ಹಿಂದೂ ಕ್ಯಾಲೆಂಡರ್ ಪ್ರಕಾರ, ವರ್ಷದ ಐದನೇ ತಿಂಗಳು ಶಿವನ ಆರಾಧನೆಗೆ ಮೀಸಲಾಗಿದೆ. ಈ ತಿಂಗಳನ್ನು ಶ್ರಾವಣ ಎಂದೂ ಕರೆಯಲಾಗುತ್ತದೆ. ಪವಿತ್ರ ಮಾಸವಾದ ಶ್ರಾವಣದಲ್ಲಿ ಸೋಮವಾರದಂತೆಯೇ ಮಂಗಳವಾರವೂ ವಿಶೇಷ ಮಹತ್ವವನ್ನು ಹೊಂದಿದೆ. ಮಂಗಳಗೌರಿ ವ್ರತವನ್ನು ಮಂಗಳವಾರದಂದು ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಪಾರ್ವತಿ ದೇವಿಯ ಜೊತೆಗೆ ಶಿವ, ಗಣೇಶ ಮತ್ತು ನಂದಿಯನ್ನು ಪೂಜಿಸುವ ಪದ್ಧತಿ ಇದೆ. ಇನ್ನು ಉತ್ತರ ಭಾರತದಲ್ಲಿ ಈಗಾಗಲೇ ಶ್ರಾವಣ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಇಂದು ಮಂಗಳ ಗೌರಿ ಉಪವಾಸವನ್ನು ಮಾಡುತ್ತಿದ್ದಾರೆ.
ಇಂದು ಸರ್ವಾರ್ಥ ಸಿದ್ಧಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗದಲ್ಲಿ ದೇವರನ್ನು ಪೂಜಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಬಳಿ 50 ಪೈಸೆ ನಾಣ್ಯವಿದ್ದರೆ ರಾತ್ರೋರಾತ್ರಿ ಲಕ್ಷಾಧಿಪತಿಯಾಗಬಹುದು ..!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರಾವಣ ಸಮಯದಲ್ಲಿ ಮಂಗಳ ಗೌರಿ ಉಪವಾಸ ಮತ್ತು ಈ ಅವಧಿಯಲ್ಲಿ ಕೈಗೊಳ್ಳುವ ಕೆಲವು ವಿಶೇಷ ಕ್ರಮಗಳು ವೈವಾಹಿಕ ಜೀವನದ ಎಲ್ಲಾ ಅಡೆತಡೆಗಳು ದೂರ ಮಾಡುತ್ತವೆ. ಅಷ್ಟೇ ಅಲ್ಲದೆ, ಮಂಗಳದೋಷದಿಂದ ಮುಕ್ತಿ ಸಿಗುತ್ತದೆ. ಅಲ್ಲದೆ ವಿವಾಹಿತ ಸ್ತ್ರೀಯರಿಗೆ ಅಖಂಡ ಸೌಭಾಗ್ಯವತಿಯ ವರವೂ ಸಿಗುತ್ತದೆ. ಈ ದಿನ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳಗೌರಿ ವ್ರತಕ್ಕೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಲಾಗಿದೆ. ಇವುಗಳನ್ನು ಮಾಡುವುದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಈ ದಿನದಂದು ಎರಡು ಹಿಡಿ ಬೇಳೆಕಾಳುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿರ್ಗತಿಕರಿಗೆ ಅಥವಾ ಬಡವರಿಗೆ ದಾನ ಮಾಡಿ. ಇದರಿಂದ ಮಂಗಳಕರ ದಿನ ನಿಮ್ಮದಾಗುತ್ತದೆ.
ಒಬ್ಬ ವ್ಯಕ್ತಿಯು ಮದುವೆ ವಿಚಾರದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ, ಮಂಗಳಗೌರಿ ವ್ರತದ ದಿನದಂದು ಹರಿಯುವ ನೀರಿನಲ್ಲಿ ಖಾಲಿ ಮಣ್ಣಿನ ಮಡಕೆಯನ್ನು ತೇಲಿಸುವುದು ಉತ್ತಮ. ಇದರಿಂದ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಇದನ್ನೂ ಓದಿ: ಆರ್‌ಬಿಐನ ಹೊಸ ಆದೇಶ- ಈ ಬ್ಯಾಂಕ್‌ನಿಂದ 15,000 ಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ಸಾಧ್ಯವಿಲ್ಲ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೈವಾಹಿಕ ಜೀವನದಲ್ಲಿನ ತೊಂದರೆಗಳನ್ನು ತೊಡೆದು ಹಾಕಲು ಓಂ ಗೌರಿ ಶಂಕರಾಯ ನಮಃ ಮಂತ್ರವನ್ನು ಪ್ರತಿ ಮಂಗಳ ಗೌರಿ ಉಪವಾಸದಂದು ಜಪಿಸಬೇಕು. ಈ ಮಂತ್ರವನ್ನು ಶ್ರಾವಣ ಮಾಸ ಪೂರ್ತಿ ಪಠಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.