Dream Interpretation: ಕನಸಲ್ಲಿ....! ಈ ಮುದ್ದು ಪ್ರಾಣಿ ಕಂಡ್ರೆ ಕುಣಿದು ಕುಪ್ಪಳಿಸಿ, ಕಾರಣ ಇಲ್ಲಿದೆ!

Dream Meaning: ಬೆಕ್ಕುಗಳಿಗೆ ಸಂಬಂಧಿಸಿದ ಶಕುನ ಅಥವಾ ಅಪಶಕುನಗಳು ಬಹುತೇಕ ಎಲ್ಲರಿಗೂ ಗೊತ್ತು. ಇವು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ ಎನ್ನಲಾಗುತ್ತವೆ. ಆದರೆ, ಕನಸಿನಲ್ಲಿ ಬೆಕ್ಕನ್ನು ನೋಡುವುದರ ಅರ್ಥವನ್ನು ಸ್ವಪ್ನಶ್ಶಾಸ್ತ್ರದಲ್ಲಿ ವಿವರಿಸಲಾಗಿದೆ.  

Written by - Nitin Tabib | Last Updated : May 7, 2023, 03:36 PM IST
  • ಕನಸಿನಲ್ಲಿ ಬೆಕ್ಕನ್ನು ಕಂಡರೆ ವಿಶೇಷ ಸೂಚನೆಯೂ ಸಿಗುತ್ತದೆ.
  • ಸ್ವಪ್ನ ಶಾಸ್ತ್ರದಲ್ಲಿ, ಕನಸಿನಲ್ಲಿ ಬೆಕ್ಕನ್ನು ನೋಡುವುದರ ಹಲವು ಅರ್ಥಗಳನ್ನು ನೀಡಲಾಗಿದೆ.
  • ಬೆಕ್ಕುಗಳಿಗೆ ಸಂಬಂಧಿಸಿದ ಈ ಕೆಲ ಕನಸುಗಳು ತುಂಬಾ ಮಂಗಳಕರವಾಗಿದ್ದು,
  • ಅವು ಅಪಾರ ಸಿರಿ-ಸಂಪತ್ತು ಆಗಮನದ ಸಂಕೇತಗಳಾಗಿವೆ.
Dream Interpretation: ಕನಸಲ್ಲಿ....! ಈ ಮುದ್ದು ಪ್ರಾಣಿ ಕಂಡ್ರೆ ಕುಣಿದು ಕುಪ್ಪಳಿಸಿ, ಕಾರಣ ಇಲ್ಲಿದೆ! title=
ಕನಸಿನಲ್ಲಿ ಬೆಕ್ಕು ಕಂಡ್ರೆ ಏನರ್ಥ

Swapna Shastra: ಸಾಮಾನ್ಯವಾಗಿ ಬೆಕ್ಕು ದಾರಿಯಲ್ಲಿ ಅಡ್ಡ ಬರುವುದು ಅಥವಾ ಬೆಕ್ಕು ಅಳುವುದು ಅಪಶಕುನ ಎಂದು ಭವಿಸಲಾಗುತ್ತದೆ. ಬೆಕ್ಕಿನ ಇಂತಹ ನಡವಳಿಕೆಯು ಅಹಿತಕರ ಘಟನೆಯನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಕನಸಿನಲ್ಲಿ ಬೆಕ್ಕನ್ನು ಕಂಡರೆ ವಿಶೇಷ ಸೂಚನೆಯೂ ಸಿಗುತ್ತದೆ. ಸ್ವಪ್ನ ಶಾಸ್ತ್ರದಲ್ಲಿ, ಕನಸಿನಲ್ಲಿ ಬೆಕ್ಕನ್ನು ನೋಡುವುದರ ಹಲವು ಅರ್ಥಗಳನ್ನು ನೀಡಲಾಗಿದೆ. ಬೆಕ್ಕುಗಳಿಗೆ ಸಂಬಂಧಿಸಿದ ಈ ಕೆಲ ಕನಸುಗಳು ತುಂಬಾ ಮಂಗಳಕರವಾಗಿದ್ದು, ಅವು ಅಪಾರ ಸಿರಿ-ಸಂಪತ್ತು ಆಗಮನದ ಸಂಕೇತಗಳಾಗಿವೆ.

ಕನಸಿನಲ್ಲಿ ಬೆಕ್ಕುಗಳು ಜಗಳವಾಡಿದರೆ ಏನರ್ಥ: ನಿಮ್ಮ ಕನಸಿನಲ್ಲಿ ಬೆಕ್ಕುಗಳು ಜಗಳವಾಡುವುದನ್ನು ನೀವು ನೋಡಿದರೆ, ಜಾಗರೂಕರಾಗಿರಿ, ಏಕೆಂದರೆ ಇಂತಹ ಕನಸನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನೀವು ಕೆಲ ಕೆಲಸಗಳಲ್ಲಿ ವೈಫಲ್ಯ ಅಥವಾ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ಎಂಬುದನ್ನು ಇದು ಸೂಚಿಸುತ್ತದೆ. ಆದ್ದರಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಜಾಗರೂಕರಾಗಿರಿ.

ಕನಸಿನಲ್ಲಿ ತಾಯಿ ಬೆಕ್ಕಿನ ಜೊತೆಗೆ ಮರಿ ಬೆಕ್ಕು ಕಂಡ್ರೆ ಏನರ್ಥ: ಕನಸಿನಲ್ಲಿ ಬೆಕ್ಕು ಮತ್ತು ಅದರ ಮರಿಯನ್ನು ನೋಡುವುದು ತುಂಬಾ ಮಂಗಳಕರವಾಗಿದೆ. ಇದು ನೀವು ಶೀಘ್ರದಲ್ಲೇ ಶ್ರೀಮಂತರಾಗುವ ಸಂಕೇತವಾಗಿದೆ. ಇದಲ್ಲದೆ ದೀರ್ಘಕಾಲದಿಂದ ನಿಮ್ಮ ಸಿಕ್ಕಿಬಿದ್ದ ಹಣ ನಿಮಗೆ ಸಿಗುವ ಸಾಧ್ಯತೆಗಳಿವೆ ಎಂದರ್ಥ.

ಇದನ್ನೂ ಓದಿ-Hans Rajyog: April 29 ರಿಂದ ನಿರ್ಮಾಣಗೊಂಡಿದೆ 'ಹಂಸ ರಾಜಯೋಗ', ಈ ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

ಕನಸಿನಲ್ಲಿ ಬೆಕ್ಕನ್ನು ಕಾಪಾಡುವುದು ಏನರ್ಥ: ನೀವು ಬೆಕ್ಕನ್ನು ಕಾಪಾಡುವುದು ಅಥವಾ ಬೆಕ್ಕಿನೊಂದಿಗೆ ನೀವು ಆಟವಾಡುತ್ತಿರುವ ನೀವು ಕನಸಲ್ಲಿ ಕಂಡ್ರೆ, ಅದು ನಿಮ್ಮ ಜೀವನವನ್ನು ಬದಲಾಯಿಸುವ ಸಂಕೇತವಾಗಿದೆ. ನಿಮ್ಮ ಎಲ್ಲಾ ಸಮಸ್ಯೆಗಳು ಅಂತ್ಯವಾಗಲಿವೆ ಎಂಬುದರ ಸಂಕೇತ ಅದು. ನೀವು ನಿಮ್ಮ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯಲಿರುವಿರಿ ಎಂಬುದು ಅದರ ಅರ್ಥ. ಒಟ್ಟಾರೆಯಾಗಿ, ನಿಮ್ಮ ಜೀವನವು ಯಶಸ್ಸು, ಸಂಪತ್ತು ಮತ್ತು ಸಂತೋಷದಿಂದ ತುಂಬಿರುತ್ತದೆ.

ಇದನ್ನೂ ಓದಿ-Neech Bhang Rajyog: ಶೀಘ್ರದಲ್ಲೇ ನಿರ್ಮಾಣಗೊಳ್ಳುತ್ತಿದೆ ನೀಚಭಂಗ್ ರಾಜಯೋಗ, 3 ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ!

ಕನಸಿನಲ್ಲಿ ಬಿಳಿ ಬೆಕ್ಕನ್ನು ನೋಡುವುದು: ಕನಸಿನಲ್ಲಿ ಬಿಳಿ ಬೆಕ್ಕನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸು ಬಿದ್ದಾಗ, ವ್ಯಕ್ತಿಯು ಸಾಕಷ್ಟು  ಹಣವನ್ನು ಪಡೆಯುತ್ತಾನೆ. ಅವನು ಲಾಟರಿ ಗೆಲ್ಲಬಹುದು ಅಥವಾ ಇದ್ದಕ್ಕಿದ್ದಂತೆ ಎಲ್ಲಿಂದಲೋ ಅಪಾರ ಧನ ಪ್ರಾಪ್ತಿಯಾಗಬಹುದು ಎಂಬುದು ಅದರ ಅರ್ಥ. ಅಂತಹ ಕನಸು ಕಂಡ ನಂತರ, ಲಕ್ಷ್ಮಿ ದೇವಿಯನ್ನು ಪೂಜಿಸಿ ಮತ್ತು ಅವಳಿಗೆ ನೈವೇದ್ಯದ ರೂಪದಲ್ಲಿ ಪಾಯಸ ಅರ್ಪಿಸಿ. ಇದರಿಂದ ತಾಯಿ ಲಕ್ಷ್ಮಿ ಬೇಗನೆ ಕೃಪೆ ತೋರುತ್ತಾಳೆ.

ಇದನ್ನೂ ಓದಿ-Mercury Direct 2023: ಶೀಘ್ರದಲ್ಲೇ ಮಂಗಳನ ಅಂಗಳದಲ್ಲಿ ಬುಧನ ನೇರ ನಡೆ ಆರಂಭ, ಈ ಜನರಿಗೆ ಅಷ್ಟೈಶ್ವರ್ಯ ಪ್ರಾಪ್ತಿ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News