ಈ ಸೊಪ್ಪು ನಿಮ್ಮ ಕೂದಲಿಗೆ ಮಾಡುವುದು ಮ್ಯಾಜಿಕ್..ಟ್ರೈ ಮಾಡಿ ನೋಡಿ!!

Benefits of Lettuce: ನುಗ್ಗೆ ಸೊಪ್ಪು ಇದನ್ನು ಮೊರಿಂಗಾ ಎಂತಲೂ ಕರೆಯುತ್ತಾರೆ. ಈ ಸೊಪ್ಪನ್ನು ಬಳಸುವುದರಿಂದ ಕೂದನ್ನು ಬಲಶಾಲಿ ಹಾಗೂ ದಟ್ಟವಾಗಿ ಬೆಳೆಯುವಂತೆ ಮಾಡಬಹುದು. ಅದು ಹೇಗೆ ಎನ್ನುವುದನ್ನು ತಿಳಿಯಲು ಈ ಸ್ಟೋರಿ ಓದಿ..

Written by - Savita M B | Last Updated : Sep 30, 2023, 07:37 AM IST
  • ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದೆ
  • ಮಾಲಿನ್ಯ, ಕಳಪೆ ಜೀವನ ಶೈಲಿ ಹೀಗೆ ಹಲವಾರು ಕಾರಣಗಳಿಂದ ಕೂದಲು ಉದುರುತ್ತವೆ.
  • ಈ ಸಮಸ್ಯೆಗೆ ಯಾವುದೇ ಖರ್ಚಿಲ್ಲದೇ ಪರಿಹಾರ ನೀಡುತ್ತದೆ ಈ ಸೊಪ್ಪು
ಈ ಸೊಪ್ಪು ನಿಮ್ಮ ಕೂದಲಿಗೆ ಮಾಡುವುದು ಮ್ಯಾಜಿಕ್..ಟ್ರೈ ಮಾಡಿ ನೋಡಿ!! title=

Hair care tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದೆ. ಮಾಲಿನ್ಯ, ಕಳಪೆ ಜೀವನ ಶೈಲಿ ಹೀಗೆ ಹಲವಾರು ಕಾರಣಗಳಿಂದ ಕೂದಲು ಉದುರುತ್ತವೆ. ಆದರೆ ಇದನ್ನು ತಡೆಯಲು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಉತ್ಪನ್ನಗಳು ಲಭ್ಯವಿರುತ್ತವೆ ಆದರೆ ಅವುಗಳಿಂದ ಪರಿಹಾರ ಸಿಗಬಹುದು ಅಥವಾ ಸಿಗದೆಯೂ ಇರಬಹುದು. 

ಕೂದಲು ಉದುರುವ ಸಮಸ್ಯೆಗೆ ಉತ್ತಮ ಪರಿಹಾರವೆಂದರೇ ಮನೆಮದ್ದು ಅಥವಾ ಗಿಡಮೂಲಿಕೆಗಳು. ಇವುಗಳನ್ನು ಬಳಸುವುದರಿಂದ ಅಡ್ಡ ಪರಿಣಾಮಲಗಳನ್ನು ತಪ್ಪಿಸಬಹುದು ಹಾಗೆಯೇ ಯಾವುದೇ ಖರ್ಚು ವೆಚ್ಚವಿಲ್ಲದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಾದರೆ ಯಾವುದು ಆ ಗಿಡಮೂಲಿಕೆ ಅಂತೀರಾ..ಅದೇ ನುಗ್ಗೆ ಸೊಪ್ಪು.

ಇದನ್ನೂ ಓದಿ-ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಈ ಒಂದು ಎಲೆ!

ನುಗ್ಗೆ ಸೊಪ್ಪಿನಿಂದ ಕೂದಲಿನ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವುದನ್ನು ತಿಳಿಯೋಣ. 

* ಮೊರಿಂಗಾ ಅಥವಾ ನುಗ್ಗೆ ಸೊಪ್ಪು ತಲೆಹೊಟ್ಟು, ನೆತ್ತಿ ತುರಿಕೆ, ಸೋರಿಯಾಸಿಸ್, ಎಸ್ಜಿಮಾ ಮತ್ತು ಬ್ಯಾಕ್ಟೀರಿಯಾದ ಗುಳ್ಳೆಗಳಿಂದ ರಕ್ಷಿಸುತ್ತದೆ. ಈ ಮೂಲಕ ನಾವು ಉತ್ತಮವಾದ ಕೇಶರಾಶಿಯನ್ನು ಹೊಂದಬಹುದಾಗಿದೆ. 
* ನುಗ್ಗೆ ಸೊಪ್ಪು ಕೂದಲಿಗೆ ಬೇಕಾದ ಪೋಷಕಾಂಶವನ್ನು ಒಳಗೊಂಡಿರುವುದರಿಂದ ಅದು ಅತೀ ಬೇಗ ಕೂದಲಿನ ಆಳಕ್ಕೆ ಹೋಗಿ ಕೂದಲು ಅಕಾಲಿಕವಾಗಿ ಬಿಳಿಯಾವುದನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್‌ ಸಿ ಇರುವುದರಿಂದ ಇದು ಆ್ಯಂಟಿ-ಆಕ್ಸಿಡೆಂಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. 
* ನುಗ್ಗೆ ಸೊಪ್ಪಿನಲ್ಲಿ ಇರುವ ಪೋಷಕಾಂಶಗಳು ಜೀವಕೋಶಗಳ ಉತ್ಪತ್ತಿಯನ್ನು ಹೆಚ್ಚಿಸುವುದರ ಮೂಲಕ ಕೂದಲನ್ನು ಹೊಳೆಯುವಂತೆ ಮಾಡುವುದಲ್ಲದೇ ಉದುರಿದ ಕೂದಲನ್ನು ಮತ್ತೆ ಬೆಳೆಯುವಂತೆ ಮಾಡುತ್ತದೆ. 
* ನುಗ್ಗೆ ಸೊಪ್ಪು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಕೂದಲಿಗೆ ಹೆಚ್ಚಿದಾಗ ಅದರಲ್ಲಿರುವ ಒಮೆಗಾ -3 ಆಳವಾಗಿ ಕೂದಲಿಗೆ ತಲುಪಿ ಕೂದಲು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ. 

ಇದನ್ನೂ ಓದಿ-ಈ ಹೂವಿನ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿಗೆ ಸಿಗುವುದು ಶಾಶ್ವತ ಪರಿಹಾರ ! ಹಿತ್ತಲಲ್ಲೇ ಅರಳುತ್ತದೆ ಈ ಹೂವು

ನುಗ್ಗೆ ಸೊಪ್ಪನ್ನು ಕೂದಲಿಗೆ ಬಳಸುವ ವಿಧಾನ:

* ಕೂಲಿಗೆ ಬಳಸುವ ತೆಂಗಿನ ಎಣ್ಣೆ, ಹರಳೆಣ್ಣೆಯ ರೀತಿಯಲ್ಲಿಯೇ ನುಗ್ಗೆ ಸೊಪ್ಪಿನ ಎಣ್ಣೆಯನ್ನು ಬಳಸಬುದು. 
* ನುಗ್ಗೆ ಸೊಪ್ಪನ್ನು ಪುಡಿಮಾಡಿ ರೋಸ್‌ ವಾಟರ್‌, ಅಕ್ಕಿನೀರಿನ ಜೊತೆ ಮಿಶ್ರಣಮಾಡಿಯೂ ಬಳಸಬಹುದು.
* ನುಗ್ಗೆ ಸೊಪ್ಪನ್ನು ಕುದಿಸಿ ಅದರ ನೀರಿನಿಂದ ತಲೆಯನ್ನು ತೊಳೆದುಕೊಳ್ಳುವುದರಿಂದ ಕೂದಲು ಹೊಳೆಯುತ್ತವೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News