Tri Grahi Yoga December 2022: ಪಂಚಾಂಗದ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಗ್ರಹಗಳ ರಾಜಕುಮಾರ ಬುಧ, ಭೋಗ ವಿಲಾಸಿ ಹಾಗೂ ಭೌತಿಕ ಸುಖ-ಸೌಕರ್ಯಗಳ ಕಾರಕ ಶುಕ್ರ ಹಾಗೂ ಗ್ರಹಗಳ ರಾಜ ಸೂರ್ಯ ಧನು ರಾಶಿಯಲ್ಲಿ ಜೊತೆ ಜೊತೆಗೆ ವಿರಾಜಮಾನರಾಗಲಿದ್ದಾರೆ.
ಎಲ್ಲಕ್ಕಿಂತ ಮೊದಲು ಬುಧ ಗ್ರಹದ ಕುರಿತು ಹೇಳುವುದಾದರೆ, ಡಿಸೆಂಬರ್ 3 ರಂದು ಬುಧ ಧನು ರಾಶಿಯಲ್ಲಿ ಗೋಚರಿಸಿದೆ. ನಂತರ ಇಂದು ಶುಕ್ರ ಧನು ರಾಶಿಗೆ ಪ್ರವೇಶಿಸಿದೆ. ಇದಾದ ಬಳಿಕ ಡಿಸೆಂಬರ್ 16ರಂದು ಸೂರ್ಯನ ಧನು ಸಂಕ್ರಮಣ ನಡೆಯಲಿದೆ. ಈ ರೀತಿಯಾಗಿ ಡಿಸೆಂಬರ್ 16 ರಂದು ಧನು ರಾಶಿಯಲ್ಲಿ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳಲಿದೆ. ಒಂದೇ ರಾಶಿಯಲ್ಲಿ ಈ ಮೂರು ಗ್ರಹಗಳ ಸ್ಥಿತಿಯ ಕಾರಣ ಕೆಲ ರಾಶಿಗಳ ಜನರಿಗೆ ಬಯಸಿದ ಎಲ್ಲಾ ಫಲಗಳು ಪ್ರಾಪ್ತಿಯಾಗಲಿವೆ.
5 ರಾಶಿಗಳ ಜನರಿಗೆ ಭಾರಿ ಶುಭ ಫಲಗಳು ಪ್ರಾಪ್ತಿ
ಮಿಥುನ ರಾಶಿ- ಬುಧ, ಶುಕ್ರ ಹಾಗೂ ಸೂರ್ಯನ ಧನು ರಾಶಿ ಗೋಚರ, ಮಿಥುನ ರಾಶಿಯ ಜಾತಕದವರಿಗೆ ಶುಭ ಫಲದಾಯಕ ಸಾಬೀತಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ವ್ಯಾಪಾರದಲ್ಲಿ ಲಾಭ ಇರಲಿದೆ.
ವೃಶ್ಚಿಕ ರಾಶಿ- ಧನು ರಾಶಿಯಲ್ಲಿ ಬುಧ, ಶುಕ್ರ ಮತ್ತು ಸೂರ್ಯನ ಸಂಕ್ರಮವು ವೃಶ್ಚಿಕ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ತರುತ್ತಿದೆ. ಈ ಮೂರು ದೊಡ್ಡ ಗ್ರಹಗಳ ಶುಭ ಪರಿಣಾಮಗಳಿಂದ ಅವರ ಯೋಜನೆಗಳು ಈಡೇರುತ್ತವೆ. ನೀವು ತೀರ್ಥಯಾತ್ರೆಗೆ ಹೋಗಲು ಸಹ ಯೋಜಿಸಬಹುದು.
ಮಕರ ರಾಶಿ- ಧನು ರಾಶಿಯಲ್ಲಿ ಬುಧ, ಶುಕ್ರ, ಸೂರ್ಯನ ಸಂಕ್ರಮಣ ಮಕರ ರಾಶಿಯ ಜನರಿಗೆ ಭಾರಿ ಸಂತಸ ನೀಡಲಿದೆ. ಉದ್ಯೋಗದಲ್ಲಿ ಬಡ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ನೀವು ನಿಮ್ಮ ಗುರಿಯನ್ನು ಸಾಧಿಸುವಿರಿ. ಮಕ್ಕಳಿಂದ ನಿಮಗೆ ಶುಭ ಸಮಾಚಾರ ಸಿಗಲಿದೆ.
ಕುಂಭ ರಾಶಿ- ಒಂದೇ ರಾಶಿಯಲ್ಲಿ ಈ ಗ್ರಹಗಳ ಸಂಚಾರವು ಕುಂಭ ರಾಶಿಯವರಿಗೆ ಸಾಕಷ್ಟು ಒಳ್ಳೆಯ ಫಲಗಳನ್ನು ನೀಡಲಿದೆ. ಉದ್ಯೋಗ ವೃತ್ತಿಯಲ್ಲಿರುವ ಜನರಿಗೆ ಈ ಲಾಭ ಸಿಗಲಿದೆ. ಈ ತಿಂಗಳು ಕುಂಭ ರಾಶಿಯ ಜನರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಉನ್ನತ ಅಧಿಕಾರಿಗಳೊಂದಿಗಿನ ಸಂಬಂಧ ಗಟ್ಟಿಯಾಗಲಿದೆ.
ಇದನ್ನೂ ಓದಿ-Tips For Good Luck: ಅದೃಷ್ಟದ ಬೆಂಬಲ ಸಿಗುತ್ತಿಲ್ಲವೇ, ಮನೆಯಲ್ಲಿನ ಅಕ್ಕಿಯನ್ನು ಬಳಸಿ ಈ ಉಪಾಯ ಮಾಡಿ
ಮೀನ ರಾಶಿ- ಬುಧ ರಾಶಿಯಲ್ಲಿ ಮೂರುಗ್ರಹಗಳ ಉಪಸ್ಥಿತಿಯಿಂದ ಮೀನ ರಾಶಿಯವರಿಗೆ ಆರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು, ಆದರೆ ನಂತರ ಅವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಇದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಪ್ರವಾಸದ ಯೋಗವಿದೆ.
ಇದನ್ನೂ ಓದಿ-Good News Indications: ಕನಸಲ್ಲಿ ಈ ವಸ್ತುಗಳು ಕಾಣುವುದು ಶುಭ ಸಂಕೇತ, ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗುತ್ತೆ ಎಂದರ್ಥ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.