Health Tips: ಕೂದಲಿನ ಬಣ್ಣ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ಏಕೆ ತಿರುಗುತ್ತದೆ?

Hair Colour: ವಯಸ್ಸಾಗುವಿಕೆ, ಅನುವಂಶಿಕತೆ, ರೋಗಗಳು, ಒತ್ತಡ, ಪೌಷ್ಟಿಕಾಂಶದ ಕೊರತೆ, ವಿಟಮಿನ್ ಬಿ-12 ಕೊರತೆ ಮುಂತಾದ ಹಲವಾರು ಕಾರಣಗಳಿಂದ ಕಪ್ಪು ಕೂದಲು ಬಿಳಿಯಾಗುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

Written by - Puttaraj K Alur | Last Updated : May 9, 2023, 08:58 PM IST
  • ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗಲು ಪ್ರಾರಂಭಿಸುತ್ತದೆ
  • ಕೂದಲಲ್ಲಿ ಮೆಲನಿನ್ ಕಡಿಮೆ ಅಥವಾ ಉತ್ಪಾದನೆಯಾಗದಿದ್ರೆ ಬಿಳಿಯಾಗುತ್ತದೆ
  • ಕಳಪೆ ಆಹಾರ & ಮಾಲಿನ್ಯ ಸೇರಿ ಇತರ ಕಾರಣಗಳಿಂದಲೂ ಕೂದಲು ಬಿಳಿಯಾಗುತ್ತದೆ
Health Tips: ಕೂದಲಿನ ಬಣ್ಣ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ಏಕೆ ತಿರುಗುತ್ತದೆ?   title=
ಬಿಳಿ ಕೂದಲ ಸಮಸ್ಯೆ

ನವದೆಹಲಿ: ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತವೆ. ಇಂದು ಬಹುತೇಕರು ಬಿಳಿ ಕೂದಲ ಸಮಸ್ಯೆ ಎದುರಿಸುತ್ತಿದ್ದಾರೆ. ಕೂದಲಿನ ಬಣ್ಣ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಲು ಕಾರಣವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗಲು ಶುರುವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಇದು ಸಾಮಾನ್ಯವಾಗಿ 30 ವರ್ಷ ವಯಸ್ಸಿನ ನಂತರ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಆದರೆ ಕೆಲವರಲ್ಲಿ ಇದು ಚಿಕ್ಕ ವಯಸ್ಸಿನಲ್ಲಿಯೂ ಪ್ರಾರಂಭವಾಗಬಹುದು.

ಮೆಲನಿನ್ ಕಾರಣ: ವಾಸ್ತವವಾಗಿ ಭಾರತೀಯ ಜನರ ಕೂದಲಿನ ನೈಸರ್ಗಿಕ ಬಣ್ಣ ಕಪ್ಪು. ಇತರ ಸ್ಥಳಗಳಲ್ಲಿ ನೈಸರ್ಗಿಕ ಬಣ್ಣವು ವಿಭಿನ್ನವಾಗಿರಬಹುದು. ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗಲು ಪ್ರಾರಂಭಿಸುತ್ತದೆ. ಕೂದಲಿನ ಕೋಶಕದಲ್ಲಿ ಕಂಡುಬರುವ ಮೆಲನಿನ್ ವರ್ಣದ್ರವ್ಯದಿಂದ ಕೂದಲಿನ ನೈಸರ್ಗಿಕ ಬಣ್ಣವು ಕಾರಣವೆಂದು ಆರೋಗ್ಯ ತಜ್ಞರು ನಂಬುತ್ತಾರೆ.

ಇದನ್ನೂ ಓದಿ: Dream Interpretation: ಕನಸಿನಲ್ಲಿ ಯಾವ ಬಣ್ಣದ ಹಾವು ಕಂಡ್ರೆ ಏನರ್ಥ! ಯಾವುದು ಶುಭ ಮತ್ತು ಅಶುಭ?

ವಯಸ್ಸು ಕೂಡ ಒಂದು ಅಂಶ: ವರದಿಗಳ ಪ್ರಕಾರ ಮೆಲನಿನ್‌ನಲ್ಲಿ ಯುಮೆಲನಿನ್ ಮತ್ತು ಫಿಯೋಮೆಲನಿನ್ ಎಂದು 2 ವಿಧಗಳಿವೆ. ಸಾಮಾನ್ಯವಾಗಿ ಯೂಮೆಲನಿನ್ ಕಾರಣ ಕೂದಲಿನ ಬಣ್ಣ ಕಪ್ಪಾಗುತ್ತದೆ. ಯುಮೆಲನಿನ್ ಪ್ರಮಾಣವು ಕಡಿಮೆಯಿದ್ದರೆ ಕೂದಲಿನ ಬಣ್ಣವು ಹಗುರವಾಗಿರುತ್ತದೆ. ಯಾವುದೇ ವ್ಯಕ್ತಿಯಲ್ಲಿ ಮೆಲನಿನ್ ಮಟ್ಟದಲ್ಲಿನ ಇಳಿಕೆಯಾದ್ರೆ ಕೂದಲಿನ ಬಣ್ಣವೂ ಬದಲಾಗುತ್ತಲೇ ಇರುತ್ತದೆ. ಆದರೆ ಕೂದಲು ಬಿಳಿಯಾಗಲು ಅಥವಾ ಬೂದು ಬಣ್ಣಕ್ಕೆ ತಿರುಗಲು ವಯಸ್ಸೇ ಕಾರಣ. ರಾಸಾಯನಿಕ ಪ್ರಕ್ರಿಯೆಯ ಮೂಲಕ ಕೂದಲಿನ ಬಣ್ಣವನ್ನು ಸಹ ಬದಲಾಯಿಸಬಹುದು.

ಇನ್ನೂ ಅನೇಕ ಕಾರಣಗಳಿವೆ: ಕೂದಲಲ್ಲಿ ಮೆಲನಿನ್ ಕಡಿಮೆ ಅಥವಾ ಉತ್ಪಾದನೆಯಾಗದಿರಲು ಹಲವು ಕಾರಣಗಳಿರಬಹುದು ಎಂದು ತಜ್ಞರು ನಂಬಿದ್ದಾರೆ. ಇದಕ್ಕೆ ದೊಡ್ಡ ಕಾರಣ ವಯಸ್ಸು ಹೆಚ್ಚುತ್ತಿರುವುದು. ವಯಸ್ಸಾದಂತೆ ಮೆಲನಿನ್ ಉತ್ಪಾದನೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ, ಇದರಿಂದ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಆದರೆ ಇದಕ್ಕೆ ಹೆಚ್ಚುತ್ತಿರುವ ವಯಸ್ಸು ಒಂದೇ ಕಾರಣವಲ್ಲ, ಇನ್ನೂ ಹಲವು ಕಾರಣಗಳಿವೆ.

ಇದನ್ನೂ ಓದಿ:  Relationship: ಆರೋಗ್ಯಕರ ಸಂಬಂಧದಲ್ಲಿ ಬಿರುಕಿಗೆ ಕಾರಣ ಈ ಆರು ಸಂಗತಿಗಳು!

ರೋಗಗಳು ಅಥವಾ ವೈದ್ಯಕೀಯ ಪರಿಸ್ಥಿತಿಗಳು: ಕಳಪೆ ಆಹಾರ ಮತ್ತು ಮಾಲಿನ್ಯ ಸೇರಿದಂತೆ ಇತರ ಕಾರಣಗಳಿಂದಲೂ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಕೂದಲು ಬಿಳಿಯಾಗುವುದರಲ್ಲಿ ಅನುವಂಶಿಕತೆಯು ಪಾತ್ರ ವಹಿಸುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕೂದಲು ಬಿಳಿಯಾಗಿದ್ದರೆ, ನೀವು ಸಹ ಅದರ ಪರಿಣಾಮ ಎದುರಿಸುತ್ತೀರಿ. ಕೆಲವು ರೋಗಗಳು ಅಥವಾ ವೈದ್ಯಕೀಯ ಪರಿಸ್ಥಿತಿಗಳು ಕೂಡ ಕೂದಲು ಬಿಳಿಯಾಗಲು ಕಾರಣವಾಗಬಹುದು. ಉದಾಹರಣೆಗೆ, ವಿಟಲಿಗೋ ಎಂಬ ಕಾಯಿಲೆಯಲ್ಲಿ ಮೆಲನಿನ್ ಉತ್ಪಾದಿಸುವ ದೇಹದ ಜೀವಕೋಶಗಳು ನಾಶವಾಗುತ್ತವೆ.

ಹಾರ್ಮೋನುಗಳ ಬದಲಾವಣೆಗಳು: ಇವುಗಳಲ್ಲದೆ ವೃದ್ಧಾಪ್ಯ, ಅನುವಂಶಿಕತೆ, ರೋಗ, ಒತ್ತಡ, ಪೌಷ್ಟಿಕಾಂಶದ ಕೊರತೆ, ವಿಟಮಿನ್ ಬಿ-12 ಕೊರತೆ, ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು, ಹೆಚ್ಚಿನ ದೈಹಿಕ ಅಥವಾ ಮಾನಸಿಕ ಒತ್ತಡ, ಸೂರ್ಯನ ಬೆಳಕು ಅಥವಾ ಧೂಳಿಗೆ ಒಡ್ಡಿಕೊಳ್ಳುವುದು, ರಾಸಾಯನಿಕ ಪದಾರ್ಥಗಳಿಂದಲೂ ಕೂದಲು ಬಿಳಿಯಾಗುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News