ಮನೆಯ ಮುಂದೆ ಈ ಗಿಡಗಳನ್ನು ನೆಟ್ಟರೆ ಹಾವು ಸೇರಿದಂತೆ ಯಾವುದೇ ಹುಳುಹುಪ್ಪಡಿ ಅತ್ತಕಡೆ ಸುಳಿಯುವುದಿಲ್ಲ!

Snake repellent plants: ಮಳೆಗಾಲದಲ್ಲಿ ಹಾವುಗಳು ಮನೆಗಳಿಗೆ ಬರುತ್ತವೆ. ಕಾರಣ ಮಳೆ ನೀರು ಇವುಗಳ ಆವಾಸಸ್ಥಾನವಾಗಿವೆ.. ಹಾಗಾದ್ರೆ.. ಹಾವು ಬರದಂತೆ ತಡೆಯಲು ಬೆಳೆಸಬೇಕಾದ ಗಿಡಗಳಾವವು ಎನ್ನುವುದನ್ನು ಇದೀಗ ತಿಳಿಯೋಣ.

Written by - Savita M B | Last Updated : Jul 24, 2024, 12:11 PM IST
  • ಕೆಲವು ರೀತಿಯ ಸಸ್ಯಗಳ ವಾಸನೆಯನ್ನು ಹಾವುಗಳು ಇಷ್ಟಪಡುವುದಿಲ್ಲ.
  • ಇದರಿಂದ ಹಾವುಗಳು ಮನೆಗೆ ನುಸುಳುವ ಸಂಭವನೀಯತೆ ಬಹುತೇಕ ಕಡಿಮೆಯಾಗುತ್ತದೆ..
ಮನೆಯ ಮುಂದೆ ಈ ಗಿಡಗಳನ್ನು ನೆಟ್ಟರೆ ಹಾವು ಸೇರಿದಂತೆ ಯಾವುದೇ ಹುಳುಹುಪ್ಪಡಿ ಅತ್ತಕಡೆ ಸುಳಿಯುವುದಿಲ್ಲ! title=

plants that repel snakes: ಕೆಲವು ರೀತಿಯ ಸಸ್ಯಗಳ ವಾಸನೆಯನ್ನು ಹಾವುಗಳು ಇಷ್ಟಪಡುವುದಿಲ್ಲ. ಹಾಗಾಗಿ ಮನೆಗಳ ಬಳಿ ಆ ಗಿಡಗಳನ್ನು ಬೆಳೆಸಿದರೆ ಹಾವುಗಳು ಅವುಗಳ ಬಳಿ ಸುಳಿಯುವುದಿಲ್ಲ.. ಇದರಿಂದ ಹಾವುಗಳು ಮನೆಗೆ ನುಸುಳುವ ಸಂಭವನೀಯತೆ ಬಹುತೇಕ ಕಡಿಮೆಯಾಗುತ್ತದೆ.. 

ಮಾರಿಗೋಲ್ಡ್ಸ್: ನಾವು ಮಾರಿಗೋಲ್ಡ್ ಗಿಡಗಳನ್ನು ಬೆಳೆಸುವುದರಿಂದ ಸುಂದರವಾದ ಗಾರ್ಡನ್‌ ಜೊತೆಗೆ ಹಾವುಗಳಿಂದ ರಕ್ಷಣೆಯೂ ಸಿಗುತ್ತದೆ.. ಈ ಹೂವುಗಳ ವಾಸನೆ ಹಾವುಗಳಿಗೆ ವಿಷದಂತೆ ಭಾಸವಾಗುತ್ತದೆ.. ಆದ್ದರಿಂದ ಹಾವುಗಳು ಅವುಗಳ ಹತ್ತಿರ ಬರುವುದಿಲ್ಲ. ಹಾಗಾಗಿ ಮನೆ ಗೇಟ್‌ಗಳ ಸುತ್ತ ಈ ಗಿಡಗಳನ್ನು ಬೆಳೆಸುವುದು ಒಳ್ಳೆಯದು.

ಇದನ್ನೂ ಓದಿ-ಕೂದಲಿಗೆ ಡೈ ಅಲ್ಲ, ಸೋರೆಕಾಯಿಯನ್ನು ಹೀಗೆ ಬಳಸಿ !ಹತ್ತೇ ನಿಮಿಷ ಸಾಕು ಬಿಳಿ ಕೂದಲು ಕಪ್ಪಾಗಲು !

ಸ್ನೇಕ್ ಪ್ಲಾಂಟ್: ಸ್ನೇಕ್ ಪ್ಲಾಂಟ್ ಅನ್ನು ಮನೆಯೊಳಗೆ ಕೂಡ ಬೆಳೆಸಬಹುದು. ಇದಕ್ಕೆ ಹೆಚ್ಚು ಸೂರ್ಯನ ಬೆಳಕು ಬೇಕಾಗಿಲ್ಲ. ಇವು ಮನೆಗಳಲ್ಲಿ ಬಹಳ ಸುಂದರವಾಗಿ ಕಾಣುತ್ತವೆ. ಇದಲ್ಲದೆ, ಈ ಸಸ್ಯಗಳು ಬೆಳೆಯಲು ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ಈ ಗಿಡಗಳು ಮನೆಯಲ್ಲಿದ್ದರೆ ಹಾವುಗಳು ಮನೆ ಸುತ್ತ ಹಾಯುವುದು ಕಡಿಮೆಯಾಗುತ್ತದೆ.

ಲೆಮನ್‌ಗ್ರಾಸ್: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಲೆಮನ್ ಗ್ರಾಸ್ನ ಬಳಕೆ ಹೆಚ್ಚಾಗಿದೆ. ಈ ಔಷಧೀಯ ಸಸ್ಯವನ್ನು ಅಡುಗೆಯಲ್ಲಿ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಸಸ್ಯವು ಉತ್ತಮ ಪರಿಮಳವನ್ನು ಹೊರಸೂಸುತ್ತದೆ. ಈ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಿದರೆ, ಮನೆಯ ಸುತ್ತಮುತ್ತ, ಕಿಟಕಿಗಳ ಬಳಿ ಇಟ್ಟರೆ ಹಾವು ಬರುವುದಿಲ್ಲ.

 ಸರ್ಪಗಂಧ: ಈ ಸಸ್ಯವನ್ನು ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಇದನ್ನು ಮನೆಯ ಸುತ್ತ ಮುತ್ತ ನೆಟ್ಟರೆ ಹಾವುಗಳು ಸೇರಿದಂತೆ ಯಾವುದೇ ಹುಳು ಹುಪ್ಪಡಿ ಮನೆಯತ್ತ ಸುಳಿಯುವುದಿಲ್ಲ..  

ಇದನ್ನೂ ಓದಿ-ಸಿಸೇರಿಯನ್ ಹೆರಿಗೆಯಾ? ದೇಹವನ್ನು ಕಾಪಾಡಿಕೊಳ್ಳಲು ಈ ಮನೆಮದ್ದುಗಳನ್ನು ಅನುಸರಿಸಿ

ಈರುಳ್ಳಿ ಮತ್ತು ಬೆಳ್ಳುಳ್ಳಿ: ಈರುಳ್ಳಿ ಮತ್ತು ಬೆಳ್ಳುಳ್ಳಿಯ ಕಟುವಾದ ವಾಸನೆಯನ್ನು ಹಾವುಗಳು ಇಷ್ಟಪಡುವುದಿಲ್ಲ. ಹಾವುಗಳು ಈ ವಾಸನೆಯನ್ನು ಒಂದು ಕ್ಷಣವೂ ಸಹಿಸುವುದಿಲ್ಲ. ಹೀಗಾಗಿ ಮನೆಯ ಸುತ್ತ ಈರುಳ್ಳಿ, ಬೆಳ್ಳುಳ್ಳಿ ಗಿಡಗಳನ್ನು ನೆಟ್ಟರೆ ಹಾವು ಬರುವುದಿಲ್ಲ.. 

ಲ್ಯಾವೆಂಡರ್: ಲ್ಯಾವೆಂಡರ್ ನೋಡಲು ತುಂಬಾ ಸುಂದರವಾಗಿರುತ್ತದೆ. ಅವುಗಳಿಂದ ಬರುವ ಸುಗಂಧವೂ ಹಾಗೇ ಅಮಲೇರಿಸುತ್ತದೆ. ಆದರೆ ಹಾವುಗಳು ಈ ವಾಸನೆಯನ್ನು ಇಷ್ಟಪಡುವುದಿಲ್ಲ. ಮನೆಯ ಸಮೀಪ ಈ ಗಿಡಗಳನ್ನು ಬೆಳೆಸಿದರೆ ಹಾವುಗಳ ಭಯ ಇರುವುದಿಲ್ಲ..  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News