Horoscope Today: ಈ ರಾಶಿಯವರಿಗೆ ಆಕಸ್ಮಿಕ ಧನಪ್ರಾಪ್ತಿ, ಜ್ಞಾನಪ್ರಾಪ್ತಿ ಯೋಗವಿದೆ

ಇಂದಿನ ದಿನಭವಿಷ್ಯ(12-11-2022): ಕಟಕ ರಾಶಿಯವರ ಮನೆಯಲ್ಲಿ ಅಶಾಂತಿ ಇರುತ್ತದೆ. ಕನ್ಯಾ ರಾಶಿಯವರಿಗೆ ಪ್ರಯತ್ನ ಕಾರ್ಯಗಳಲ್ಲಿ ಜಯ ಸಿಗಲಿದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Nov 12, 2022, 06:30 AM IST
  • ಕುಂಭ ರಾಶಿಯ ಜನರಿಗೆ ಬಾಳ ಸಂಗಾತಿಗೆ ತೊಂದರೆ ಇರುತ್ತದೆ
  • ಕಟಕ ರಾಶಿಯ ಜನರಿಗೆ ಪ್ರೇಮ ಪ್ರಕರಣದಲ್ಲಿ ಸಮಸ್ಯೆ ಉಂಟಾಗಲಿದೆ
  • ಮೀನ ರಾಶಿಯವರಿಗೆ ಆಡುವ ಮಾತುಗಳಿಂದ ಸಮಸ್ಯೆಗಳು ಉಂಟಾಗಲಿವೆ
Horoscope Today: ಈ ರಾಶಿಯವರಿಗೆ ಆಕಸ್ಮಿಕ ಧನಪ್ರಾಪ್ತಿ, ಜ್ಞಾನಪ್ರಾಪ್ತಿ ಯೋಗವಿದೆ title=
ಇಂದಿನ ರಾಶಿಭವಿಷ್ಯ

ದಿನಾಂಕ: 12-11-2022 ವಾರ: ಶನಿವಾರ ಪಕ್ಷ: ಕೃಷ್ಣ ಪಕ್ಷ ನಕ್ಷತ್ರ: ಮೃಗಶಿರ ಯೋಗ: ಸಿದ್ದ ಕರಣ: ಭವ

Horoscope Today (12-11-2022): ವೃಷಭ ರಾಶಿಯವರಿಗೆ ಗುಪ್ತ ಧನಪ್ರಾಪ್ತಿ ಯೋಗವಿದೆ. ಕನ್ಯಾ ರಾಶಿಯವರಿಗೆ ಜ್ಞಾನಪ್ರಾಪ್ತಿ ಯೋಗವಿದೆ. ಕುಂಭ ರಾಶಿಯವರಿಗೆ ಬಾಳ ಸಂಗಾತಿಗೆ ತೊಂದರೆ ಇರುತ್ತದೆ.

ಮೇಷ ರಾಶಿ: ಮೋಹಕ್ಕೆ ಒಳಗಾಗುವ ಸಂಭವ ಇದೆ. ಕೆಲಸದಲ್ಲಿ ಮಂದಗತಿಯ ಪ್ರಗತಿ ಇರುತ್ತದೆ.

ವೃಷಭ ರಾಶಿ: ಸ್ತ್ರೀ/ಪುರುಷರಿಂದ ಮೋಸ ಹೋಗುವ ಸಂಭವ ಇದೆ. ಶತ್ರುಗಳಿಂದ ಬಾಧೆ. ಗುಪ್ತ ಧನಪ್ರಾಪ್ತಿ ಯೋಗವಿದೆ.

ಮಿಥುನ ರಾಶಿ: ಅಷ್ಟಮ ಶನಿಯ ಪ್ರಭಾವದಿಂದ ನಿಮಗೆ ಸಾವಿನ ಭಯ ಕಾಡಬಹುದು. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ಕಟಕ ರಾಶಿ: ಪ್ರೇಮ ಪ್ರಕರಣದಲ್ಲಿ ಸಮಸ್ಯೆ ಉಂಟಾಗಲಿದೆ. ಮನೆಯಲ್ಲಿ ಅಶಾಂತಿ ಇರುತ್ತದೆ. ಪುಸ್ತಕದ ಕಡೆ ಒಲವು ಹೆಚ್ಚಾಗುತ್ತದೆ.

ಇದನ್ನೂ ಓದಿ: Samudrik Shastra : ಕೈಯಲ್ಲಿ ಈ ರೀತಿಯ ಗುರುತುಗಳಿದ್ದರೆ, ನಿಮಗಿದೆ 'ರಾಜಯೋಗ'

ಸಿಂಹ ರಾಶಿ: ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ. ವಿದ್ಯೆಯಲ್ಲಿ ಎಚ್ಚರಿಕೆ ಅಗತ್ಯ. ಪ್ರಾಣಿಗಳಿಂದ ತೊಂದರೆ ಇರುತ್ತದೆ.

ಕನ್ಯಾ ರಾಶಿ: ಸಣ್ಣಪುಟ್ಟ ವಾಹನ ಅಪಘಾತವಾಗುವ ಸಂಭವ. ಪ್ರಯತ್ನ ಕಾರ್ಯಗಳಲ್ಲಿ ಜಯ ಸಿಗಲಿದೆ. ಜ್ಞಾನಪ್ರಾಪ್ತಿ ಯೋಗವಿದೆ.

ತುಲಾ ರಾಶಿ: ಪರ ಸ್ರ್ರೀ/ ಪರ ಪುರುಷರಲ್ಲಿ ಆಕರ್ಷಣೆಯಿಂದ ತೊಂದರೆ ಉಂಟಾಗಲಿದೆ. ಗುರುವಿಗೆ ಶಾಂತಿ ಮಾಡಿಸಿದರೆ ಬಹಳ ಒಳ್ಳೆಯದು. ಸಲ್ಲಾಪದ ಮಾತುಗಳು ಕೇಳಿಬರಲಿವೆ.

ವೃಶ್ಚಿಕ ರಾಶಿ: ಸಾಮಾಜಿಕ ಪ್ರತಿಷ್ಠೆಯ ಬಗ್ಗೆ ಚಿಂತೆ. ಬೇಡವಾದ ಖರ್ಚುಗಳು ನಿಮ್ಮನ್ನು ಕಾಡಲಿವೆ. ತರಾತುರಿಯಲ್ಲಿ ಕೆಲಸಗಳನ್ನು ಮಾಡುತ್ತೀರಿ.

ಇದನ್ನೂ ಓದಿ: Sunset Tips : ಮುಸ್ಸಂಜೆ ವೇಳೆಯಲ್ಲಿ ತಪ್ಪಿಯೂ ಮಾಡಬೇಡಿ ಈ 5 ಕೆಲಸ, ಇವು ಅಶುಭ ಸಂಕೇತ!

ಧನು ರಾಶಿ: ಬಾಳ ಸಂಗಾತಿಯೊಂದಿಗೆ ಹೊರ ದೇಶದ/ರಾಜ್ಯದ ಪ್ರಯಾಣ ಸಾಧ್ಯತೆ. ಕಳ್ಳರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

ಮಕರ ರಾಶಿ: ಗುರುವಿನ ಕೃಪೆಯಿಂದ ಪರಾಕ್ರಮ. ಸಾಲದ ಬಾಧೆ ಕಾಡಲಿದೆ. ಕೆಲಸದಲ್ಲಿ ಅಡಚಣೆ ಉಂಟಾಗಲಿದೆ.

ಕುಂಭ ರಾಶಿ: ಬಾಳ ಸಂಗಾತಿಗೆ ತೊಂದರೆ ಇರುತ್ತದೆ. ಪ್ರಚಾರದಿಂದ ದೂರ ಇರುವ ಸಂಭವ. ನಿಮಗೆ ಅಸಹಾಯಕತೆ ಕಾಡಲಿದೆ.

ಮೀನ ರಾಶಿ: ನೀವು ಆಡುವ ಮಾತುಗಳಿಂದ ಸಮಸ್ಯೆಗಳು ಉಂಟಾಗಲಿವೆ. ಹಿತಶತ್ರುಗಳಿಂದ ಬಾಧೆ ಇರುತ್ತದೆ. ಮಂದಗತಿಯಲ್ಲಿ ತೀರ್ಮಾನಗಳಿಂದ ನಿಮಗೆ ಸಮಸ್ಯೆ ಎದುರಾಗುತ್ತವೆ.

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News