ಮನೆಯಲ್ಲಿ ಈ 4 ವಿಗ್ರಹಗಳಿದ್ದರೆ ಸಂತೋಷ ಮತ್ತು ಸಮೃದ್ಧಿಯ ಜೊತೆಗೆ, ಹೆಚ್ಚಾಗಲಿದೆ ಸಂಪತ್ತು

ವಾಸ್ತು ಶಾಸ್ತ್ರದ  ಪ್ರಕಾರ ನಾವು ಮನೆಯಲ್ಲಿ ಏನೇ ಇಟ್ಟರೂ ಅದು ನಮ್ಮ ಜೀವನ ಮತ್ತು ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ.

Written by - Ranjitha R K | Last Updated : Jan 17, 2022, 12:59 PM IST
  • ಸಮೃದ್ಧಿಯನ್ನು ಹೆಚ್ಚಿಸುತ್ತದೆ
  • ಈ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಶುಭ
  • ಕುಟುಂಬ ಸಂತೋಷವಾಗಿರಲು ಸಹಾಯ ಮಾಡುತ್ತದೆ
ಮನೆಯಲ್ಲಿ ಈ 4 ವಿಗ್ರಹಗಳಿದ್ದರೆ ಸಂತೋಷ ಮತ್ತು ಸಮೃದ್ಧಿಯ ಜೊತೆಗೆ, ಹೆಚ್ಚಾಗಲಿದೆ ಸಂಪತ್ತು title=
ಈ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಶುಭ (file photo)

ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯನ್ನು ಸುಂದರವಾಗಿಸಲು ಹಲವು ರೀತಿಯ ಶೋಪೀಸ್‌ಗಳು, ಶಿಲ್ಪಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಇಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ನಾವು ಮನೆಯಲ್ಲಿ ಏನೇ ಇಟ್ಟರೂ ಅದು ನಮ್ಮ ಜೀವನ ಮತ್ತು ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ (Vastu tips), ಮನೆಯಲ್ಲಿ ಕೆಲವು ವಿಗ್ರಹಗಳನ್ನು ಇಡುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಬೆಳ್ಳಿ ಅಥವಾ ಹಿತ್ತಾಳೆ ಮೀನು:
ವಾಸ್ತು ಶಾಸ್ತ್ರದಲ್ಲಿ (Vastu Shastra), ಮೀನುಗಳನ್ನು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಿತ್ತಾಳೆ ಅಥವಾ ಬೆಳ್ಳಿಯ ಮೀನುಗಳನ್ನು (fish for good luck) ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಶುಭ ಫಲ ನೀಡುತ್ತದೆ. ಇದು ಮನೆಯಲ್ಲಿ ಸಂತೋಷವನ್ನು ತರುತ್ತದೆ. ಅದೇ ಸಮಯದಲ್ಲಿ ಸಂಪತ್ತಿನ ಹೆಚ್ಚಳಕ್ಕೂ ಕಾರಣವಾಗುತ್ತದೆ.  

ಇದನ್ನೂ ಓದಿ : ಪ್ರೇಮ, ವೈವಾಹಿಕ ಜೀವನದ ಬಗ್ಗೆ ಜಾಗರೂಕರಾಗಿರಬೇಕು ಈ ರಾಶಿಯವರು, ಭಾರೀ ಕೋಲಾಹಲ ಉಂಟು ಮಾಡಲಿದ್ದಾರೆ ಮಂಗಳ-ಶುಕ್ರ

ಲೋಹದ ಆಮೆ :
ಆಮೆಯನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಪರಿಚಲನೆಯಾಗುತ್ತದೆ. ಸಂತೋಷದ ಸಾಧನಗಳನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯವೂ (vastu tips for good health) ಉತ್ತಮವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಉತ್ತರ ದಿಕ್ಕಿಗೆ ಲೋಹದ ಆಮೆ ​​ಇಡುವುದು ಶುಭವಾಗಿರುತ್ತದೆ. 

ಗಿಣಿಯ ಪ್ರತಿಮೆ :
ವಾಸ್ತು ಶಾಸ್ತ್ರದ (Vastu tips) ಪ್ರಕಾರ ಮನೆಯಲ್ಲಿ ಗಿಳಿಯ ಪ್ರತಿಮೆಯನ್ನು ಇಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಇದಲ್ಲದೆ, ಅದೃಷ್ಟವೂ ಹೆಚ್ಚಾಗುತ್ತದೆ. ಇದನ್ನು ಸ್ಟಡಿ ರೂಮಿನಲ್ಲಿ ಇಡುವುದರಿಂದ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚುತ್ತದೆ. 

ಇದನ್ನೂ ಓದಿ : Alum Vastu Tips: ಪಟಕಕ್ಕೆ ಸಂಬಂಧಿಸಿದ ಈ ಉಪಾಯಗಳನ್ನು ಅನುಸರಿಸಿ, ಜೀವನದಲ್ಲಿನ ಕಷ್ಟಗಳಿಗೆ ಮುಕ್ತಿ ಹೇಳಿ

ಆನೆಯ ಪ್ರತಿಮೆ :
ವಾಸ್ತು ಶಾಸ್ತ್ರದಲ್ಲಿ ಆನೆಯನ್ನು ಶ್ರೀಮಂತಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವಾಗಿರುತ್ತದೆ. ಬೆಳ್ಳಿ ಅಥವಾ ಹಿತ್ತಾಳೆ ಲೋಹದಿಂದ ಮಾಡಿದ ಆನೆಯನ್ನು (elephanet statue for good luck) ಮನೆಯಲ್ಲಿ ಇಡಬೇಕು. ಅದರ ಪರಿಣಾಮದಿಂದಾಗಿ, ಮನೆಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲಾಗುತ್ತದೆ. ಅದೇ ಸಮಯದಲ್ಲಿ ಸಂಪತ್ತಿನ ಹೆಚ್ಚಳವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News