Heart Attack Warning Signs: Flu ನ ಈ ಲಕ್ಷಣಗಳು ಹೃದಯಾಘಾತದ ಸಂಕೇತಗಳಾಗಿವೆ... ಎಚ್ಚರ!

Heart Attack Signs: ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಹೃದ್ರೋಗದಿಂದ ಸಾವನ್ನಪ್ಪುವವರ ಸಂಖ್ಯೆ ದ್ವಿಗುಣಗೊಂಡಿದೆ. ಹೃದಯಾಘಾತವು ಒಂದು ಗಂಭೀರ ಮತ್ತು ಮಾರಣಾಂತಿಕ ಸಮಸ್ಯೆಯಾಗಿದೆ. ಫ್ಲೂ ಇನ್ಫೆಕ್ಷನ್ ನ ಕೆಲ ಲಕ್ಷಣಗಳು ಕೂಡ ಹೃದಯಾಘಾತದ ಸಂಕೇತಗಳಂತೆ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಹಾರ್ಟ್ ಅಟ್ಯಾಕ್ ಸಂಕೇತಗಳನ್ನು ನಾರ್ಮಲ್ ಫ್ಲೂ ಸಂಕೇತಗಳೆಂದು ಭಾವಿಸುವ ತಪ್ಪು ಮಾಡಬಾರದು.  

Written by - Nitin Tabib | Last Updated : Aug 28, 2022, 08:50 PM IST
  • ಹೃದಯಾಘಾತ ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಹೃದಯಾಘಾತ ಕಾಯಿಲೆ ಇರುವವರ ಸಂಖ್ಯೆ ದ್ವಿಗುಣಗೊಂಡಿದೆ (1990 ರಲ್ಲಿ 22 ಲಕ್ಷ ಹಾಗೂ 2020 ರಲ್ಲಿ 47 ಲಕ್ಷ).
  • ಸಾಮಾನ್ಯ ಜ್ವರದ ಕೆಲ ಸಂಕೇತಗಳು ಹಾರ್ಟ್ ಅಟ್ಯಾಕ್ ಸಂಕೇತಗಳಂತೆಯೇ ಇರುತ್ತವೆ.
  • ಇಂತಹ ಪರಿಸ್ಥಿತಿಯಲ್ಲಿ ಹೃದಯಾಘಾತದ ಸಂತಗಳನ್ನು ಫ್ಲೂ ಸಂಕೇತಗಳು ಎಂದು ಭಾವಿರುವ ತಪ್ಪು ಮಾಡಬಾರದು.
Heart Attack Warning Signs: Flu ನ ಈ ಲಕ್ಷಣಗಳು ಹೃದಯಾಘಾತದ ಸಂಕೇತಗಳಾಗಿವೆ... ಎಚ್ಚರ! title=
ಹೃದಯಾಘಾತ Heart Attack

Heart Attack Signs - ಹೃದಯಾಘಾತ ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಹೃದಯಾಘಾತ ಕಾಯಿಲೆ ಇರುವವರ ಸಂಖ್ಯೆ ದ್ವಿಗುಣಗೊಂಡಿದೆ (1990 ರಲ್ಲಿ 22 ಲಕ್ಷ ಹಾಗೂ 2020 ರಲ್ಲಿ 47 ಲಕ್ಷ). ಸಾಮಾನ್ಯ ಜ್ವರದ ಕೆಲ ಸಂಕೇತಗಳು ಹಾರ್ಟ್ ಅಟ್ಯಾಕ್ ಸಂಕೇತಗಳಂತೆಯೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಹೃದಯಾಘಾತದ ಸಂತಗಳನ್ನು ಫ್ಲೂ ಸಂಕೇತಗಳು ಎಂದು ಭಾವಿರುವ ತಪ್ಪು ಮಾಡಬಾರದು. ಫ್ಲೂ ಸಂದರ್ಭದಲ್ಲಿ ತೀವ್ರ ಜ್ವರ, ತಲೆನೋವು, ಮೈಕೈ ನೋವು, ಕೆಮ್ಮು, ಗಂಟಲು ಕೆರೆತ, ಆಯಾಸ, ವಾಂತಿಯ ಆಭಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಿಮ್ಮನ್ನು ಕನ್ಫ್ಯೂಸ್ ಮಾಡುವ ಕೆಲ ಇತರ ಲಕ್ಷಣಗಳ ಕುರಿತು ತಿಳಿದುಕೊಳ್ಳೋಣ ಬನ್ನಿ

ತಲೆ ಸುತ್ತುವಿಕೆ
ಫ್ಲೂ ಹಾಗೂ ಹೃದಯಾಘಾತ ಎರಡರಲ್ಲಿಯೂ ಕೂಡ ತಲೆ ಸುತ್ತುವಿಕೆ ಒಂದು ಕಾಮನ್ ಲಕ್ಷಣವಾಗಿದೆ. ಇದಲ್ಲದೆ ನಿಮಗೆ ತಲೆನೋವು ಕೂಡ ಕಾಣಿಸಿಕೊಳ್ಳಬಹುದು, ಹೀಗಿರುವಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಅದು ಫ್ಲೂ ಲಕ್ಷಣವಾಗಿದ್ದರೆ ಅದನ್ನು ನೀವು ಮನೆಯಲ್ಲಿಯೇ ಗುಣಪಡಿಸಬಹುದು. ಹೃದಯಾಘಾತದ ಲಕ್ಷಣವಾಗಿದ್ದರೆ ಪ್ರಾಣಕ್ಕೆ ಅಪಾಯ ಬರಬಹುದು. 

ಆಯಾಸ
ಅನೇಕ ಕಾರಣಗಳಿಂದ ನಮಗೆ ಅಗ್ಗಾಗ ಆಯಾಸದ ಅನುಭವ ಉಂಟಾಗುತ್ತದೆ. ಆದರೆ ಅತಿಯಾದ ಆಯಾಸವೇ ಹೃದಯಾಘಾತಕ್ಕೆ ಮುಖ್ಯ ಕಾರಣ. ಹೃದಯಾಘಾತದಿಂದ, ಹೆಚ್ಚಿನ ಒತ್ತಡವನ್ನು ಬಂದಂತಾಗುತ್ತದೆ. ಜ್ವರ ಬಂದಾಗಲೂ ಕೂಡ ಆಯಾಸ ಉಂಟಾಗುತ್ತದೆ, ನೀವು ಹೆಚ್ಚು ಆಯಾಸವನ್ನು ಅನುಭವಿಸುತ್ತಿದ್ದರೆ, ತಡಮಾಡದೆಯೇ ವೈದ್ಯರನ್ನು ಸಂಪರ್ಕಿಸಿ.

ಉಸಿರಾಟದಲ್ಲಿ ತೊಂದರೆ
ಫ್ಲೂ ಇದ್ದಾಗ ಉಸಿರಾಟದ ತೊಂದರೆಯ ಲಕ್ಷಣ ಕೂಡ ಕಾಣಿಸಿಕೊಳ್ಳುತ್ತದೆ. ಜೊತೆಗೆ ಎದೆನೋವು ಕೂಡ ಕಾಣಿಸಿಕೊಳ್ಳುತ್ತದೆ. ತಲೆ ಸುತ್ತುವಿಕೆಯಂತಹ ಲಕ್ಷಣಗಳು ಹಾರ್ಟ್ ಅಟ್ಯಾಕ್ ಲಕ್ಷಣಗಳು ಕೂಡ ಹೌದು. ಹೀಗಿರುವಾಗ ಸಮಯ ಇರುವಾಗಲೇ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲು ಒಳಿತು.

ಇದನ್ನೂ ಓದಿ-Kombucha Drink: ಹಲವು ಬಾಲಿವುಡ್ ನಟ-ನಟಿಯರ ಫಿಟ್ನೆಸ್ ಮಂತ್ರ ಈ ಕೊಂಬುಚಾ ಡ್ರಿಂಕ್...ಏನಿದು?

ಅತ್ಯಧಿಕ ಬೆವರುವಿಕೆ
ರೂಮ್ ಟೆಂಪರೇಚರ್ ನಲ್ಲಿ ನಿಮಗೆ ಅತಿಯಾದ ಬೆವರು ಬರುತ್ತಿದ್ದರೆ, ಅದು ಹೃದಯಾಘಾತದ ಸಂಕೇತವಾಗಿರಬಹುದು. ತಂಪಾದ ಬೆವರು ಫ್ಲೂ ಲಕ್ಷಣ ಕೂಡ ಹೌದು. ಹೃದಾಯಾಘಾತದ ಅಪಾಯ ಕಡಿಮೆ ಮಾಡಿಕೊಳ್ಳಲು ನಾವು ನಮ್ಮ ಜೀವನಶೈಲಿಯನ್ನು ಆದಷ್ಟು ಸರಿಯಾಗಿಡಬೇಕು. 

ಇದನ್ನೂ ಓದಿ-Drawbacks of Being Single: ಒಂಟಿಯಾಗಿರುವುದರಿಂದ ಆಗುವ ಈ 4 ಹಾನಿಗಳು ನಿಮಗೆ ತಿಳಿದಿವೆಯಾ?

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News