ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಯ ಸ್ವರೂಪ, ವ್ಯಕ್ತಿತ್ವ ಮತ್ತು ಜಾತಕಫಲ ಭಿನ್ನವಾಗಿರುತ್ತದೆ. ಇದನ್ನು ರಾಶಿಚಕ್ರದ (Zodiac sign) ಮೂಲಕ ಅಂದಾಜಿಸಲಾಗುತ್ತದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಅದನ್ನು ಆಳುವ ಗ್ರಹದಿಂದಾಗಿ ವಿಭಿನ್ನ ಸ್ವರೂಪವನ್ನು ಹೊಂದಿರುತ್ತದೆ. ಜ್ಯೋತಿಷ್ಯದಲ್ಲಿ(Astrology) ಒಟ್ಟು 12 ರಾಶಿಚಕ್ರ ಚಿಹ್ನೆಗಳನ್ನು ಉಲ್ಲೇಖಿಸಲಾಗಿದೆ. ಸ್ವಭಾವತಃ ಬಹಳ ಚಂಚಲವಾಗಿರುವ ರಾಶಿಚಕ್ರ ಚಿಹ್ನೆಗಳ ಬಗ್ಗೆ ಇಂದು ನಾವು ಹೇಳಲಿದ್ದೇವೆ. ಇವರ ಬಳಿ ಯಾರಾದರೂ ಬಂದು ರಹಸ್ಯವನ್ನು ಹೇಳಿದರೆ, ಅದನ್ನು ಇನ್ನೊಬ್ಬರ ಬಳಿ ಹೇಳಲು ಹೆಚ್ಚು ಹೊತ್ತು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಈ ರಾಶಿಯವರಲ್ಲಿ ರಹಸ್ಯವನ್ನು ಹಂಚಿಕೊಳ್ಳುವ ಮುನ್ನ ಯೋಚಿಸಬೇಕಂತೆ.
ಮೇಷ ರಾಶಿ:
ಮೇಷ ರಾಶಿಯ ಜನರು ಉತ್ಸಾಹದಿಂದ ಕೂಡಿದವರಾಗಿರುತ್ತಾರೆ. ನಿಮ್ಮ ರಹಸ್ಯಗಳನ್ನು ಈ ರಾಶಿಚಕ್ರದ (Zodiac sign) ಜನರೊಂದಿಗೆ ಬುದ್ಧಿವಂತಿಕೆಯಿಂದ ಹಂಚಿಕೊಳ್ಳಿ. ಅವರು ಬೇರೆಯವರಿಗೆ ನಿಮ್ಮ ರಹಸ್ಯ ವಿಷಯಗಳನ್ನು ಹೇಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮೇಷ ರಾಶಿಯ ಜನರಿಗೆ ನಿಮ್ಮ ರಹಸ್ಯವನ್ನು ಹೇಳುವ ಮೊದಲು ಯೋಚಿಸಿ.
ಇದನ್ನೂ ಓದಿ : ಶ್ರಾವಣದಲ್ಲಿ ರುದ್ರಾಕ್ಷಿ ಬಳಸಿದರೆ ಎಲ್ಲವೂ ಶುಭಾವಾಗುತ್ತದೆಯಂತೆ, ಬಳಸುವ ವಿಧಾನ ಹೀಗಿರಲಿ
ಮಿಥುನ ರಾಶಿ :
ಜ್ಯೋತಿಷ್ಯದ (Astrology) ಪ್ರಕಾರ, ಮಿಥುನ ರಾಶಿಯ ಮೇಲೆ ಬುಧ ಗ್ರಹದ ಪ್ರಭಾವವಿರುತ್ತದೆ. ಈ ರಾಶಿಚಕ್ರದ ಜನರು ತುಂಬಾ ಸ್ನೇಹಪರರಾಗಿರುತ್ತಾರೆ. ಎಲ್ಲರೊಂದಿಗೂ ಸುಲಭವಾಗಿ ಬೆರೆಯುತ್ತಾರೆ. ಈ ರಾಶಿಚಕ್ರದ ಜನರಿಗೆ ನಿಮ್ಮ ಮನಸ್ಸಿನ ಮಾತು ಹೇಳುವ ಮೊದಲು, ಸ್ವಲ್ಪ ಯೋಚಿಸುವುದು ಒಳ್ಳೆಯದು. ಈ ರಾಶಿಯವರಿಗೆ ನಿಮ್ಮ ರಹಸ್ಯ ಹೇಳಿದರೆ ಅದು ಬಹಳ ಜನರನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಕಟಕ ರಾಶಿ :
ಕಟಕ ರಾಶಿಚಕ್ರದ ಜನರು ಬಹಳ ಚಂಚಲ ಸ್ವಭಾವದವರು. ಅನೇಕ ಬಾರಿ ರಹಸ್ಯ ವಿಷಯಗಳನ್ನು ಇತರರ ಮುಂದೆ ಮಾತನಾಡುತ್ತಾರೆ. ನಂತರ ಅದರ ಬಗ್ಗೆ ವಿಷಾದಿಸುತ್ತಾರೆ. ಆದರೆ, ಅಲ್ಲಿವರೆಗೆ ವಿಷಯ ಬಹಳ ಮುಂದುವರಿದಾಗಿರುತ್ತದೆ. ಈ ರಾಶಿಚಕ್ರದ ಜನರು ನಿಮ್ಮ ಸ್ನೇಹಿತರಾಗಿದ್ದರೆ, ಅವರಲ್ಲಿ ವಿಷಯ ಹಂಚಿಕೊಳ್ಳುವ ಮುನ್ನ ಎಚರವಿರಲಿ ..
ಇದನ್ನೂ ಓದಿ : Dream Interpretation: ಯಾವ ಸಮಯದಲ್ಲಿ ಬೀಳುವ ಕನಸು ಎಷ್ಟು ದಿನಗಳ ನಂತರ ಫಲ ನೀಡಲಿದೆ ಗೊತ್ತಾ!
ತುಲಾ ರಾಶಿ :
ಶುಕ್ರ ಗ್ರಹವು (Venus) ತುಲಾ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಈ ರಾಶಿಚಕ್ರದ ಜನರು ಉತ್ತಮ ಮಾತುಗಾರರು. ಈ ಜನರು ತಮ್ಮ ಮಾತಿನ ಬಲೆಯಲ್ಲಿ ಜನರನ್ನು ಸಿಲುಕಿಸುತ್ತಾರೆ. ಈ ರಾಶಿಯವರು ಇತರರ ವಿಷಯಗಳನ್ನು ಯಾವುದೇ ಮೂರನೇ ವ್ಯಕ್ತಿಯ್ಮುಂದೆ ಹೇಳಲು ಸ್ವಲ್ಪವೂ ಹಿಂಜರಿಯುವುದಿಲ್ಲ.
ಧನು ರಾಶಿ :
ಧನು ರಾಶಿಯ ಜನರ ಮೇಲೆ ಗುರು ಪ್ರಭಾವ ಬೀರುತ್ತಾನೆ. ಒಂದು ಕ್ಷಣದಲ್ಲಿ ಯಾರನ್ನೂ ತಮ್ಮದಾಗಿಸಿಕೊಳ್ಳುವ ಸಾಮರ್ಥ್ಯ ಅವರಿಗೆ ಇದೆ. ಈ ಜನರು ನಿಮ್ಮ ರಹಸ್ಯಗಳನ್ನು ಇತರರೊಂದಿಗೆ ಸುಲಭವಾಗಿ ಹಂಚಿಕೊಳ್ಳುತ್ತಾರೆ. ಧನು ರಾಶಿಯವರ ಮುಂದೆ ನಿಮ್ಮ ವಿಷಯಗಳನ್ನು ಹೇಳುವ ಮುನ್ನ ಎಚ್ಚರವಿರಲಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.