Horoscope Today: ಈ ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ!

Horoscope Today (30-10-2022): ಮೇಷ ರಾಶಿಯವರು ಕೆಂಪು ಬಟ್ಟೆಯನ್ನು ದಾನ ಮಾಡಬೇಕು, ಕನ್ಯಾ ರಾಶಿಯವರು ಸ್ನೇಹಿತರೊಂದಿಗೆ ಸಮಯ ಕಳೆಯಬೇಕು. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Oct 30, 2022, 06:00 AM IST
  • ಮಿಥುನ ರಾಶಿಯ ಜನರಿಗೆ ಆರ್ಥಿಕ ಲಾಭದ ಸಾಧ್ಯತೆಗಳಿವೆ
  • ಕರ್ಕಾಟಕ ರಾಶಿಯಜನರ ಉದ್ಯೋಗ ಸಮಸ್ಯೆಗಳು ಕೊನೆಗೊಳ್ಳಲಿವೆ
  • ಧನು ರಾಶಿಯ ಜನರು ಅಗತ್ಯವಿರುವವರಿಗೆ ಸಹಾಯ ಮಾಡಬೇಕು
Horoscope Today: ಈ ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ! title=
ಭಾನುವಾರದ ನಿಮ್ಮ ರಾಶಿಭವಿಷ್ಯ

Horoscope Today (30-10-2022): ಹೊಸ ಉದ್ಯೋಗ ಪಡೆಯಲು ಪ್ರಯತ್ನಿಸುವುದು, ಹೊಸ ಮನೆ ಕಟ್ಟಿಸಲು ಯೋಜಿಸುವುದು ಅಥವಾ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಯೋಚಿಸುವುದು. ಇವೆಲ್ಲವೂ ನಿಮ್ಮ ಜೀವನದ ದೊಡ್ಡ ನಿರ್ಧಾರಗಳಾಗಿವೆ. ಜೀವನದಲ್ಲಿ ಮುಂದೆ ನಡೆಯುವ ಮೊದಲು ನಿಮ್ಮ ನಕ್ಷತ್ರಗಳ ಸಹಾಯ ಪಡೆದುಕೊಳ್ಳುವುದು ಮತ್ತು ನಿಮ್ಮ ಹಣೆಬರಹದಲ್ಲಿ ಗ್ರಹಗಳ ಸ್ಥಾನಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.    

ಮೇಷ ರಾಶಿ: ಯೋಚಿಸಿದ ನಂತರವೇ ಬದಲಾವಣೆಗಳನ್ನು ಮಾಡಿಕೊಳ್ಳಿ. ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಕೆಂಪು ಬಟ್ಟೆಗಳನ್ನು ದಾನ ಮಾಡಬೇಕು.

ಅದೃಷ್ಟ ಬಣ್ಣ- ಹಳದಿ

ವೃಷಭ ರಾಶಿ: ಸ್ನೇಹಿತರೊಂದಿಗೆ ವಾದ ಮಾಡಬೇಡಿ. ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಕೆಲಸವನ್ನು ನೀವೇ ಮಾಡಿ. ಶೀಘ್ರವೇ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ.

ಅದೃಷ್ಟದ ಬಣ್ಣ- ನೀಲಿ

ಮಿಥುನ ರಾಶಿ: ಮಧ್ಯಾಹ್ನದ ನಂತರ ದಿನವು ಉದ್ವಿಗ್ನವಾಗಿರುತ್ತದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ತಾಳ್ಮೆಯಿಂದಿರಿ ಮತ್ತು ಶಾಂತವಾಗಿರಿ. ನಿಮ್ಮ ಆರ್ಥಿಕ ಪರಿಸ್ಥತಿಗಳು ಶೀಘ್ರವೇ ಕೊನೆಗೊಳ್ಳುತ್ತವೆ.

ಅದೃಷ್ಟದ ಬಣ್ಣ- ಕಂದು

ಕರ್ಕಾಟಕ ರಾಶಿ: ವೈವಾಹಿಕ ಜೀವನವು ಕಹಿಯಾಗಬಹುದು. ಉದ್ಯೋಗ ಸಮಸ್ಯೆಗಳು ಕೊನೆಗೊಳ್ಳಲಿವೆ. ಪೇಠವನ್ನು ದಾನ ಮಾಡಿ. ಯಾವುದೇ ಮೂಲೆಯಿಂದ ನಿಮಗೆ ಧನಲಾಭವಾಗುತ್ತದೆ.

ಅದೃಷ್ಟದ ಬಣ್ಣ- ಹಳದಿ

ಇದನ್ನೂ ಓದಿ: Labh Panchami 2022: ವ್ಯಾಪಾರ ವೃದ್ಧಿ, ತಿಜೋರಿಯಲ್ಲಿ ಹಣದ ಹರಿವು ಹೆಚ್ಚಾಗಲು ಇಂದು ಶುಭ ಮುಹೂರ್ತದಲ್ಲಿ ಈ ಕೆಲಸ ಮಾಡಿ

ಸಿಂಹ ರಾಶಿ: ವ್ಯಾಪಾರದ ಉದ್ವಿಗ್ನತೆ ಕೊನೆಗೊಳ್ಳುತ್ತದೆ. ನಿಮ್ಮ ಹಿರಿಯರನ್ನು ಗೌರವಿಸಿ. ನಿಮ್ಮ ಮನೆಗೆ ಅತಿಥಿಗಳು ಬರಬಹುದು. ನಿಮಗೆ ಉತ್ತಮ ಲಾಭ ಸಿಗಲಿದೆ.

ಅದೃಷ್ಟದ ಬಣ್ಣ- ಚಿನ್ನ

ಕನ್ಯಾ ರಾಶಿ: ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಬೇಕು. ಸಾಲವಾಗಿ ಕೊಟ್ಟ ಹಣ ವಾಪಸ್ ಬರಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನೀವು ಅಂದುಕೊಂಡ ಕೆಲಸಗಳು ಆಗುತ್ತವೆ.

ಅದೃಷ್ಟದ ಬಣ್ಣ- ಮರೂನ್

ತುಲಾ ರಾಶಿ: ಯಾವುದೇ ಕಾರಣಕ್ಕೂ ನೀವು ಮನೆಯನ್ನು ಸ್ಥಳಾಂತರಿಸಬೇಡಿ. ಸಂಬಂಧದಲ್ಲಿ ಅಜಾಗರೂಕರಾಗಿರಬೇಡಿ. ತಾಯಿಯ ಆರೋಗ್ಯ ಸುಧಾರಿಸಲಿದೆ. ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ, ಸರಿಯಾದ ಸಮಯಕ್ಕೆ ಕೆಲಸಗಳನ್ನು ಮಾಡಿಮುಗಿಸಿ.

ಅದೃಷ್ಟದ ಬಣ್ಣ - ಬಿಳಿ

ವೃಶ್ಚಿಕ ರಾಶಿ: ನಿಮ್ಮ ಸಂಗಾತಿಯನ್ನು ಗೌರವಿಸಿ. ವ್ಯಾಪಾರ ಪ್ರಯಾಣವನ್ನು ಮುಂದೂಡಲಾಗುವುದು. ಉದಯಿಸುತ್ತಿರುವ ಸೂರ್ಯನನ್ನು ನೋಡಿ. ಶೀಘ್ರವೇ ನಿಮಗೂ ಸಹ ಧನಲಾಭವಾಗುವ ನಿರೀಕ್ಷೆ ಇದೆ.

ಅದೃಷ್ಟದ ಬಣ್ಣ- ಕೆಂಪು

ಇದನ್ನೂ ಓದಿ: Chandra Grahan 2022: ಚಿಂತೆ ಹೆಚ್ಚಿಸುತ್ತಿದೆ ನವೆಂಬರ್ 8ರ ಚಂದ್ರಗ್ರಹಣ, 4 ರಾಶಿಗಳ ಜನರಿಗೆ ಲಾಭ 4 ರಾಶಿಗಳ ಜನರಿಗೆ ಹಾನಿ

ಧನು ರಾಶಿ: ಸ್ನೇಹಿತರೊಂದಿಗೆ ಸುತ್ತಾಡಲು ಹೋಗಬೇಕು. ಹೆತ್ತವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಅಗತ್ಯವಿರುವವರಿಗೆ ಸಹಾಯ ಮಾಡಿ. ನೀವು ಬೇರೆಯವರಿಗೆ ಮಾಡಿದ ಸಹಾಯದಿಂದ ಅದೃಷ್ಟ ಹುಡುಕಿಕೊಂಡು ಬರಲಿದೆ.

ಅದೃಷ್ಟದ ಬಣ್ಣ- ಚಿನ್ನ

ಮಕರ ರಾಶಿ: ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ವಿತ್ತೀಯ ಲಾಭವನ್ನು ನಿರೀಕ್ಷಿಸಲಾಗಿದೆ. ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಎಲ್ಲಾ ರೀತಿಯ ಆರ್ಥಿಕ ಪರಿಸ್ಥಿತಿಗಳು ಕೊನೆಗೊಳ್ಳುತ್ತವೆ.

ಅದೃಷ್ಟದ ಬಣ್ಣ - ಅರಿಶಿನ

ಕುಂಭ ರಾಶಿ: ಯಾವುದೇ ರೀತಿಯ ಪ್ರಯಾಣವನ್ನು ಮುಂದೂಡಿ. ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ನಿಮ್ಮ ಪ್ರೀತಿಪಾತ್ರರನ್ನು ಬೆಂಬಲಿಸಿ. ಅದೃಷ್ಟದ ಜೊತೆಗೆ ನಿಮಗೆ ಧನಲಾಭವಾಗಲಿದೆ.

ಅದೃಷ್ಟದ ಬಣ್ಣ - ಬಿಳಿ

ಮೀನ ರಾಶಿ: ಉದ್ಯೋಗದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಯಾರೊಂದಿಗೂ ವಾದ ಮಾಡಬೇಡಿ. ನಿಮ್ಮ ಶಿಕ್ಷಕರನ್ನು ಗೌರವಿಸಿ. ಕುಟುಂಬಸ್ಥರಿಂದ ನಿಮಗೆ ಹೆಚ್ಚಿನ ರೀತಿಯ ಬೆಂಬಲ ಸಿಗಲಿದೆ.

ಅದೃಷ್ಟದ ಬಣ್ಣ- ಚಿನ್ನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News