ದೀಪಾವಳಿಯ ರಾತ್ರಿ ಈ 5 ಪ್ರಾಣಿಗಳನ್ನ ನೋಡಿದ್ರೆ ಅದೃಷ್ಟ ಹೊಳೆಯುತ್ತದೆ, ಆರ್ಥಿಕ ಸಮಸ್ಯೆ ದೂರವಾಗುತ್ತದೆ!

ಆ ದಿನ ಲಕ್ಷ್ಮಿಯು ಮನೆಗೆ ಪ್ರವೇಶಿಸುತ್ತಾಳೆ ಮತ್ತು ವರ್ಷವಿಡೀ ಕುಟುಂಬಕ್ಕೆ ಸಮೃದ್ಧಿಯನ್ನು ತರುತ್ತಾಳೆ ಎಂದು ನಂಬಲಾಗಿದೆ. ಲಕ್ಷ್ಮಿ ದೇವಿಯ ಆಗಮನದ ಮೊದಲು ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ, ದೇವಿಯ ಪೂಜೆ ಮಾಡಲು ಸಿದ್ಧರಾಗುತ್ತಾರೆ.

Written by - Channabasava A Kashinakunti | Last Updated : Oct 24, 2021, 08:32 PM IST
  • ದೀಪಾವಳಿಯ ರಾತ್ರಿ ಈ ಜೀವಿಗಳನ್ನು ನೋಡುವುದು ಮಂಗಳಕರ
  • ಇದರಿಂದ ಲಕ್ಷ್ಮಿದೇವಿ ಮನೆಗೆ ಬರುತ್ತಾಳೆ
  • ಕುಟುಂಬದಲ್ಲಿ ಸಂತೋಷ ಬರುತ್ತದೆ
ದೀಪಾವಳಿಯ ರಾತ್ರಿ ಈ 5 ಪ್ರಾಣಿಗಳನ್ನ ನೋಡಿದ್ರೆ ಅದೃಷ್ಟ ಹೊಳೆಯುತ್ತದೆ, ಆರ್ಥಿಕ ಸಮಸ್ಯೆ ದೂರವಾಗುತ್ತದೆ! title=

ನವದೆಹಲಿ : ದೇಶದ ಅತಿ ದೊಡ್ಡ ಹಬ್ಬ ದೀಪಾವಳಿ (Diwali 2021) ಬರಲು ಇನ್ನು ಕೆಲವೇ ದಿನಗಳು ಮಾತ್ರ ಉಳಿದಿವೆ. ಆ ದಿನ ಲಕ್ಷ್ಮಿಯು ಮನೆಗೆ ಪ್ರವೇಶಿಸುತ್ತಾಳೆ ಮತ್ತು ವರ್ಷವಿಡೀ ಕುಟುಂಬಕ್ಕೆ ಸಮೃದ್ಧಿಯನ್ನು ತರುತ್ತಾಳೆ ಎಂದು ನಂಬಲಾಗಿದೆ. ಲಕ್ಷ್ಮಿ ದೇವಿಯ ಆಗಮನದ ಮೊದಲು ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ, ದೇವಿಯ ಪೂಜೆ ಮಾಡಲು ಸಿದ್ಧರಾಗುತ್ತಾರೆ.

ಶಕುನ್ ಶಾಸ್ತ್ರದ ಪ್ರಕಾರ, ದೀಪಾವಳಿ(Diwali 2021)ಯ ರಾತ್ರಿ ಮನೆಯಲ್ಲಿ ಅಥವಾ ಸುತ್ತಮುತ್ತ ಕೆಲವು ಪ್ರಾಣಿಗಳನ್ನ ನೀವು ನೋಡಿದರೆ, ಅದು  ಲಕ್ಷ್ಮಿದೇವಿಯ ಆಗಮನದ ಸೂಚಕವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯ ರಾತ್ರಿಯಲ್ಲಿ ಅವುಗಳನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುವ ಆ ಜೀವಿಗಳು ಯಾವವು ಇಲ್ಲಿದೆ ತಿಳಿಯಿರಿ.

ಇದನ್ನೂ ಓದಿ : 2021ರ ಗ್ರಹಣ ಯೋಗ: ಈ 4 ರಾಶಿಯ ಜನರು ಬಹಳ ಜಾಗರೂಕರಾಗಿರಬೇಕು..!

ಹಲ್ಲಿ

ಹಲ್ಲಿಗಳು(Lizards) ಮನೆಗಳಲ್ಲಿ ಕಾಣುವ ಸಾಮಾನ್ಯ ಜೀವಿ. ನಾವು ಆಗಾಗ್ಗೆ ಕೊಠಡಿಯಿಂದ ಇವುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ನಮಗೆ ಯಾವುದೇ ತೊಂದರೆ ಮಾಡುವುದಿಲ್ಲ ಮತ್ತು ಸೊಳ್ಳೆ-ನೊಣದಂತಹ ಸಣ್ಣ ಜೀವಿಗಳನ್ನು ತಿನ್ನುವ ಮೂಲಕ ಮನೆಯನ್ನು ಶುಚಿಗೊಳಿಸುತ್ತಲೇ ಇರುತ್ತದೆ. ಶಕುನ್ ಶಾಸ್ತ್ರದ ಪ್ರಕಾರ, ದೀಪಾವಳಿಯ ರಾತ್ರಿ ಹಲ್ಲಿಯನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಬೆಕ್ಕು

ಶಕುನ್ ಶಾಸ್ತ್ರದ ಪ್ರಕಾರ, ದೀಪಾವಳಿಯ ರಾತ್ರಿ ಮನೆಯಲ್ಲಿ ಅಥವಾ ಹತ್ತಿರ ಬೆಕ್ಕನ್ನು(Cat) ನೋಡುವುದು ಲಕ್ಷ್ಮಿ ದೇವಿಯ ಆಗಮನದ ಸೂಚಕವಾಗಿದೆ. ಬೆಕ್ಕನ್ನು ನೋಡುವುದು ಮನೆಗೆ ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.

ಹಸು

ಭಾರತೀಯ ಸಂಸ್ಕೃತಿಯಲ್ಲಿ ಗೋವು ಯಾವಾಗಲೂ ಪವಿತ್ರ ಪ್ರಾಣಿಯಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಸುವನ್ನು ದೈವತ್ವದ ಸಂಕೇತವೆಂದು ಪರಿಗಣಿಸಲಾಗಿದೆ. ದೀಪಾವಳಿಯ ರಾತ್ರಿ ಹಸುವಿನ ನೋಟವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಗೆ ಲಕ್ಷ್ಮಿ ದೇವಿ(Lord Laxmi)ಯ ಆಗಮನವನ್ನು ಸಂಕೇತಿಸುತ್ತದೆ. ಇದು ಕುಟುಂಬ ಸದಸ್ಯರಲ್ಲಿ ವಾತ್ಸಲ್ಯವನ್ನು ಹೆಚ್ಚಿಸುತ್ತದೆ ಮತ್ತು ಐಕ್ಯತೆಯನ್ನು ಬಲಪಡಿಸುತ್ತದೆ.

ಗೂಬೆ

ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಲಾಗಿದೆ. ಶಕುನ್ ಶಾಸ್ತ್ರದ ಪ್ರಕಾರ, ದೀಪಾವಳಿಯ ರಾತ್ರಿ(Diwali Night) ಗೂಬೆಯನ್ನು ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ವರ್ಷವಿಡೀ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಇದನ್ನು ನೋಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ.

ಇದನ್ನೂ ಓದಿ : Horoscope: ದಿನಭವಿಷ್ಯ 24-10-2021 Today Astrology

ಸೊಂಡಿ ಇಲಿ

ಸೊಂಡಿ ಇಲಿ ಒಂದು ಸಣ್ಣ ಪ್ರಾಣಿಯಾಗಿದ್ದು ಅದು ಇಲಿಯಂತೆ ಕಾಣುತ್ತದೆ. ಈ ಪ್ರಾಣಿ(Animals)ಯನ್ನು ಮನೆಯಲ್ಲಿ ನೋಡುವುದು ಸಾಮಾನ್ಯವಾಗಿ ಕೆಟ್ಟದ್ದು ಎಂದು ಪರಿಗಣಿಸಲಾಗುತ್ತದೆ. ಆದ್ರೆ, ಶಕುನ್ ಶಾಸ್ತ್ರದಲ್ಲಿ ದೀಪಾವಳಿಯ ರಾತ್ರಿಯಲ್ಲಿ ಒಂದು ಸೊಂಡಿ ಇಲಿ ಕಂಡುಬಂದರೆ, ಅದು ಶುಭ ಎಂದು ಹೇಳಲಾಗಿದೆ. ಇದನ್ನು ನೋಡುವುದರಿಂದ, ಮನೆಯ ಆರ್ಥಿಕ ನಿರ್ಬಂಧಗಳು ನಿವಾರಣೆಯಾಗುತ್ತವೆ ಮತ್ತು ಕುಟುಂಬದ ಎಲ್ಲಾ ಕೆಟ್ಟ ಕೆಲಸಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News