Eid Ul Fitr 2024 date & timing : ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಈದ್ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈದ್ ಹಬ್ಬಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಇಸ್ಲಾಂ ಧರ್ಮದ ಅನುಯಾಯಿಗಳು ಈದ್ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಮುಸ್ಲಿಮರಿಗೆ ಈದ್ ಹಬ್ಬವು ಉಪವಾಸದ ಅಂತ್ಯವನ್ನು ಸೂಚಿಸುತ್ತದೆ. ರಂಜಾನ್ ಉದ್ದಕ್ಕೂ ಮುಸ್ಲಿಂ ಸಮುದಾಯದ ಜನರು ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ. ಈ ಅವಧಿಯಲ್ಲಿ ಆಹಾರ ಮಾತ್ರವಲ್ಲ ನೀರು ಕೂಡ ಕುಡಿಯುವುದಿಲ್ಲ. ಈದ್ ಚಂದ್ರ ಗೋಚರಿಸಿದ ಬಳಿಕ ಈ ರೋಜಾ ಆಚರಣೆ ಮುಕ್ತಾಯವಾಗುತ್ತದೆ.
ಇದನ್ನೂ ಓದಿ:
ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಓಮನ್, ಕತಾರ್, ಕುವೈತ್, ಬಹ್ರೇನ್, ಈಜಿಪ್ಟ್, ಟರ್ಕಿ, ಇರಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಮಧ್ಯಪ್ರಾಚ್ಯ ಮತ್ತು ಪಶ್ಚಿಮದ ಇತರ ದೇಶಗಳಲ್ಲಿ ಏಪ್ರಿಲ್ 8 ರ ಸಂಜೆ ಚಂದ್ರನ ದರ್ಶನವಾದರೆ ಮರುದಿನ ಅಂದರೆ ಮಂಗಳವಾರ 09 ಏಪ್ರಿಲ್ ದಿನ ರಂಜಾನ್ ಆಚರಿಸಲಾಗುತ್ತದೆ. ಆದರೆ ಈ ದಿನ ಚಂದ್ರನ ದರ್ಶನವಾಗಿಲ್ಲ. ಈ ದೇಶಗಳಲ್ಲಿ ಇದು ಮಂಗಳವಾರ ಅಂದರೆ ಏಪ್ರಿಲ್ 9 ರಂದು ಚಂದ್ರ ದರ್ಶನವಾಗಬಹುದು ಎನ್ನಲಾಗಿದೆ. ಈದ್ ಅನ್ನು ಏಪ್ರಿಲ್ 10, 2024 ರಂದು ಬುಧವಾರ ಆಚರಿಸಲಾಗುತ್ತದೆ.
ಭಾರತದಲ್ಲಿ ಈದ್ ಯಾವ ದಿನ?
ಏಪ್ರಿಲ್ 09, 2024 ರಂದು ಸಂಜೆ ಭಾರತದಲ್ಲಿ ಚಂದ್ರನು ಗೋಚರಿಸಿದರೆ, ಈದ್ ಅನ್ನು ಮರುದಿನ ಅಂದರೆ ಬುಧವಾರ ಅಂದರೆ ಏಪ್ರಿಲ್ 10, 2024 ರಂದು ಆಚರಿಸಲಾಗುತ್ತದೆ. ಈ ದಿನವೂ ಚಂದ್ರ ಗೋಚರಿಸದಿದ್ದರೆ, ಭಾರತ ಮತ್ತು ದಕ್ಷಿಣ ಏಷ್ಯಾದ ಇತರ ದೇಶಗಳಲ್ಲಿನ ಮುಸ್ಲಿಮರು ಮರುದಿನವೂ ಉಪವಾಸ ಮಾಡುತ್ತಾರೆ. 10 ಏಪ್ರಿಲ್ 2024 ಬುಧವಾರದಂದು ಇಫ್ತಾರ್ ನಂತರ ಚಂದ್ರನು ಗೋಚರಿಸುತ್ತಾನೆ. ಈದ್ ಅನ್ನು ಗುರುವಾರ ಅಂದರೆ 11 ಏಪ್ರಿಲ್ 2024 ರಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: Shukraditya Yog: 18 ತಿಂಗಳುಗಳ ಬಳಿಕ ಶುಕ್ರ-ಸೂರ್ಯರಿಂದ ಶುಕ್ರಾದಿತ್ಯ ರಾಜಯೋಗ ರಚನೆ, ಈ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.