Skin Care Tips: ಈ ತಪ್ಪುಗಳಿಂದ ಮುಖದ ಬಣ್ಣ ಕಳೆಗುಂದಬಹುದು

Skin Care Tips: ಮುಖದ ಸೌಂದರ್ಯವು ಒಂದು ರೀತಿಯಲ್ಲಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸುಂದರವಾದ ತ್ವಚೆಗಾಗಿ ನಾವು ಹಲವು ಕ್ರಮಗಳನ್ನು ಅನುಸರಿಸುತ್ತೇವೆ. ಆದರೆ, ನಮಗೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ನಮ್ಮ ತ್ವಚೆಗೆ ಹಾನಿಕಾರಕ ಎಂದು ಸಾಬೀತು ಪಡಿಸಬಹುದು.

Written by - Yashaswini V | Last Updated : Jul 1, 2022, 02:32 PM IST
  • ತ್ವಚೆ ತಜ್ಞರ ಪ್ರಕಾರ, ಡ್ರೈ ಸ್ಕಿನ್ ಹೊಂದಿರುವವರು ಎಣ್ಣೆಯುಕ್ತ ಉತ್ಪನ್ನಗಳನ್ನು ಬಳಸಬೇಕು.
  • ಎಣ್ಣೆಯುಕ್ತ ಚರ್ಮ ಹೊಂದಿರುವವರು ನೀರು ಅಥವಾ ಪುಡಿ ಆಧಾರಿತ ಉತ್ಪನ್ನಗಳನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ.
  • ಆದರೆ, ತಜ್ಞರ ಪ್ರಕಾರ ಮುಖವನ್ನು ತೊಳೆದ ನಂತರ ಯಾವಾಗಲೂ ಮಾಯಿಶ್ಚರೈಸರ್ ಅನ್ನು ಅನ್ವಯಿಸುವುದು ಬಹಳ ಮುಖ್ಯ
Skin Care Tips: ಈ ತಪ್ಪುಗಳಿಂದ ಮುಖದ ಬಣ್ಣ ಕಳೆಗುಂದಬಹುದು title=
Skin Care Mistakes

ಸ್ಕಿನ್ ಕೇರ್ : ಆರೋಗ್ಯಕರವಾದ ಹೊಳೆಯುವ ತ್ವಚೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಉತ್ಪನ್ನಗಳನ್ನು ಬಳಸುವುದರ ಜೊತೆಗೆ ಕೆಲವು ಮನೆಮದ್ದುಗಳನ್ನೂ ಅಳವಡಿಸಿಕೊಳ್ಳುವುದನ್ನು ನಾವು ಕಾಣಬಹುದು. ಆದಾಗ್ಯೂ, ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎಂದು ಹಲವರು ಕೊರಗುತ್ತಾರೆ. ಇದಕ್ಕೆ ಚರ್ಮದ ಆರೈಕೆಯಲ್ಲಿ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳೂ ಕಾರಣವಿರಬಹುದು ಎಂದು ನಿಮಗೆ ತಿಳಿದಿದೆಯೇ? 

ಹೌದು, ಚರ್ಮದ ಆರೈಕೆಯಲ್ಲಿ ನಾವು ಕೈಗೊಳ್ಳುವ ಕೆಲವು ಪರಿಹಾರಗಳು ನಮಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಉಂಟುಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಚರ್ಮದ ವಿಧಾನವನ್ನರಿಯದೆ ಸ್ಕಿನ್ ಪ್ರಾಡಕ್ಟ್ ಬಳಸುವುದು ಅಥವಾ ಮನೆಮದ್ದುಗಳನ್ನು ಬಳಸುವುದು. ಇಂತಹ ಒಂದೆರಡು ತಪ್ಪುಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ.

ಈ ತಪ್ಪುಗಳು ನಿಮ್ಮ ತ್ವಚೆಗೆ ಹಾನಿಕಾರಕ ಎಂದು ಸಾಬೀತು ಪಡಿಸಬಹುದು:
ತ್ವಚೆ ತಜ್ಞರ ಪ್ರಕಾರ,  ಡ್ರೈ ಸ್ಕಿನ್ ಹೊಂದಿರುವವರು ಎಣ್ಣೆಯುಕ್ತ ಉತ್ಪನ್ನಗಳನ್ನು ಬಳಸಬೇಕು, ಎಣ್ಣೆಯುಕ್ತ ಚರ್ಮ ಹೊಂದಿರುವವರು ನೀರು ಅಥವಾ ಪುಡಿ ಆಧಾರಿತ ಉತ್ಪನ್ನಗಳನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ- Skin care: ಮುಖಕ್ಕೆ ಅರಿಶಿನವನ್ನು ಹಚ್ಚುವ ಸರಿಯಾದ ವಿಧಾನ ಇಲ್ಲಿದೆ ನೋಡಿ

ಪದೇ ಪದೇ ಮುಖ ತೊಳೆಯುವುದನ್ನು ತಪ್ಪಿಸಿ:
ಕೆಲವರು ಪದೇ ಪದೇ ಮುಖ ತೊಳೆಯುವ ಅಭ್ಯಾಸ ಹೊಂದಿರುತ್ತಾರೆ. ನಿತ್ಯ ಹಲವು ಬಾರಿ ಮುಖ ತೊಳೆಯುವುದರಿಂದ ಹೊಳೆಯುವ ತ್ವಚೆ ಪಡೆಯಬಹುದು ಎಂಬುದು ಹಲವರ ನಂಬಿಕೆ. ಆದರೆ, ಹಾಗೆ ಮಾಡುವುದು ನಿಮ್ಮ ತ್ವಚೆಗೆ ಹಾನಿಕಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಇದಕ್ಕೆ ಮುಖ್ಯ ಕಾರಣ ಮುಖವನ್ನು ಹೆಚ್ಚಾಗಿ ತೊಳೆಯುವುದರಿಂದ ಮುಖದ ಮೇಲೆ ಇರುವ ನೈಸರ್ಗಿಕ ಹೊಳಪು ಮರೆಯಾಗಲು ಪ್ರಾರಂಭಿಸುತ್ತದೆ. ಇದಲ್ಲದೆ ಮುಖವು ಡ್ರೈ ಕೂಡ ಆಗಬಹುದು ಎನ್ನುತ್ತಾರೆ ಚರ್ಮ ತಜ್ಞರು.

ಇದಲ್ಲದೆ, ಕೆಲವು ಮುಖ ತೊಳೆದ ನಂತರ ಮುಖಕ್ಕೆ ಕ್ರೀಂ ಹಚ್ಚುವುದಿಲ್ಲ. ಆದರೆ, ತಜ್ಞರ ಪ್ರಕಾರ ಮುಖವನ್ನು ತೊಳೆದ ನಂತರ ಯಾವಾಗಲೂ ಮಾಯಿಶ್ಚರೈಸರ್ ಅನ್ನು ಅನ್ವಯಿಸುವುದು ಬಹಳ ಮುಖ್ಯ. ಇದರಿಂದ ನಿಮ್ಮ ಚರ್ಮವು ಮೃದುವಾಗಿರುತ್ತದೆ.  

ಇದನ್ನೂ ಓದಿ- Men Skin Care: ಪುರುಷರ ಚರ್ಮದ ಆರೈಕೆಗಾಗಿ 6 ಅಗತ್ಯ ಸಲಹೆಗಳು

ಮನೆಮದ್ದುಗಳನ್ನು ಬಳಸುವ ಮೊದಲು ಈ ಬಗ್ಗೆ ನಿಗಾವಹಿಸಿ:
ಕೆಲವರು ಸುಂದರ ತ್ವಚೆಗಾಗಿ ಹಲವು ರೀತಿಯ ಮನೆಮದ್ದುಗಳನ್ನು ಬಳಸುತ್ತಾರೆ. ಹಲವು ಬಗೆಯ ಫೇಸ್ ಪ್ಯಾಕ್, ಕ್ರೀಮ್, ಇತ್ಯಾದಿಗಳನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ ವಿಪರ್ಯಾಸವೆಂದರೆ ಸರಿಯಾದ ಮಾಹಿತಿ ಇಲ್ಲದೆ ಸಿಕ್ಕಿದ್ದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲೆ ಮೊಡವೆಗಳು, ಚುಕ್ಕೆಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದನ್ನು ತಪ್ಪಿಸಲು ನೀವು ಬಳಸುವ ಮನೆಮದ್ದು ನಿಮ್ಮ ತ್ವಚೆಗೆ ಹೊಂದಿಕೆ ಆಗುತ್ತದೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸುವುದನ್ನು ಮರೆಯಬೇಡಿ.  ಇಲ್ಲದಿದ್ದರೆ ಅದು ನಿಮಗೆ ಲಾಭದ ಬದಲು ಹಾನಿ ಮಾಡುತ್ತದೆ. ಉದಾಹರಣೆಗೆ, ಡ್ರೈ ಸ್ಕಿನ್ ಹೊಂದಿರುವವರು ಮುಲ್ತಾನಿ ಮಿತ್ತಿಯನ್ನು ಹಚ್ಚುವುದರಿಂದ ಅವರ ಸ್ಕಿನ್ ಇನ್ನೂ ಹೆಚ್ಚು ಒಣಗುತ್ತದೆ. ಇದಲ್ಲದೆ, ಎಣ್ಣೆಯುಕ್ತ ತ್ವಚೆಯಿರುವವರು ಅರಿಶಿನ-ಮೊಸರು ಫೇಸ್-ಮಾಸ್ಕ್ ಅನ್ನು ಹಚ್ಚಿದರೆ ಅದು ಅವರ ಚರ್ಮವನ್ನು ಇನ್ನಷ್ಟು ಎಣ್ಣೆಯುಕ್ತಗೊಳಿಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News