ಕೂದಲು ಉದುರುವ ಮತ್ತು ಬೆಳ್ಳಗಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಈ ವಸ್ತು

ಕೆಲವರು ಬಿಳಿ ಕೂದಲಿನ ಸಮಸ್ಯೆಯನ್ನು ಮರೆಮಾಚಲು ಕಲರ್ ಮೊರೆ ಹೋಗುತ್ತಾರೆ. ಇದರಿಂದ ಸಮಸ್ಯೆಗೆ ತಕ್ಷಣದ ಪರಿಹಾರವೇನೋ ಸಿಗಬಹುದು. ಆದರೆ ಅದರ ಅಡ್ಡಪರಿಣಾಮಗಳು ಕೂಡಾ ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ಕೆಲವರು ಬಿಳಿ ಕೂದಲು ಕಂಡರೂ ಪರವಾಗಿಲ್ಲ ಎಂದು ರಾಸಾಯನಿಕ ಕಲರ್ ಗಳಿಂದ ದೂರ ಇರುತ್ತಾರೆ.  

Written by - Ranjitha R K | Last Updated : Dec 27, 2022, 09:06 AM IST
  • ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ
  • ಅಡುಗೆಗೆ ಬಳಸುವ ಈ ಒಂದು ಸಾಮಗ್ರಿ ಸಾಕು
  • ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಸಿಗುವುದು ಮುಕ್ತಿ
ಕೂದಲು ಉದುರುವ ಮತ್ತು ಬೆಳ್ಳಗಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಈ ವಸ್ತು  title=
White Hair Remedy

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಮತ್ತು ಕೂದಲು ಉದುರುವುದು ಬಹುತೇಕ ಪ್ರತಿಯೊಬ್ಬರ ಸಮಸ್ಯೆಯಾಗಿದೆ. ಇದಕ್ಕೆ ಕಾರಣಗಳು ಹಲವಾರು. ನಾವು ಸೇವಿಸುವ ಆಹಾರ,  ಅನುಸರಿಸುತ್ತಿರುವ ಜೀವ ಶೈಲಿ ಇದರಲ್ಲಿ ಬಹಳ ಮುಖ್ಯವಾಗಿರುತ್ತದೆ. ಕೆಲವರು ಬಿಳಿ ಕೂದಲಿನ ಸಮಸ್ಯೆಯನ್ನು ಮರೆಮಾಚಲು ಕಲರ್ ಮೊರೆ ಹೋಗುತ್ತಾರೆ. ಇದರಿಂದ ಸಮಸ್ಯೆಗೆ ತಕ್ಷಣದ ಪರಿಹಾರವೇನೋ ಸಿಗಬಹುದು. ಆದರೆ ಅದರ ಅಡ್ಡಪರಿಣಾಮಗಳು ಕೂಡಾ ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ಕೆಲವರು ಬಿಳಿ ಕೂದಲು ಕಂಡರೂ ಪರವಾಗಿಲ್ಲ ಎಂದು ರಾಸಾಯನಿಕ ಕಲರ್ ಗಳಿಂದ ದೂರ ಇರುತ್ತಾರೆ. ಆದರೆ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮತ್ತು ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಲು, ಕೂದಲು ಉದುರುವುದನ್ನು ತಡೆಯಲು ಕಪ್ಪು ಎಳ್ಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಪ್ಪು ಎಳ್ಳು ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದು ಮಾತ್ರವಲ್ಲ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. 

ಪೋಷಕಾಂಶಗಳ ಗಣಿ ಈ ಕಪ್ಪು ಎಳ್ಳು : 
ಕಪ್ಪು ಎಳ್ಳನ್ನು ಅಡುಗೆಯಲ್ಲಿ ಬಳಸುವುದು ಸಾಮಾನ್ಯ. ಆದರೆ ಅದನ್ನು ಬಳಸುವುದರಿಂದ ಬೆಳ್ಳಗಾದ ಕೂದಲು ಮತ್ತೆ ಕಪ್ಪಾಗುತ್ತದೆ ಎನ್ನುವ ವಿಚಾರ ಅನೇಕರಿಗೆ ತಿಳಿದಿರುವುದಿಲ್ಲ. ಕಪ್ಪು ಎಳ್ಳು ಒಮೆಗಾ -3 ಮತ್ತು 6 ನಂತಹ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಈ ಕೊಬ್ಬಿನಾಮ್ಲಗಳು ದೇಹದ ಕಾಲಜನ್ ಅನ್ನು ಹೆಚ್ಚಿಸುತ್ತವೆ. ಇದು ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಕೂದಲಿನ ಬೇರುಗಳನ್ನು ಪೋಷಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಮತ್ತು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Curry Leaves Tea: ಕರಿಬೇವಿನ ಚಹಾ ಸೇವನೆಯಿಂದ ಆಗುವ ಈ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?

ಕೂದಲಿಗೆ ಕಪ್ಪು ಎಳ್ಳನ್ನು ಹಚ್ಚುವುದು ಹೇಗೆ ? :
ಕಪ್ಪು ಎಳ್ಳನ್ನು ಒಣಗಿಸಿದ ನಂತರ ಅದನ್ನು ಪುಡಿ ಮಾಡಿ. ನಂತರ ಅದಕ್ಕೆ ಈರುಳ್ಳಿ ರಸ ಮತ್ತು ಅಲೋವೆರಾ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮತ್ತು ಸುಮಾರು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ.  ಹೀಗೆ ತಿಂಗಳಿಗೆ ಮೂರು ನಾಲ್ಕು ಬಾರಿ ಮಾಡುತ್ತಾ ಬಂದರೆ ಕ್ರಮೇಣ ಬಿಳಿ ಕೂದಲು ಕಡಿಮೆಯಾಗುತ್ತದೆ. 

ಕೂದಲಿಗೆ ಕಪ್ಪು ಎಳ್ಳು ಹೇಗೆ ಪ್ರಯೋಜನಕಾರಿ ? :  
ಕೂದಲಿಗೆ ಕಪ್ಪು ಎಳ್ಳಿನ ಪೇಸ್ಟ್ ಅನ್ನು ಹಚ್ಚುವುದರಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಇದರಿಂದಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ. ಮಾತ್ರವಲ್ಲ ಕೂದಲಿನಲ್ಲಿನ ಸೋಂಕಿನ ಸಮಸ್ಯೆಯೂ ದೂರವಾಗುತ್ತದೆ. 

ಇದನ್ನೂ ಓದಿ : Cholesterol: ರಾತ್ರಿ ಹೊತ್ತು ಈ ಆಹಾರ ಸೇವಿಸಿದ್ರೆ ಹೆಚ್ಚಾಗುತ್ತೆ ಕೊಲೆಸ್ಟ್ರಾಲ್

ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ  :
ಚಳಿಗಾಲದಲ್ಲಿ ಕೂದಲಿನಲ್ಲಿ ತಲೆಹೊಟ್ಟು ಸಾಮಾನ್ಯ. ನೆತ್ತಿಯ ಚರ್ಮದಲ್ಲಿ ತೇವಾಂಶದ ಕೊರತೆಯೇ ಇದಕ್ಕೆ ಕಾರಣ. ಹೇರ್ ಪೇಸ್ಟ್‌ಗಾಗಿ ಬಳಸುವ ಕಪ್ಪು ಎಳ್ಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದನ್ನು ಕೂದಲಿಗೆ ಹಚ್ಚುವುದರಿಂದ ನೆತ್ತಿಯನ್ನು ಪೋಷಿಸುತ್ತದೆ. ತಲೆಹೊಟ್ಟು ಹೋಗಲಾಡಿಸುತ್ತದೆ. 

ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ  :
ಕಪ್ಪು ಎಳ್ಳಿನಲ್ಲಿ ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಕೂದಲನ್ನು ಸುಧಾರಿಸುತ್ತದೆ. ಇದರ ಬಳಕೆಯಿಂದ ಕೂದಲು ಮೃದುವಾಗುತ್ತದೆ ಮತ್ತು ಅವುಗಳಲ್ಲಿ ಹೊಳಪು ಬರುತ್ತದೆ. ಈ ಪೇಸ್ಟ್  ಕೂದಲು ಒಡೆಯುವ ಸಮಸ್ಯೆಯನ್ನು ನಿವಾರಿಸುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News