ಕೆಲವೇ ದಿನಗಳಲ್ಲಿ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಈ ಒಂದೇ ಒಂದು ಹಣ್ಣು ನಿಮ್ಮ ಆಹಾರದಲ್ಲಿರಲಿ!

Weight Loss: ಗ್ರೇಪ್ ಫ್ರೂಟ್ ಎಂದೇ ಕರೆಯಲಾಗುವ ಕಂಚಿ ಹಣ್ಣು ಪೋಷಕಾಂಶಗಳ ಆಗರವಾಗಿದೆ. ತೂಕ ಇಳಿಕೆಯಿಂದ ಹಿಡಿದು ರೋಗ ನಿರೋಧಕ ಶಕ್ತಿಯ ಹೆಚ್ಚಿಸುವವರೆಗೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಬನ್ನಿ ಕಂಚಿಹಣ್ಣು ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ (Lifestyle News In Kannada).  

Written by - Nitin Tabib | Last Updated : Aug 11, 2023, 11:14 PM IST
  • ಶರೀರದಿಂದ ಬೊಜ್ಜು ಇಳಿಕೆ ಮಾಡುವುದು ಸುಲಭದ ಮಾತಲ್ಲ.
  • ಇದಕ್ಕಾಗಿ ನಿಯಮಬದ್ಧ ಆಹಾರಶೈಲಿ ಹಾಗೂ ಸರಿಯಾದ ರೀತಿಯಲ್ಲಿ ವರ್ಕೌಟ್ ಮಾಡುವುದು ತುಂಬಾ ಆವಶ್ಯಕ.
  • ಆದರೆ, ಒಂದು ವೇಳೆ ನೀವು ಕಂಚಿಹಣ್ಣನ್ನು ಸೇವಿಸಿದರೆ ತೂಕ ವೇಗವಾಗಿ ಇಳಿಕೆಯಾಗುತ್ತದೆ.
ಕೆಲವೇ ದಿನಗಳಲ್ಲಿ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಈ ಒಂದೇ ಒಂದು ಹಣ್ಣು ನಿಮ್ಮ ಆಹಾರದಲ್ಲಿರಲಿ! title=

ಬೆಂಗಳೂರು: ಗ್ರೇಪ್ ಫ್ರೂಟ್ ಎಂದೇ ಕರೆಯಲಾಗುವ ಕಂಚಿ ಹಣ್ಣು ಪೋಷಕಾಂಶಗಳ ಆಗರವಾಗಿದೆ. ತೂಕ ಇಳಿಕೆಯಿಂದ ಹಿಡಿದು ರೋಗ ನಿರೋಧಕ ಶಕ್ತಿಯ ಹೆಚ್ಚಿಸುವವರೆಗೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಬನ್ನಿ ಕಂಚಿಹಣ್ಣು ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ (Lifestyle News In Kannada). ಇದು ದ್ರಾಕ್ಷಿ ಹಣ್ಣಿನಂತೆಯೇ ಒಂದು ಹುಳಿಯಾದ ಹಣ್ಣಾಗಿದ್ದು. ಈ ಹಣ್ಣನ್ನು ಸೇವಿಸಲು ಹಲವು ತಜ್ಞರು ಕೂಡ ಸಲಹೆ ನೀಡುತ್ತಾರೆ. 

ಕಂಚಿಹಣ್ಣಿನಲ್ಲಿ ಕಂಡುಬರುವ ಪೋಷಕಾಂಶಗಳು
ಕಂಚಿಹಣ್ಣು ಅಂಟಿಆಕ್ಸಿಡೆಂಟ್ ಹಾಗೂ ಫೈಬರ್ ನಿಂದ ಸಮೃದ್ಧವಾಗಿದೆ. ಇವುಗಳನ್ನು ಹೊರತುಪಡಿಸಿ ದ್ರಾಕ್ಷಿ ಹಣ್ಣು ಕಬ್ಬಿಣ, ವಿಟಮಿನ್ ಸಿ, ಪೊಟ್ಯಾಸಿಯಂ, ಮೇಗ್ನಿಸಿಯಂ, ಪ್ರೋಟಿನ್ ಹಾಗೂ ಮಿನರಲ್ ಗಳಂತಹ ಪೋಷಕಾಂಶಗಳಿವೆ. ಇವು ನಮ್ಮ ಶರೀರಕ್ಕೆ ಹಲವು ರೀತಿಯಿಂದ ಲಾಭ ನೀಡುತ್ತವೆ. 

ಗ್ರೇಪಫ್ರೂಟ್ ಸೇವನೆಯಿಂದಾಗುವ ಲಾಭಗಳು
ತೂಕ ಇಳಿಕೆ

ಶರೀರದಿಂದ ಬೊಜ್ಜು ಇಳಿಕೆ ಮಾಡುವುದು ಸುಲಭದ ಮಾತಲ್ಲ. ಇದಕ್ಕಾಗಿ ನಿಯಮಬದ್ಧ ಆಹಾರಶೈಲಿ ಹಾಗೂ ಸರಿಯಾದ ರೀತಿಯಲ್ಲಿ ವರ್ಕೌಟ್ ಮಾಡುವುದು ತುಂಬಾ ಆವಶ್ಯಕ. ಆದರೆ, ಒಂದು ವೇಳೆ ನೀವು ಕಂಚಿಹಣ್ಣನ್ನು ಸೇವಿಸಿದರೆ ತೂಕ ವೇಗವಾಗಿ ಇಳಿಕೆಯಾಗುತ್ತದೆ. ಏಕೆಂದರೆ ಈ ಹಣ್ಣಿನಲ್ಲಿ ಕ್ಯಾಲೋರಿ ಪ್ರಮಾಣ ಅತ್ಯಂತ ಕಡಿಮೆಯಾಗಿರುತ್ತದೆ. 

ನಿರ್ಜಲಿಕಾರಣದ ಸಮಸ್ಯೆಗೆ ರಾಮಬಾಣ
ಶರೀರದಲ್ಲಿ ಹಲವು ಕಾರಣಗಳಿಂದ ನೀರಿನಾಂಶದ ಕೊರತೆ ಒಂದು ಸಾಮಾನ್ಯ ಸಂಗತಿಯಾಗಿದೆ. ಇದರಿಂದ ಪಾರಾಗಲು ಗ್ರೇಪ್ ಫ್ರೂಟ್ ಸೇವಿಸುವುದು ಉತ್ತಮ. ಏಕೆಂದರೆ ಇದರಲ್ಲಿ ಶೇ.90ರಷ್ಟು ನೀರಿನಾಂಶ ಇರುತ್ತದೆ. 

ಇಮ್ಯೂನಿಟಿ ಬೂಸ್ಟರ್
ಕೊರೊನಾವೈರಸ್ ಸಾಂಕ್ರಾಮಿಕದ ನಂತರ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಕಷ್ಟು ಒತ್ತು ನೀಡಲಾಗುತ್ತದೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದ್ರಾಕ್ಷಿಹಣ್ಣಿನಲ್ಲಿ ಕಂಡುಬರುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ರೀತಿಯ ಸೊಂಕುಗಳಿಂದ ನಿಮ್ಮನ್ನು ಪಾರು ಮಾಡುತ್ತದೆ. 

ಇದನ್ನೂ ಓದಿ-ಯಾವುದೇ ಸಂಕೇತಗಳನ್ನು ನೀಡದೆಯೆ ಜೀವಕ್ಕೆ ಕುತ್ತು ತರುತ್ತೆ ಈ ಕಾಯಿಲೆ, ಈ ರೀತಿ ಸುಲಭವಾಗಿ ನಿಯಂತ್ರಿಸಿ!

ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ
ಹಾಳಾದ ಜೀವನಶೈಲಿ ಹಾಗೂ ಕೆಟ್ಟ ಆಹಾರದಿಂದ ಎದುರಾಗುವ ಮತ್ತೊಂದು ಸಮಸ್ಯೆ ಎಂದರೆ ಜೀರ್ಣಕ್ರಿಯೆ ಕುಂಠಿತಗೊಳ್ಳುವುದು. ಹೀಗಾಗಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ಗ್ರೇಪ್ ಫ್ರೂಟ್ ಸೇವನೆ ಅತ್ಯುತ್ತಮ. ಇದರ ಜೊತೆಗೆ ಅಸಿಡಿಟಿ ಹಾಗೂ ಗ್ಯಾಸ್ ನಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ. 

ಇದನ್ನೂ ಓದಿ-ಡೈ ಬಳಸದೆಯೇ ನಿಮ್ಮ ಬಿಳಿ ತಲೆಯನ್ನು ಕಪ್ಪಾಗಿಸಬೇಕೆ? ಇಲ್ಲಿದೆ ಸೂಪರ್ ಹಿಟ್ ಉಪಾಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News