International Women's Day 2024: ಉದ್ಯೋಗಸ್ಥ ಮಹಿಳೆಯರು ಜೀವನಶೈಲಿಯಲ್ಲಿ ಮರೆತೂ ಈ ಮಿಸ್ಟಕ್ ಮಾಡಬಾರದು!

Health Tips For Working Women: ಕಾರ್ಯನಿರತ ಮಹಿಳೆಯರು ಜೀವನಶೈಲಿಗೆ ಸಂಬಂಧಿಸಿದ ಕೆಲ ತಪ್ಪುಗಳನ್ನು ಹೊರಹಾಕಬೇಕು.  (Lifestyle News In Kannada)  

Written by - Nitin Tabib | Last Updated : Mar 7, 2024, 07:27 PM IST
  • ನಾಳೆ ಮಾರ್ಚ್ 8. ಈ ದಿನದಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ರೂಪದಲ್ಲಿ ಆಚರಿಸಲಾಗುತ್ತದೆ.
  • ಈ ಸಂದರ್ಭದಲ್ಲಿ, ನಾವು ಮಹಿಳೆಯರ ಉತ್ತಮ ಆರೋಗ್ಯಕ್ಕೆ ಕೆಲ ಒಳ್ಳೆಯ ಸಲಹೆಗಳನ್ನು (Health Tips For Women) ನೀಡುತ್ತಿದ್ದು,
  • ಜೀವನಶೈಲಿಗೆ ಸಂಬಂಧಿಸಿದ ತಪ್ಪುಗಳ (Lifestyle Mistakes) ಬಗ್ಗೆ ತಿಳಿದುಕೊಂಡು, ಅವುಗಳನ್ನು ಸಮಯ ಇರುವಾಗಲೇ ತಿದ್ದುಕೊಂಡು ಮುಂದಕ್ಕೆ ಸಾಗಬೇಕು
International Women's Day 2024: ಉದ್ಯೋಗಸ್ಥ ಮಹಿಳೆಯರು ಜೀವನಶೈಲಿಯಲ್ಲಿ ಮರೆತೂ ಈ ಮಿಸ್ಟಕ್ ಮಾಡಬಾರದು! title=

International Women's Day 2024: ಇಂದಿನ ಕಾಲದಲ್ಲಿ ಬಹುತೇಕ ಮಹಿಳೆಯರು ತಮ್ಮ ಮನೆ ಹಾಗೂ ಕಚೇರಿ ಜವಾಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಎಲ್ಲವನ್ನು ಸರಿಯಾಗಿ ನೋಡಿಕೊಳ್ಳುವ ಭರದಲ್ಲಿ ಮಹಿಳೆಯರು ತಮ್ಮನ್ನು ತಾವೇ ನಿರ್ಲಕ್ಷಿಸುತ್ತಾರೆ. ಸರಿಯಾದ ಆಹಾರ ಪದ್ಧತಿಯನ್ನು ಅವರು ಅನುಸರಿಸುವುದಿಲ್ಲ ಅಥವಾ ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರ ಬಳಿಗೆ ಹೋಗುವುದಿಲ್ಲ. ಅಷ್ಟೇ ಅಲ್ಲ, ಪ್ರತಿ ಮಹಿಳೆಯು ಜೀವನಶೈಲಿಗೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಪದೇ ಪದೇ ಮಾಡುತ್ತಾರೆ, ಅದು ಅವರ ಆರೋಗ್ಯಕ್ಕೆ ಹಾನಿಕಾರಕ ಸಾಬೀತಾಗಬಹುದು. ತಮ್ಮ ಆರೋಗ್ಯದ ಬಗ್ಗೆ ಅವರು ನಿರ್ಲಕ್ಷ್ಯ ವಹಿಸಬಾರದು ಮತ್ತು ಅವರು ಅನಾರೋಗ್ಯಕ್ಕೆ ಒಳಗಾದರೆ ಸರಿಯಾದ ಸಮಯಕ್ಕೆಚಿಕಿತ್ಸೆ ಪಡೆಯಬೇಕು. ನಾಳೆ ಮಾರ್ಚ್ 8. ಈ ದಿನದಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ರೂಪದಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಾವು ಮಹಿಳೆಯರ ಉತ್ತಮ ಆರೋಗ್ಯಕ್ಕೆ ಕೆಲ ಒಳ್ಳೆಯ ಸಲಹೆಗಳನ್ನು (Health Tips For Women) ನೀಡುತ್ತಿದ್ದು, ಜೀವನಶೈಲಿಗೆ ಸಂಬಂಧಿಸಿದ ತಪ್ಪುಗಳ (Lifestyle Mistakes) ಬಗ್ಗೆ ತಿಳಿದುಕೊಂಡು, ಅವುಗಳನ್ನು ಸಮಯ ಇರುವಾಗಲೇ ತಿದ್ದುಕೊಂಡು ಮುಂದಕ್ಕೆ ಸಾಗಬೇಕು (Lifestyle News In Kannada)

ಉದ್ಯೋಗಸ್ಥ ಮಹಿಳೆಯರು ತಪ್ಪುಗಳನ್ನು ಮಾಡಬಾರರು
ಗಂಟೆಗಟ್ಟಲೆ ಡೆಸ್ಕ್ ನಲ್ಲಿ ಕುಳಿತುಕೊಳ್ಳುವುದು

ಇಂದು, ಬಹುತೇಕ ಮಹಿಳೆಯರು ಡೆಸ್ಕ್ ಜಾಬ್ ಗಳನ್ನು ಮಾಡುತ್ತಾರೆ. ಗಂಟೆಗಟ್ಟಲೆ ಒಂದೇ ಸೀಟಿನಲ್ಲಿ ಕುಳಿತುಕೊಳ್ಳುವುದು (Working Women Lifestyle Mistakes) ಆರೋಗ್ಯಕ್ಕೆ ಒಳ್ಳೆಯದಲ್ಲ. ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಬೆನ್ನು ನೋವು, ಕಾಲು ನೋವು, ಭುಜ ಮತ್ತು ಕುತ್ತಿಗೆ ನೋವು ಕೂಡ ಉಂಟಾಗುತ್ತದೆ. ಇದಲ್ಲದೆ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದರಿಂದ ಬೊಜ್ಜು ಹೆಚ್ಚಾಗುತ್ತದೆ. ಸ್ಥೂಲಕಾಯತೆಯು ತನ್ನಷ್ಟಕ್ಕೆ ತಾನೇ ಒಂದು ಕಾಯಿಲೆಯಾಗಿರದೆ, ಇದು ಅನೇಕ ಇತರ ಕಾಯಿಲೆಗಳಿಗೂ  ಕಾರಣವಾಗುತ್ತದೆ. ಉದಾಹರಣೆಗೆ, ಬೊಜ್ಜು ಥೈರಾಯ್ಡ್ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಕಾರಣವಾಗಬಹುದು.

ಜಂಕ್ ಫುಡ್ ತಿನ್ನುವುದು
ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ, ಉದ್ಯೋಗಸ್ಥ ಮಹಿಳೆಯರು ಕೆಲಸದ ಒತ್ತಡದಿಂದಾಗಿ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಹೊರಗಿನ ವಸ್ತುಗಳನ್ನು ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ಅದರಲ್ಲೂ ಜಂಕ್ ಫುಡ್, ರೆಡಿ ಫುಡ್ ಮುಂತಾದವುಗಳನ್ನು ಜನರು ಅರಿವಿಲ್ಲದೆ ಸೇವಿಸುತ್ತಾರೆ. ಇದು ಅವರ ಜೀವನಶೈಲಿಗೆ ಸಂಬಂಧಿಸಿದ ಕೆಟ್ಟ ಅಭ್ಯಾಸ ಎಂದರೆ ತಪ್ಪಾಗಲಾರದು. ಅವರು ಅದನ್ನು ಬಿಡಬೇಕು. ಮಹಿಳೆಯು ದೀರ್ಘಕಾಲದವರೆಗೆ ಜಂಕ್ ಫುಡ್ ಅನ್ನು ನಿಯಮಿತವಾಗಿ ಸೇವಿಸಿದರೆ, ಅದು ಬೊಜ್ಜುಗೆ ಕಾರಣವಾಗಬಹುದು. ಇದಲ್ಲದೆ, ಆಸಿಡ್ ರಿಫ್ಲಕ್ಸ್ ಮತ್ತು ಹೊಟ್ಟೆ ಉಬ್ಬರದಂತಹ ಅನೇಕ ಸಮಸ್ಯೆಗಳನ್ನು ಕೂಡ ತಂದೊಡ್ಡಬಹುದು.

ವಿಶ್ರಾಂತಿ ತೆಗೆದುಕೊಳ್ಳದೆ ಇರುವುದು
ಮಹಿಳೆಯರಿಗೆ ವಿಶ್ರಾಂತಿ ಬಹಳ ಮುಖ್ಯ. ಏಕೆಂದರೆ ಮನೆ ಮತ್ತು ಕಚೇರಿ ಕೆಲಸ ಎರಡರ ಸಮತೋಲನ ಕಾಯ್ದುಕೊಳ್ಳುವ ಭರದಲ್ಲಿ, ಮಹಿಳೆಯರಿಗೆ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಸಿಗುವುದಿಲ್ಲ. ಆದರೆ, ವಿಶ್ರಾಂತಿ ತೆಗೆದುಕೊಳ್ಳದಿರುವುದು ಆರೋಗ್ಯಕ್ಕೆ ಸಂಪೂರ್ಣವಾಗಿ ಒಳ್ಳೆಯದಲ್ಲ. ನೀವು ಆರೋಗ್ಯಕರ ಜೀವನವನ್ನು ಸಾಗಿಸಲು ಮತ್ತು ಕಾಯಿಲೆಗಳಿಂದ ದೂರವಿರಲು ಬಯಸುತ್ತಿದ್ದಾರೆ, ನೀವು ವಿಶ್ರಾಂತಿಗೆ ಪ್ರಾಮುಖ್ಯತೆ ನೀಡಬೇಕು. ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ದೆ ತೆಗೆದುಕೊಳ್ಳಿ. ಉತ್ತಮ ನಿದ್ರೆಯು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರೋಗಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ದೈಹಿಕ ಚಟುವಟಿಕೆ ಮಾಡದೆ ಇರುವುದು
ದೈಹಿಕ ಚಟುವಟಿಕೆಯನ್ನು ಮಾಡದಿರುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಅದರಲ್ಲೂ ಇಂದಿನ ಕಾಲದಲ್ಲಿ ಕೂತು ಕೆಲಸ ಮಾಡುವ ಸಂಸ್ಕೃತಿ ಹೆಚ್ಚಾಗಿದೆ. ಪ್ರತಿ ಮಹಿಳೆ ನಿಯಮಿತವಾಗಿ ದೈಹಿಕವಾಗಿ ಸಕ್ರಿಯವಾಗಿರಬೇಕು. ಇದಕ್ಕಾಗಿ, ವ್ಯಾಯಾಮ ಮಾಡಿ. ವ್ಯಾಯಾಮವು ಒತ್ತಡವನ್ನು ನಿವಾರಿಸುತ್ತದೆ, ಅದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಇದಲ್ಲದೆ, ನಿಯಮಿತ ವ್ಯಾಯಾಮ ಮಾಡುವ ಮೂಲಕ ಮಹಿಳೆಯರು ಅನೇಕ ಕಾಯಿಲೆಗಳಿಂದ ದೂರ ಉಳಿಯಬಹುದು. 

ಇದನ್ನೂ ಓದಿ-Kidney Detox Tips: ಮೂತ್ರಪಿಂಡಗಳ ಆರೋಗ್ಯ ರಕ್ಷಣೆಗೆ ಇಲ್ಲಿವೆ ಕೆಲ ಆರೋಗ್ಯಕರ ಜ್ಯೂಸ್ ಗಳು!

ಹೆಚ್ಚು ಕೆಫೀನ್ ಸೇವನೆ
ಮಹಿಳೆಯರ ಜೀವನ ಶೈಲಿಗೆ ಸಂಬಂಧಿಸಿದ ಮತ್ತೊಂದು ಕೆಟ್ಟ ಅಭ್ಯಾಸ ಎಂದರೆ. ಟೈಮ್ ಪಾಸ್ ಗಾಗಿ ಟೀ ಕಾಫಿ ಕುಡಿಯುತ್ತಾಳೆ ಇರುತ್ತಾರೆ. ಅನೇಕ ಮಹಿಳೆಯರು ರಾತ್ರಿ ಮಲಗುವ ಮುನ್ನ ಚಹಾ ಕುಡಿಯಲು ಇಷ್ಟಪಡುತ್ತಾರೆ. ಇದು ಒಳ್ಳೆಯ ಅಭ್ಯಾಸವೇ ಅಲ್ಲ. ಚಹಾ ಮತ್ತು ಕಾಫಿಯಲ್ಲಿ ಕೆಫೀನ್ ಇರುತ್ತದೆ. ಕೆಫೀನ್ ನಿಮಗೆ ಒಳ್ಳೆಯ ನಿದ್ರೆ ಬರದಂತೆ ತಡೆಯುತ್ತದೆ. ಆದ್ದರಿಂದ, ರಾತ್ರಿ ಮಲಗುವ ಮೊದಲು ಕೆಫೀನ್ ಅನ್ನು ಸೇವಿಸಬೇಡಿ. ಇದು ನಿಮ್ಮ ನಿದ್ದೆಗೆ ಭಂಗ ತರುತ್ತದೆ ಮತ್ತು ನೀವು ಹೆಚ್ಚು ಹೊತ್ತು ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮ ದೇಹಕ್ಕೆ ವಿಶ್ರಾಂತಿ ಪಡೆಯಲು ಆಗುವುದಿಲ್ಲ.

ಇದನ್ನೂ ಓದಿ-Weight Loss Tips: ಮನೆಯಲ್ಲಿಯೇ ಸುಲಭವಾಗಿ ತೂಕ ಇಳಿಸಿಕೊಳ್ಳಬೇಕೆ? ಇಲ್ಲಿವೆ ಕೆಲ ಆಯುರ್ವೇದ ವಿಧಾನಗಳು!

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News