Plate Side Effects: ಪ್ಲಾಸ್ಟಿಕ್ ಪ್ಲೇಟ್‌ನಲ್ಲಿ ಆಹಾರವನ್ನು ಸೇವಿಸುತ್ತೀರಾ? ಇದು ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಚ್ಚರ

Disposal Plate Side Effects: ನೀವು ಕೂಡ ಪ್ಲಾಸ್ಟಿಕ್ ಪ್ಲೇಟ್ ಅಥವಾ ಪಾತ್ರೆಗಳಲ್ಲಿ ಆಹಾರ ಸೇವಿಸುತ್ತೀರಾ? ಹೌದು ಎಂದಾದರೆ, ಈ ಸುದ್ದಿಯನ್ನು ತಪ್ಪದೇ ಓದಿ. ಇತ್ತೀಚಿನ ಸಂಶೋಧನೆಯ ಪ್ರಕಾರ, ನಾವು ಯಾವುದೇ ಬಿಸಿ ಆಹಾರ ಪದಾರ್ಥವನ್ನು ಪ್ಲಾಸ್ಟಿಕ್ ಪ್ಲೇಟ್ ಅಥವಾ ಬಿಸಾಡಬಹುದಾದ ಪ್ಲೇಟ್‌ನಲ್ಲಿ ಇರಿಸಿದಾಗ ಅದು ವಿಷಕಾರಿಯಾಗುತ್ತದೆ. ಪ್ಲಾಸ್ಟಿಕ್ ತಟ್ಟೆಯಲ್ಲಿರುವ ರಾಸಾಯನಿಕಗಳು ನಿಮ್ಮ ಆಹಾರದಲ್ಲಿ ಮಿಶ್ರಣವಾಗುತ್ತವೆ ಮತ್ತು ನಂತರ ನೀವು ಈ ಆಹಾರವನ್ನು ಸೇವಿಸಿದಾಗ ನೀವು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತೀರಿ.

ಆಹಾರವನ್ನು 'ವಿಷಕಾರಿ' ಮಾಡುತ್ತದೆ ಪ್ಲಾಸ್ಟಿಕ್ :
ವಾಸ್ತವವಾಗಿ, ಬಿಸ್ಫೆನಾಲ್ ಎ (BPA) ಅನ್ನು ಶುದ್ಧ ಪ್ಲಾಸ್ಟಿಕ್ ತಯಾರಿಸಲು ಬಳಸಲಾಗುತ್ತದೆ. ಬಿಪಿಎ ಮುಖ್ಯವಾಗಿ ಪಾಲಿಕಾರ್ಬೊನೇಟ್ ಅಥವಾ ಪಿಸಿ (ಮರುಬಳಕೆ ಕೋಡ್ 7) ಎಂದು ಕರೆಯಲ್ಪಡುವ ಒಂದು ವಿಧದ ಪ್ಲಾಸ್ಟಿಕ್‌ನಲ್ಲಿ ಕಂಡುಬರುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ವಿಷಕಾರಿಯಾಗಬಹುದು. ಈ ಕಾರಣದಿಂದಾಗಿ, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Benefits Of Rice: ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನ

ಪ್ಲಾಸ್ಟಿಕ್ ಪ್ಲೇಟ್‌ನಲ್ಲಿ ಆಹಾರವನ್ನು ಸೇವಿಸುವುದರಿಂದ ಈ ರೋಗಗಳಿಗೆ ತುತ್ತಾಗಬಹುದು:
BPA ಎಂಬುದು ನಿಮ್ಮ ದೇಹದಲ್ಲಿನ ಈಸ್ಟ್ರೊಜೆನ್‌ನಂತಹ ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುವ ರಾಸಾಯನಿಕವಾಗಿದೆ. ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಅಸಮತೋಲನದಿಂದಾಗಿ ಅನೇಕ ರೋಗಗಳು ಸಂಭವಿಸಬಹುದು. ಹಾರ್ಮೋನ್ ಅಸಮತೋಲನವು ಮೂಡ್ ಸ್ವಿಂಗ್, ಬೆಳಕಿನ ಸೂಕ್ಷ್ಮತೆ, ಎಣ್ಣೆಯುಕ್ತ ಚರ್ಮ, ನಿದ್ರಾಹೀನತೆ (Insomnia), ಒತ್ತಡ, ಕಿರಿಕಿರಿ, ಆತಂಕ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಈ ಕಾರಣದಿಂದಾಗಿ, ಮಹಿಳೆಯರು ಬಂಜೆತನದ ಸಮಸ್ಯೆಗೂ ತುತ್ತಾಗಬಹುದು. ಬಿಪಿಎಯಿಂದ ತಯಾರಿಸಿದ ಪಾತ್ರೆಗಳನ್ನು ಬಿಸಿ ಮಾಡುವುದರಿಂದ ಆಹಾರದಲ್ಲಿ ಬಿಪಿಎ ಮಟ್ಟವನ್ನು ಹೆಚ್ಚಿಸುತ್ತದೆ.

ಇವುಗಳಿಂದ ಮಕ್ಕಳ ಆರೋಗ್ಯಕ್ಕೆ ಹಾನಿಯಾಗುತ್ತದೆ:
ದೀರ್ಘಕಾಲದವರೆಗೆ ಪ್ಲಾಸ್ಟಿಕ್ ತಟ್ಟೆಯಲ್ಲಿ ಆಹಾರವನ್ನು ಸೇವಿಸುವುದರಿಂದ ಮಕ್ಕಳ ರೋಗನಿರೋಧಕ  (Immunity) ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ. ಆದರೆ, ಗರ್ಭಿಣಿಯರು ದೀರ್ಘಕಾಲದವರೆಗೆ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ಸೇವಿಸುವುದರಿಂದ ಹೆರಿಗೆಯಲ್ಲಿ ಅಸ್ವಸ್ಥತೆ  (Disorder)  ಉಂಟಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ಆದಷ್ಟು ಪ್ಲಾಸ್ಟಿಕ್ ಪ್ಲೇಟ್ ಮತ್ತು ಪಾತ್ರೆಗಳನ್ನು ಬಳಸಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಇದನ್ನೂ ಓದಿ- How To Lose Weight: ತೂಕ ಕಡಿಮೆ ಮಾಡುವಲ್ಲಿ ಬಹಳ ಪರಿಣಾಮಕಾರಿ ಈ 3 ಪದಾರ್ಥಗಳು

ಈ ರೀತಿಯ ಆಹಾರವನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬೇಡಿ:
ನಮ್ಮಲ್ಲಿ ಹಲವರು ಆಹಾರವನ್ನು ಬಿಸಿಮಾಡಲು ಮೈಕ್ರೋವೇವ್ (Microwave) ಬಳಸುತ್ತಾರೆ. ಆದರೆ ಕೆಲವರು ಆಹಾರವನ್ನು ಪ್ಲಾಸ್ಟಿಕ್ ತಟ್ಟೆಯಲ್ಲಿ ಹಾಕಿ ನೇರವಾಗಿ ಮೈಕ್ರೊವೇವ್‌ನಲ್ಲಿ ಇಡುತ್ತಾರೆ, ಇದರಿಂದಾಗಿ ಅನೇಕ ಸೂಕ್ಷ್ಮ ಕಣಗಳು ಮತ್ತು ಸಣ್ಣ ಪ್ರಮಾಣದ ಪ್ಲಾಸ್ಟಿಕ್ ನಿಮ್ಮ ಆಹಾರಕ್ಕೆ ಹೋಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಆಹಾರವನ್ನು ಸೇವಿಸಿದಾಗ, ಈ ರಾಸಾಯನಿಕಗಳು ನಿಮ್ಮ ದೇಹವನ್ನು ತಲುಪುವ ಮೂಲಕ ನಿಮಗೆ ಹಾನಿ ಮಾಡಬಹುದು. ನೀವು ಕೂಡ ಇದೇ ರೀತಿಯ ತಪ್ಪು ಮಾಡುತ್ತಿದ್ದರೆ ಜಾಗರೂಕರಾಗಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News