ಎರಡು ಸ್ತನಗಳು ಒಂದೇ ಗಾತ್ರದಲ್ಲಿರುವುದಿಲ್ಲ ಯಾಕೆ ಗೊತ್ತಾ? ಕಾರಣ ತಿಳಿದುಕೊಳ್ಳಿ!!

Breast Size : ಹಲವು ಮಹಿಳೆಯಲ್ಲಿ ಸ್ತನಗಳ ಗ್ರಾತದಲ್ಲಿ ಹೆಚ್ಚು ಕಡಿಮೆಯಾದಾಗ ಸಹಜವಾಗಿಯೇ ಭಯಪಡುವುದುಂಟು, ಆದರೆ ಸಾಮಾನ್ಯವಾಗಿ ಎರಡು ಸ್ತನಗಳು ಒಂದೇ ಗಾತ್ರದಲ್ಲಿರುವುದಿಲ್ಲ. ಯಾಕೆ ಗೊತ್ತಾ ಆ ಕುರಿತು ಮಾಹಿತಿ ಇಲ್ಲಿದೆ 

Written by - Zee Kannada News Desk | Last Updated : Jul 3, 2024, 03:36 PM IST
  • ಗರ್ಭಾವಸ್ಥೆಯು ಮಹಿಳೆಯರ ಸ್ತನ ಗಾತ್ರದಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ.
  • ಮಹಿಳೆಯರ ಸ್ತನಗಳ ಬೆಳವಣಿಗೆಯ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಉಂಟಾದಾಗ ಸ್ತನ ಗಾತ್ರದಲ್ಲಿ ಬದಲಾವಣೆಯಾಗುತ್ತದೆ.
ಎರಡು ಸ್ತನಗಳು ಒಂದೇ ಗಾತ್ರದಲ್ಲಿರುವುದಿಲ್ಲ ಯಾಕೆ ಗೊತ್ತಾ? ಕಾರಣ ತಿಳಿದುಕೊಳ್ಳಿ!! title=

Breast Size Variation : ಅನೇಕ ಮಹಿಳೆಯರು ಸ್ತನ ಗ್ರಾತದಲ್ಲಿ ಹೆಚ್ಚು ಕಡಿಮೆಯಾದಾಗ ಸಹಜವಾಗಿಯೇ ಭಯಪಡುತ್ತಾರೆ ಮತ್ತು  ಗ್ರಾತದಲ್ಲಿ ಹೆಚ್ಚು ಕಡಿಮೆಯಾದಾಗ ಏನಾದರೂ ಕಾಯಿಲೆಯಿರಬಹುದಾ ಎಂತಲೂ ಯೋಚಿಸುತ್ತಾರೆ. 

ಆದರೆ ವಾಸ್ತವವಾಗಿ ಯಾವುದೇ ಮಹಿಳೆಯ ಎದೆಯ ಗಾತ್ರ ಒಂದೇ ಗಾತ್ರದಲ್ಲಿರುವುದಿಲ್ಲ ಮತ್ತು ಆದರೆ ಇದು ದೇಹದ ಆಕಾರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಕಾರಣದಿಂದ ಅನೇಕ ಮಹಿಳೆಯರು ಭಯದಿಂದ ಬಳಲುತ್ತಿದ್ದಾರೆ.

ಇದನ್ನು ಓದಿ : ಪತ್ನಿ ಅನುಷ್ಕಾಗೆ ವಿಡಿಯೋ ಕಾಲ್ ಮಾಡಿ ಚಂಡಮಾರುತ ತೋರಿಸಿದ ವಿರಾಟ್ ಕೊಹ್ಲಿ

ದೇಹದಲ್ಲಿ ಎದೆಯ ಆಕಾರ ಒಂದೇ ಆಕಾರದಲ್ಲಿರುವುದಿಲ್ಲ ಅದಕ್ಕೆ ಕೆಲವು ಕಾರಣಗಳು ಇವೆ. 
ಹಾರ್ಮೋನುಗಳ ಪರಿಣಾಮ: ನಮ್ಮ ದೇಹದಲ್ಲಿ ಹಾರ್ಮೋನುಗಳು ಸರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಮ್ಮ ದೇಹವು ಆರೋಗ್ಯಕರವಾಗಿದ್ದು, ಬೆಳವಣಿಗೆ ಕಾಣಬಹುದು ಮತ್ತು ಮಹಿಳೆಯರ ಸ್ತನಗಳ ಬೆಳವಣಿಗೆಯ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಉಂಟಾದಾಗ ಸ್ತನ ಗಾತ್ರದಲ್ಲಿ ಬದಲಾವಣೆಯಾಗುತ್ತದೆ. ಈ ಹಾರ್ಮೋನ್ ಬದಲಾವಣೆಗಳು ಒಂದು ಸ್ತನವನ್ನು ದೊಡ್ಡದಾಗಿಸಬಹುದು ಮತ್ತು ಇನ್ನೊಂದು ಚಿಕ್ಕದಾಗಬಹುದು ಆದ ಕಾರಣ ಆಕಾರವು ವಿಭಿನ್ನವಾಗಿರುತ್ತದೆ. 

ಸಾಮಾನ್ಯವಾಗಿ ಸ್ತ್ರೀಯರಲ್ಲಿ ಎಡ ಸ್ತನದ ಗಾತ್ರ ದೊಡ್ಡದಾಗಿರುತ್ತದೆ ಮತ್ತು ಬಲ ಸ್ತನ ಚಿಕ್ಕದಾಗಿರುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಇದಕ್ಕೆ ವಿರುದ್ಧವಾಗಿರುತ್ತದೆ ಮತ್ತು ಆರೋಗ್ಯ ತಜ್ಞರ ಪ್ರಕಾರ ಕೆಲವೊಮ್ಮೆ ಗರ್ಭಾವಸ್ಥೆಯು ಮಹಿಳೆಯರ ಸ್ತನ ಗಾತ್ರದಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ, ಎರಡೂ ಸ್ತನಗಳು ದೊಡ್ಡದಾಗಬಹುದು ಅಥವಾ ಚಿಕ್ಕದಾಗಬಹುದು. 

ಇದನ್ನು ಓದಿ : ಚಾಮರಾಜನಗರದಲ್ಲಿ ಪತಿ ಅಬಕಾರಿ ಡಿಸಿ- ಪತ್ನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಸ್ತನ್ಯಪಾನ ಮಾಡಿಸುವ ಮಹಿಳೆಯರ ಸ್ತನಗಳ ಗಾತ್ರವೂ ಬದಲಾಗುತ್ತದೆ. ಸ್ತನ್ಯಪಾನವು ಅವರ ಸ್ತನಗಳ ಗಾತ್ರದಲ್ಲಿ ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ. ಮತ್ತು ಮೊದಲಿನಿಂದಲೂ  ಸ್ತನದ ಗಾತ್ರವು  ಭಿನ್ನವಾಗಿದ್ದರೆ  ಯಾವುದೇ ತೊಂದರೆಯಿರುವುದಿಲ್ಲ.  ಆದರೆ ಸ್ತನಗಳ ಗಾತ್ರವು ಮಧ್ಯದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾದರೆ ಅಥವಾ ಕಡಿಮೆಯಾದರೆ ಅದ್ಯಾವುದೋ ಕಾಯಿಲೆಗಳ ಕಾರಣವಾಗುತ್ತದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News