ಶನಿವಾರದ ರಾಶಿ ಭವಿಷ್ಯ (11-03-2023): ಕನ್ಯಾ ರಾಶಿಯ ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಬೇಕು. ಮೀನ ರಾಶಿಯವರಿಗೆ ಜೀವನ ಸಂಗಾತಿಯ ಬೆಂಬಲ ಸಿಗಲಿದೆ. ಧನು ರಾಶಿಯವರು ಹಳೆಯ ವಿಚಾರಗಳಲ್ಲಿ ಸ್ನೇಹಿತರ ಜೊತೆ ವಾದ ಮಾಡಬಾರದು.
ಮೇಷ ರಾಶಿ: ನಿಮಗೆ ಇಂದು ಉತ್ತಮ ದಿನವಾಗಲಿದೆ. ನಿರ್ಗತಿಕರಿಗೆ ಸಹಾಯ ಮಾಡಿ. ಸ್ಥಗಿತಗೊಂಡ ಸರ್ಕಾರಿ ಕೆಲಸಗಳು ನಡೆಯಲಿವೆ.
ಅದೃಷ್ಟದ ಬಣ್ಣ - ಗುಲಾಬಿ
ವೃಷಭ ರಾಶಿ: ನಿಮ್ಮ ಜೀವನ ಸಂಗಾತಿಯ ಬೆಂಬಲ ಸಿಗಲಿದೆ. ವೈವಾಹಿಕ ಜೀವನದಲ್ಲಿನ ಹುಳುಕು ಕಡಿಮೆಯಾಗುತ್ತದೆ. ನಿಮ್ಮ ಕಚೇರಿಯನ್ನು ಸಮಯಕ್ಕೆ ತಲುಪಿ.
ಅದೃಷ್ಟದ ಬಣ್ಣ - ಬಿಳಿ
ಮಿಥುನ ರಾಶಿ: ನಿಮ್ಮ ಹಿರಿಯರನ್ನು ಗೌರವಿಸಿ. ಯಾರಿಗೂ ಸಾಲ ಕೊಡಬೇಡಿ. ಪ್ರಮುಖ ಕೆಲಸಗಳಲ್ಲಿ ಯಶಸ್ವಿಯಾಗುವಿರಿ.
ಅದೃಷ್ಟದ ಬಣ್ಣ - ಹಸಿರು
ಕರ್ಕಾಟಕ ರಾಶಿ: ಮಧ್ಯಾಹ್ನದ ನಂತರ ನಿಮಗೆ ಸಮಯವು ಅನುಕೂಲಕರವಾಗಿರುತ್ತದೆ. ವಿವೇಕಯುತ ಚಿಂತನೆಯ ನಂತರ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿರಿ. ನಿಮ್ಮ ಪ್ರೀತಿ-ಪಾತ್ರರ ಬೆಂಬಲ ಸಿಗಲಿದೆ.
ಅದೃಷ್ಟದ ಬಣ್ಣ- ಹಳದಿ
ಇದನ್ನೂ ಓದಿ: Shani Nakshatra Gochar 2023: ಶತಭಿಷಾ ನಕ್ಷತ್ರದಲ್ಲಿ ಶನಿಯ ಭ್ರಮಣೆ, ಈ ರಾಶಿಗಳ ಜನರು ಎಚ್ಚರಿಕೆಯಿಂದಿರಬೇಕು.. ಇಲ್ದಿದ್ರೆ!
ಸಿಂಹ ರಾಶಿ: ಹಿರಿಯರನ್ನು ಗೌರವಿಸಿ. ಯಾರಿಗೂ ಸಾಲ ಕೊಡಬೇಡಿ. ಸಂಗಾತಿಯೊಂದಿಗೆ ವಾಗ್ವಾದ ಇರುತ್ತದೆ.
ಅದೃಷ್ಟದ ಬಣ್ಣ- ಚಿನ್ನ
ಕನ್ಯಾ ರಾಶಿ: ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಬೇಕು. ಜೀವನ ಸಂಗಾತಿಯೊಂದಿಗೆ ಉತ್ತಮ ಜೀವನವಿರುತ್ತದೆ. ನಿಮ್ಮ ಪ್ರೀತಿ-ಪಾತ್ರರ ಜೊತೆ ಜಗಳವಾಡಬೇಡಿ.
ಅದೃಷ್ಟದ ಬಣ್ಣ- ಮರೂನ್
ತುಲಾ ರಾಶಿ: ಯಾರೊಂದಿಗೂ ವಾದದಲ್ಲಿ ತೊಡಗಬೇಡಿ. ಅಗತ್ಯವಿರುವ ಸ್ನೇಹಿತರಿಗೆ ಸಹಾಯ ಮಾಡಿ. ದುಂದು ವೆಚ್ಚವನ್ನು ತಪ್ಪಿಸಿ.
ಅದೃಷ್ಟದ ಬಣ್ಣ - ಬಿಳಿ
ವೃಶ್ಚಿಕ ರಾಶಿ: ಸಂಜೆಯವರೆಗೂ ಸಮಯ ಅನುಕೂಲಕರವಾಗಿರಲ್ಲ. ಯಾರಿಗೂ ಸಾಲ ಕೊಡಬೇಡಿ. ಕೆಲಸದ ಸ್ಥಳದಲ್ಲಿ ಯಾರೊಂದಿಗೂ ವಾಗ್ವಾದದಲ್ಲಿ ತೊಡಗಬೇಡಿ.
ಅದೃಷ್ಟದ ಬಣ್ಣ- ಕೆಂಪು
ಇದನ್ನೂ ಓದಿ: Surya Gochar 2023 : ಸೂರ್ಯ ಗೋಚರದಿಂದ ಈ 5 ರಾಶಿಯವರಿಗೆ ಭಾರಿ ಆರ್ಥಿಕ ಲಾಭದ ಜೊತೆಗೆ, ಶ್ರೀಮಂತಿಕೆ ಭಾಗ್ಯ!
ಧನು ರಾಶಿ: ಹಳೆಯ ವಿಚಾರಗಳಲ್ಲಿ ಸ್ನೇಹಿತರ ಜೊತೆ ವಾದ ಮಾಡಬೇಡಿ. ಅಗತ್ಯವಿದ್ದಾಗ ಸ್ನೇಹಿತನನ್ನು ಬೆಂಬಲಿಸಿ. ತಲೆನೋವು ಮಧ್ಯಾಹ್ನದವರೆಗೆ ಇರುತ್ತದೆ.
ಅದೃಷ್ಟದ ಬಣ್ಣ- ಚಿನ್ನ
ಮಕರ ರಾಶಿ: ಹಿರಿ-ಕಿರಿಯರಿಗೆ ಗೌರವ ನೀಡಿ. ಮಧ್ಯಾಹ್ನದವರೆಗೆ ಯಾವುದೇ ಪ್ರಮುಖ ಕೆಲಸಗಳನ್ನು ಮಾಡಬೇಡಿ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.
ಅದೃಷ್ಟದ ಬಣ್ಣ- ಆಕಾಶ ನೀಲಿ
ಕುಂಭ ರಾಶಿ: ಪ್ರಮುಖ ಕೆಲಸದ ಅಡಚಣೆಗಳು ಕೊನೆಗೊಳ್ಳುತ್ತವೆ. ವ್ಯಾಪಾರದಲ್ಲಿ ಸಿಲುಕಿರುವ ಹಣ ವಾಪಸ್ ಸಿಗಲಿದೆ. ಪೋಷಕರನ್ನು ಗೌರವಿಸಿ.
ಅದೃಷ್ಟದ ಬಣ್ಣ - ಹಸಿರು
ಮೀನ ರಾಶಿ: ನಿಮ್ಮ ಯಜಮಾನನಿಗೆ ಕೆಲವು ಉಡುಗೊರೆಗಳನ್ನು ನೀಡಿ. ನಿಮ್ಮ ಜೀವನ ಸಂಗಾತಿಯ ಬೆಂಬಲ ಸಿಗಲಿದೆ. ಹೆಚ್ಚಿನ ಮೌಲ್ಯದ ವಸ್ತುಗಳಿಗೆ ಹಾನಿಯಾಗಬಹುದು.
ಅದೃಷ್ಟದ ಬಣ್ಣ- ಹಳದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.