Anant Chaturdashi 2021: ಅನಂತ ಚತುರ್ದಶಿಯ ದಿನ ಈ 3 ಕೆಲಸಗಳನ್ನು ಮಾಡಿದರೆ ಭಗವಾನ್ ವಿಷ್ಣು ನಿಮ್ಮೆಲ್ಲಾ ಆಸೆಗಳನ್ನು ಪೂರೈಸುತ್ತಾನೆ

Anant Chaturdashi 2021: ಗಣಪತಿ ಬಪ್ಪನ ವಿದಾಯದ ದಿನವಾದ ಅನಂತ ಚತುರ್ದಶಿಯು ಭಗವಾನ್ ವಿಷ್ಣುವಿನ ಪೂಜೆಗೆ ಬಹಳ ಮುಖ್ಯವಾಗಿದೆ. ಈ ದಿನ ಭಗವಾನ್ ವಿಷ್ಟುವಿಗೆ ವಿಶೇಷ ಪೂಜೆ ಮಾಡುವುದರಿಂದ ನಿಮ್ಮೆಲ್ಲಾ ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Sep 17, 2021, 09:30 AM IST
  • ಅನಂತ ಚತುರ್ದಶಿಯಂದು ವಿಷ್ಣುವನ್ನು ಆರಾಧಿಸಿ
  • ಈ ದಿನ ಉಪವಾಸ ಮಾಡುವುದರಿಂದ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ
  • ಭಗವಾನ್ ವಿಷ್ಣು ಭಕ್ತರ ಮನೋಕಾಮನೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ
Anant Chaturdashi 2021: ಅನಂತ ಚತುರ್ದಶಿಯ ದಿನ ಈ 3 ಕೆಲಸಗಳನ್ನು ಮಾಡಿದರೆ ಭಗವಾನ್ ವಿಷ್ಣು ನಿಮ್ಮೆಲ್ಲಾ ಆಸೆಗಳನ್ನು ಪೂರೈಸುತ್ತಾನೆ title=
Anant Chaturdashi 2021- ಇಷ್ಟಾರ್ಥ ಸಿದ್ಧಿಗಾಗಿ ಅನಂತ ಚತುರ್ದಶಿಯಂದು ಈ ಕೆಲಸವನ್ನು ತಪ್ಪದೇ ಮಾಡಿ

ಬೆಂಗಳೂರು: Anant Chaturdashi 2021- ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯನ್ನು ಅನಂತ ಚತುರ್ದಶಿ (Anant Chaturdashi)  ಎಂದು ಕರೆಯಲಾಗುತ್ತದೆ. ಈ ದಿನ, ಗಣಪತಿ ಬಪ್ಪ ಹೊರಟು ಮುಂದಿನ ವರ್ಷ ಮತ್ತೆ ಬರುವ ಭರವಸೆ ನೀಡುತ್ತಾನೆ. ಗಣೇಶ ವಿಸರ್ಜನೆಯ (Ganpati Visarjan) ದಿನದಂದು, ಗಣೇಶನನ್ನು ಪೂಜಿಸುವಾಗ ಕೆಲವು ಕೆಲಸಗಳನ್ನು ಮಾಡುವುದು ಶುಭ ಎಂದು ಪರಿಗಣಿಸಲಾಗಿದ್ದು, ಇದರಿಂದ ಗಣಪತಿ ಬಪ್ಪನು ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ಇದೆ. ಈ ವರ್ಷ ಅನಂತ ಚತುರ್ದಶಿ 2021 (Anant Chaturdashi 2021)  ಅನ್ನು ಸೆಪ್ಟೆಂಬರ್ 19 ರಂದು ಆಚರಿಸಲಾಗುವುದು.

ಇಷ್ಟಾರ್ಥ ಸಿದ್ಧಿಗಾಗಿ ಅನಂತ ಚತುರ್ದಶಿಯಂದು ಈ ಕೆಲಸವನ್ನು ತಪ್ಪದೇ ಮಾಡಿ :
ಭಗವಾನ್ ವಿಷ್ಣುವಿನ ಆರಾಧನೆ:
ಅನಂತ ಚತುರ್ದಶಿಯ ದಿನದಂದು ವಿಷ್ಣುವನ್ನು  (Lord Vishnu) ಪೂಜಿಸಬೇಕು. ಏಕೆಂದರೆ ಭಗವಾನ್ ವಿಷ್ಣುವಿನ ಪ್ರೀತಿಯ ಶೇಷನಾಗನ ಹೆಸರು ಅನಂತ್. ಆದ್ದರಿಂದ ಚತುರ್ದಶಿಗೆ ಅನಂತ ಚತುರ್ದಶಿ ಎಂದು ಹೆಸರಿಡಲಾಗಿದೆ. 

ಇದನ್ನೂ ಓದಿ- Vastu Tips: ಈ 3 ಅದ್ಭುತ ಟಿಪ್ಸ್ ಅನುಸರಿಸಿದರೆ, ನಿಮ್ಮ ಪರ್ಸ್ ಎಂದಿಗೂ ಖಾಲಿ ಆಗಲ್ಲ

ಉಪವಾಸ ವ್ರತ: ಅನಂತ ಚತುರ್ದಶಿಯನ್ನು (Anant Chaturdashi 2021) ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಉಪವಾಸವನ್ನು ಆಚರಿಸುವ ಮೂಲಕ ಜೀವನದಲ್ಲಿ ಎದುರಾಗುವ ತೊಂದರೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. ಜೂಜಾಟದಲ್ಲಿ ಪಾಂಡವರು ತಮ್ಮ ರಾಜಮನೆತನವನ್ನು ಕಳೆದುಕೊಂಡಾಗ, ಶ್ರೀಕೃಷ್ಣನು ತಮ್ಮ ಕುಟುಂಬದೊಂದಿಗೆ ಅನಂತ ಚತುರ್ದಶಿಯಂದು ಉಪವಾಸ ಮಾಡುವಂತೆ ಹೇಳಿದನು. ನಂತರ ಪಾಂಡವರು ಮತ್ತೆ ತಾವು ಕಳೆದುಕೊಂಡದ್ದನ್ನೆಲ್ಲವನ್ನೂ ಪಡೆದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಶಿವಲಿಂಗ ಪ್ರದಕ್ಷಿಣೆ ವೇಳೆ ಆಗುವ ಈ ದೊಡ್ಡ ತಪ್ಪನ್ನು ಸರಿಪಡಿಸಿಕೊಳ್ಳಿ, ಸರಿಯಾದ ನಿಯಮ ಹೀಗಿದೆ ..!

ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ: ಅನಂತ ಚತುರ್ದಶಿಯಂದು ಉಪವಾಸ ಮಾಡುವುದರ ಜೊತೆಗೆ, ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು (Shri Vishnu Sahasranama Stotra) ಕೂಡ ಪಠಿಸಬೇಕು. ಇದನ್ನು ಮಾಡುವ ಮೂಲಕ ವಿಷ್ಣು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಭಕ್ತರು ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವುದರಿಂದ ಅಥವಾ ಅದನ್ನು ಭಕ್ತಿಯಿಂದ ಕೇಳುವುದರಿಂದ ಭಕ್ತರ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News