Weight Loss Tips: ಪ್ರತಿದಿನ ಈ ಆಹಾರ ಸೇವಿಸಿದರೆ ಕೇವಲ 7 ದಿನದಲ್ಲಿ ತೂಕ ಕಡಿಮೆಯಾಗುತ್ತೆ!

Weight Loss Tips: ಪ್ರತಿದಿನ ಈ ಆಹಾರವನ್ನು ಸೇವಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಇದಲ್ಲದೇ ಆರೋಗ್ಯ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

Written by - Chetana Devarmani | Last Updated : Jun 9, 2023, 01:49 PM IST
  • ಪ್ರತಿದಿನ ಈ ಆಹಾರವನ್ನು ಸೇವಿಸಿ
  • ಕೇವಲ 7 ದಿನದಲ್ಲಿ ತೂಕ ಕಡಿಮೆಯಾಗುತ್ತೆ
  • ಆರೋಗ್ಯ ಸಮಸ್ಯೆಯಿಂದಲೂ ಸಿಗುತ್ತೆ ಪರಿಹಾರ
Weight Loss Tips: ಪ್ರತಿದಿನ ಈ ಆಹಾರ ಸೇವಿಸಿದರೆ ಕೇವಲ 7 ದಿನದಲ್ಲಿ ತೂಕ ಕಡಿಮೆಯಾಗುತ್ತೆ!  title=
Weight Loss

Full Day Meal Plan For Weight Loss: ಇತ್ತೀಚಿನ ದಿನಗಳಲ್ಲಿ ಜನರು ತೂಕ ಹೆಚ್ಚಾಗುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಅನೇಕ ಯುವಜನರು ತೂಕ ಹೆಚ್ಚಾಗುವ ಸಮಸ್ಯೆಯಿಂದ ಕಷ್ಟ ಪಡುತ್ತಿದ್ದಾರೆ. ತೂಕ ಹೆಚ್ಚಾಗುವುದರಿಂದ ಹೃದಯದ ಆರೋಗ್ಯ ಹಾಳಾಗತ್ತದೆ. ಇದರಿಂದ ಹೃದ್ರೋಗದ ಅಪಾಯ ಹೆಚ್ಚುತ್ತದೆ. ಆದರೆ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೀಟೋ ಡಯಟ್ ಫಾಲೋ ಮಾಡುತ್ತಾರೆ. ಇದು ಕೂಡ ತೂಕ ಇಳಿಕೆಗೆ ಸಹಾಯಕವಾಗಿದೆ. 

ತೂಕ ಇಳಿಕೆಗೆ ಪ್ರತಿದಿನ ಈ ಆಹಾರ ಸೇವಿಸಿ : 

ಬೆಳಗಿನ ಉಪಾಹಾರದಲ್ಲಿ ಇದು ಕಡ್ಡಾಯ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ರೀತಿಯ ಆಹಾರಗಳನ್ನು ಸೇವಿಸುತ್ತಾರೆ. ಪ್ರತಿದಿನ ಬೆಳಿಗ್ಗೆ ಒಂದು ಕಪ್ ಗ್ರೀನ್‌ ಟೀ ಸೇವಿಸಿ. ಈ ಚಹಾದಲ್ಲಿರುವ ಹಲವಾರು ಔಷಧೀಯ ಗುಣಗಳು ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಪ್ರತಿದಿನ ಬ್ರೌನ್ ಬ್ರೆಡ್ ಸೇವಿಸುವುದರಿಂದ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು ಎನ್ನುತ್ತಾರೆ. 

ಬೆಳಿಗ್ಗೆ 10 ಗಂಟೆಗೆ ಈ ತಿಂಡಿ ಸೇವಿಸಿ: ತೂಕವನ್ನು ಕಳೆದುಕೊಳ್ಳಲು ಆರೋಗ್ಯಕರ ಆಹಾರ ಮಾತ್ರ ತಿಂಡಿಯಲ್ಲಿ ಸೇವಿಸಿ. ಬೆಳಿಗ್ಗೆ 10 ಗಂಟೆಗೆ ಮತ್ತೆ ಎರಡು ಬಾಳೆಹಣ್ಣುಗಳನ್ನು ತೆಗೆದುಕೊಳ್ಳಬೇಕು. ಅದೇ ಕ್ರಮದಲ್ಲಿ ಬೇಯಿಸಿದ ಮೊಟ್ಟೆ ಮತ್ತು ಹಸಿ ತರಕಾರಿಯಿಂದ ಮಾಡಿದ ಸಲಾಡ್‌ಗಳನ್ನು ತೆಗೆದುಕೊಳ್ಳಿ.  

ಇದನ್ನೂ ಓದಿ:  ಬ್ಲಾಕ್ ಆಗಿರುವ ಅಡುಗೆ ಮನೆಯ ಸಿಂಕ್ ಅನ್ನು ಕ್ಲೀನ್ ಮಾಡುವ ಸುಲಭ ಟ್ರಿಕ್ ಇಲ್ಲಿದೆ

ಆಹಾರದಲ್ಲಿ ಈ ಆಹಾರ ಸೇವಿಸುವುದು ಅವಶ್ಯಕ: ಊಟದ ಸಮಯದಲ್ಲಿ ಎರಡು ರೊಟ್ಟಿ ಜೊತೆಗೆ ಪನೀರ್‌ ಸೇವಿಸಿ. ಜತೆಗೆ ಸಂಜೆ ವೇಳೆಯೂ ತಿಂಡಿ ಸೇವಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ತರಕಾರಿಗಳಿಂದ ತಯಾರಿಸಿದ ಸೂಪ್‌ ಅನ್ನು ಪ್ರತಿದಿನ ಸಂಜೆ ಸೇವಿಸಿ. 

ಊಟ: ಊಟದಲ್ಲಿ ಒಂದು ರೊಟ್ಟಿ ಮಾತ್ರ ಸೇವಿಸಿ. ಅಲ್ಲದೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸಬಹುದು. ಪ್ರತಿದಿನ ಈ ರೀತಿ ಆಹಾರ ಸೇವಿಸುವುದರಿಂದ ಬೊಜ್ಜಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. 

ಇದನ್ನೂ ಓದಿ: ಮುಂಗಾರಿನ ಋತುವಿನಲ್ಲಿ ಕೂದಲಿಗೆ ಬಣ್ಣ ಹಾಕುವಾಗ ಈ ಸಂಗತಿಗಳು ನೆನಪಿರಲಿ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News