Shani Prakopa: ಶನಿಯ ಪ್ರಕೋಪದಿಂದ ಬಚಾವಾಗಲು ಇಂದೇ ಈ ಕೆಲಸ ಮಾಡುವುದನ್ನು ನಿಲ್ಲಿಸಿ

Shani Prakopa: ಶನಿದೇವನ ಅಸಮಾಧಾನಕ್ಕೆ ಕಾರಣವಾಗುವ ಕೆಲಸಗಳಿಂದ ಯಾವಾಗಲೂ ದೂರವಿರಬೇಕು. ಇಲ್ಲದಿದ್ದರೆ, ಶನಿದೇವನ ದುಷ್ಟ ಕಣ್ಣು ವೃತ್ತಿಯಿಂದ ಹಿಡಿದು ಹಣ, ಆರೋಗ್ಯ ಸೇರಿದಂತೆ ಜೀವನದ ಎಲ್ಲಾ ಕ್ಷೇತ್ರಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.  

Written by - Yashaswini V | Last Updated : Dec 27, 2021, 07:40 AM IST
  • ಕೆಟ್ಟ ಅಭ್ಯಾಸಗಳು ಶನಿದೇವನನ್ನು ಕೆರಳಿಸುತ್ತದೆ
  • ಜೂಜು, ಮದ್ಯಪಾನದಿಂದ ಸದಾ ದೂರವಿರಿ
  • ಬಡವರು, ಅಸಹಾಯಕರು, ಮಹಿಳೆಯರು-ವೃದ್ಧರನ್ನು ಅವಮಾನಿಸಬೇಡಿ
Shani Prakopa: ಶನಿಯ ಪ್ರಕೋಪದಿಂದ ಬಚಾವಾಗಲು ಇಂದೇ ಈ ಕೆಲಸ ಮಾಡುವುದನ್ನು ನಿಲ್ಲಿಸಿ title=
Shani Vakra Drushti

Shani Prakopa: ಶನಿದೇವನ ಅಸಮಾಧಾನ ಮತ್ತು ಕೋಪಕ್ಕೆ ದೇವತೆಗಳೂ ಹೆದರುತ್ತಾರೆ. ಶನಿಯ ವಕ್ರ ದೃಷ್ಟಿ ಬಿತ್ತೆಂದರೆ ಜೀವನದಲ್ಲಿ ಸಂಕಟಗಳು ಒದ್ದಿಕೊಂಡು ಬರುತ್ತವೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಶನಿಯು ಪ್ರಸನ್ನನಾಗಿದ್ದರೆ, ಜೀವನದಲ್ಲಿ ಯಾವುದೇ ಕೊರತೆಯಿರುವುದಿಲ್ಲ ಎಂಬ ನಂಬಿಕೆಯೂ ಇದೆ. ಆದ್ದರಿಂದ ಶನಿದೇವನ ಸ್ವಭಾವಕ್ಕೆ ತಕ್ಕಂತೆ ವರ್ತಿಸುವುದು ಉತ್ತಮ. ಜ್ಯೋತಿಷ್ಯವು ಯಾವಾಗಲೂ ಶನಿಯ ದುಷ್ಟ ಕಣ್ಣಿನಿಂದ ರಕ್ಷಿಸುವ ಇಂತಹ ಕೆಲಸಗಳನ್ನು ತಪ್ಪಿಸಲು ಜನರಿಗೆ ಸಲಹೆ ನೀಡುತ್ತದೆ. ಶನಿದೇವನ ಅಸಮಾಧಾನವನ್ನು ತಪ್ಪಿಸಲು, ಯಾವ ವಸ್ತುಗಳನ್ನುಅಥವಾ ಅಭ್ಯಾಸಗಳನ್ನು ಸದಾ ದೂರವಿಡಬೇಕು ಎಂದು ತಿಳಿದಿರುವುದು ಬಹಳ ಮುಖ್ಯ.

ಈ ಕೆಲಸಗಳನ್ನು ಶನಿದೇವ ಎಂದಿಗೂ ಇಷ್ಟಪಡುವುದಿಲ್ಲ:
ಬಡವರನ್ನು ಮತ್ತು ಅಸಹಾಯಕರನ್ನು ಅವಮಾನಿಸುವ ಅಥವಾ ಅವರಿಗೆ ಕಿರುಕುಳ ನೀಡುವ ಜನರನ್ನು ಶನಿದೇವನ ಕೋಪದಿಂದ (Shani Prakopa) ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ಮಾಡುವವರಿಗೆ ಕೆಟ್ಟ ಕಾಲ ಶುರುವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅದರಲ್ಲೂ ದೃಷ್ಟಿದೋಷವುಳ್ಳವರು-ಅಂಗವಿಕಲರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಶನಿದೇವನಿಗೆ ತುಂಬಾ ಕೋಪ ತರಿಸುತ್ತದೆ.  

ಇದನ್ನೂ ಓದಿ-  Advantages, Disadvantages Of Gemstones: ನೀವೂ ರತ್ನಗಳನ್ನು ಧರಿಸುತ್ತೀರಾ? ಈ ಸಂಗತಿಗಳು ನಿಮಗೆ ತಿಳಿದಿರಲಿ, ಇಲ್ದಿದ್ರೆ...!

ಕೊಳಕು ಉಗುರು ಹೊಂದಿರುವ ಜನರು ಸಹ ದುಃಖದಲ್ಲಿ ಬದುಕುತ್ತಾರೆ. ಅಂತಹವರ ಮೇಲೆ ಶನಿ ದೇವ್ ಯಾವಾಗಲೂ ಕೋಪಗೊಳ್ಳುತ್ತಾನೆ. 

ಮಹಿಳೆಯರು ಮತ್ತು ಹಿರಿಯರನ್ನು ಅವಮಾನಿಸುವ ಜನರ ಮೇಲೆ ಶನಿಯು ಬಹಳ ಬೇಗ ಕೋಪಗೊಳ್ಳುತ್ತಾನೆ.

ಜೂಜು-ಮದ್ಯ ಸೇವನೆಯೂ ಶನಿದೇವನಿಗೆ ಕಿರಿಕಿರಿ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಂತಹವರ ಜಾತಕದಲ್ಲಿ ಶನಿ ಗ್ರಹವು (Shani Grah) ದುರ್ಬಲಗೊಂಡು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಜೂಜಾಟದಂತಹ ಚಟುವಟಿಕೆಗಳಲ್ಲಿ ತೊಡಗಿರುವ ಜನರು ಶನಿಯ ವಕ್ರದೃಷ್ಟಿಯಿಂದ ಪಾರಾಗುವುದು ಕಷ್ಟ ಎಂದು ಹೇಳಲಾಗುತ್ತದೆ.

ಮರೆತೂ ಸಹ ನಾಯಿಗಳಿಗೆ ಕಿರುಕುಳ ನೀಡಬೇಡಿ. ಅದರಲ್ಲೂ ನಾಯಿಗಳು ತಿನ್ನುವಾಗ ತಪ್ಪಾಗಿಯೂ ಕೀಟಲೆ ಮಾಡಬೇಡಿ. ಹೀಗೆ ಮಾಡುವುದರಿಂದ ಶನಿದೇವನಿಗೆ ಕೋಪ ಬರುತ್ತದೆ. 

ಕಳ್ಳತನ ಮಾಡುವವರ ಮೇಲೆ, ಇತರರ ಹಣದ ಮೇಲೆ ಕೆಟ್ಟ ಕಣ್ಣು ಇಟ್ಟು ಅಥವಾ ಮೋಸದಿಂದ ಇತರರ ಹಣವನ್ನು ಕದಿಯುವವರು ಶನಿದೇವನ ಕ್ರೋಧವನ್ನು ಎದುರಿಸದೆ ಬೇರೆ ದಾರಿಯೇ ಇಲ್ಲ.

ಇದನ್ನೂ ಓದಿ- Guru Gochar 2022: ಈ ಮೂರು ರಾಶಿಗಳ ಭಾಗ್ಯಕ್ಕೆ ಸಿಗಲಿದೆ ದೇವಗುರು ಬೃಹಸ್ಪತಿಯ ಸಾಥ್, ಹೊಸವರ್ಷದಲ್ಲಿ ಮಾಲಾಮಾಲ್

ಶನಿಯ ಆಶೀರ್ವಾದ ಪಡೆಯಲು ಈ ಕೆಲಸ ಮಾಡಿ :
ರೋಗಿಗಳಿಗೆ, ಅಸಹಾಯಕರಿಗೆ, ವೃದ್ಧರಿಗೆ ಯಾವಾಗಲೂ ಸಹಾಯ ಮಾಡಿ. ನಾಯಿಗಳಿಗೆ ಆಹಾರ ನೀಡಿ. ಜಾತಕದಲ್ಲಿ ಶನಿ ಬಲಹೀನನಾಗಿದ್ದರೆ, ಈ ಕೆಲಸವನ್ನು ನಿಯಮಿತವಾಗಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಕಷ್ಟಗಳು ಕಡಿಮೆಯಾಗುತ್ತವೆ. ಇದರೊಂದಿಗೆ ವೃತ್ತಿ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಇದಲ್ಲದೇ ಶನಿದೇವರ ದೇವಸ್ಥಾನದಲ್ಲಿ ದೀಪ ಹಚ್ಚುವುದು, ಕಪ್ಪು ವಸ್ತುಗಳನ್ನು ಬಡವರಿಗೆ ದಾನ ಮಾಡುವುದರಿಂದ ಹೆಚ್ಚಿನ ಲಾಭವಾಗುತ್ತದೆ.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News